ಕರ್ನಾಟಕದ ಶಾಸಕರ ಸಂಬಳ ಕೇಳಿ ತಲೆ ತಿರುಗಿ ಬೀಳಬೇಡಿ!

ಬೆಂಗಳೂರು, ಮಾರ್ಚ್ 30 : ಕರ್ನಾಟಕ ವಿಧಾನಸಭೆಯಲ್ಲಿ ಸೋಮವಾರ 'ಕರ್ನಾಟಕ ಶಾಸಕರ ವೇತನ, ನಿವೃತ್ತಿ ವೇತನ ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ 2015ಕ್ಕೆ' ಅನುಮೋದನೆ ಸಿಕ್ಕಿದೆ. ಮುಖ್ಯಮಂತ್ರಿ, ಸಚಿವರು, ಶಾಸಕರು, ಸಭಾಪತಿ, ವಿರೋಧ ಪಕ್ಷದ ನಾಯಕರ ವೇತನ ಹೆಚ್ಚಳವಾಗಿದೆ. ಮುಖ್ಯಮಂತ್ರಿಗಳ ಸಂಬಳ 30 ರಿಂದ 50 ಸಾವಿರಕ್ಕೆ ಏರಿಕೆಯಾಗಿದೆ.

ಸೋಮವಾರದ ಕಲಾಪದಲ್ಲಿ ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಲಾಯಿತು. ವಿಧಾನಸಭೆ ವಿಧೇಯಕಕ್ಕೆ ಅನುಮೋದನೆ ನೀಡಿದೆ. ಇದರಿಂದಾಗಿ ಮುಖ್ಯಮಂತ್ರಿಗಳ ವೇತನ 30 ಸಾವಿರದಿಂದ 50 ಸಾವಿರಕ್ಕೆ ಏರಿಕೆಯಾದರೆ, ಸಂಪುಟ ದರ್ಜೆ ಸಚಿವರ ವೇತನ ವೇತನ 25 ಸಾವಿರದಿಂದ 40 ಸಾವಿರಕ್ಕೆ ಏರಿಕೆಯಾಗಿದೆ. [ಕಲಾಪದಲ್ಲಿ ಎಚ್ಡಿಕೆ, ಸಿದ್ದರಾಮಯ್ಯ ಟಾಕ್ ಫೈಟ್]

ರಾಜ್ಯ ದರ್ಜೆ ಸಚಿವರ ವೇತನ 15 ಸಾವಿರದಿಂದ 35 ಸಾವಿರಕ್ಕೆ ಏರಿಕೆಯಾದರೆ, ಶಾಸಕರ ವೇತನ 20 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಳವಾಗಿದೆ. ವಿರೋಧ ಪಕ್ಷದ ನಾಯಕರ ವೇತನ 20 ಸಾವಿರದಿಂದ 40 ಸಾವಿರಕ್ಕೆ ಏರಿಕೆಯಾದರೆ, ಸಭಾಧ್ಯಕ್ಷರು, ಉಪ ಸಭಾಪತಿಗಳ ವೇತನವೂ ವೇತನ 20 ರಿಂದ 40 ಸಾವಿರಕ್ಕೆ ಹೆಚ್ಚಳವಾಗಿದೆ.

2011ರಲ್ಲಿ ಕರ್ನಾಟಕ ಶಾಸಕರ ವೇತನ, ನಿವೃತ್ತಿ ವೇತನ ಮತ್ತು ಭತ್ಯೆಗಳ ಕಾಯ್ದೆ-1956ಗೆ ತಿದ್ದುಪಡಿ ತಂದು ವೇತನ, ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಲಾಗಿತ್ತು. 2014 ಮೇ ತಿಂಗಳಿನಲ್ಲಿ ಎಲ್ಲಾ ಪಕ್ಷದ ಶಾಸಕರ ಗುಂಪು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ವೇತನ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿದ್ದರು. ಈ ಬಾರಿಯ ಬಜೆಟ್ ಪೂರ್ವ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ ಮುಖ್ಯಮಂತ್ರಿಗಳು ವೇತನ ಹೆಚ್ಚಳಕ್ಕೆ ಅಸ್ತು ಎಂದಿದ್ದರು.

ಮುಖ್ಯಮಂತ್ರಿಗಳ ಸಂಬಳ ಎಷ್ಟು?

ಮುಖ್ಯಮಂತ್ರಿಗಳ ಸಂಬಳ ಎಷ್ಟು?

ಮುಖ್ಯಮಂತ್ರಿಗಳ ವೇತನ 30 ಸಾವಿರದಿಂದ 50 ಸಾವಿರಕ್ಕೆ ಏರಿಕೆಯಾಗಿದೆ. ಇದು ಕೇವಲ ಮಾಸಿಕ ವೇತನ ಮಾತ್ರ ಭತ್ಯೆಗಳು ಪ್ರತ್ಯೇಕವಾಗಿದೆ.

ಸಂಪುಟ ದರ್ಜೆ ಸಚಿವರ ವೇತನ

ಸಂಪುಟ ದರ್ಜೆ ಸಚಿವರ ವೇತನ

ಸಂಪುಟ ದರ್ಜೆ ಸಚಿವರ ವೇತನ 25 ರಿಂದ 40 ಸಾವಿರಕ್ಕೆ ಏರಿಕೆಯಾಗಿದೆ. ಉಳಿದಂತೆ
* ಆತಿಥ್ಯ ಭತ್ಯೆ 1.50 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ
* ಮನೆ ಬಾಡಿಗೆ 40 ರಿಂದ 80 ಸಾವಿರಕ್ಕೆ ಹೆಚ್ಚಳ
* ವಾಹನ ಭತ್ಯೆ 750 ಲೀಟರ್‌ನಿಂದ 1000 ಲೀಟರ್‌ಗೆ ಏರಿಕೆ

ರಾಜ್ಯ ದರ್ಜೆ ಸಚಿವರು

ರಾಜ್ಯ ದರ್ಜೆ ಸಚಿವರು

ಸಂಪುಟ ದರ್ಜೆ ಸಚಿವರ ಜೊತೆ ರಾಜ್ಯ ಸಚಿವರ ವೇತನವೂ ಏರಿಕೆ ಯಾಗಿದೆ. ಸಚಿವರ ಮಾಸಿಕ ವೇತನ 15 ರಿಂದ 35 ಸಾವಿರಕ್ಕೆ ಹೆಚ್ಚಳವಾಗಿದೆ. ಉಳಿದಂತೆ

* ಆತಿಥ್ಯ ಭತ್ಯೆ 80 ಸಾವಿರದಿಂದ 2 ಲಕ್ಷಕ್ಕೆ ಏರಿಕೆ
* ಮನೆ ಬಾಡಿಗೆ 40 ರಿಂದ 80 ಸಾವಿರಕ್ಕೆ ಏರಿಕೆ
* ಮನೆ ನಿರ್ವಹಣೆಗೆ 10 ಸಾವಿರದಿಂದ 20 ಸಾವಿರ ರೂ.
* ವಾಹನ ಭತ್ಯೆ 750 ಲೀಟರ್‌ನಿಂದ 1000 ಲೀಟರ್‍ಗೆ ಏರಿಕೆ

ನಮ್ಮ ಶಾಸಕರ ಸಂಬಳ ಎಷ್ಟು?

ನಮ್ಮ ಶಾಸಕರ ಸಂಬಳ ಎಷ್ಟು?

ಶಾಸಕರ ಸಂಬಳ 20 ಸಾವಿರದಿಂದ 25 ಸಾವಿರಕ್ಕೆ ಏರಿಕೆಯಾಗಿದೆ. ಉಳಿದಂತೆ

* ಕ್ಷೇತ್ರದ ಪ್ರಯಾಣ ಭತ್ಯೆ 25 ಸಾವಿರದಿಂದ 40 ಸಾವಿರಕ್ಕೆ ಏರಿಕೆ
* ದೂರವಾಣಿ ವೆಚ್ಚ 15 ಸಾವಿರದಿಂದ 20 ಸಾವಿರಕ್ಕೆ ಏರಿಕೆ
* ಕ್ಷೇತ್ರ ಭತ್ಯೆ 15 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಳ
* ಪ್ರಯಾಣ ಭತ್ಯೆ ಪ್ರತಿ ಕಿ.ಮೀ 20 ರೂ.ನಿಂದ 25 ರೂ.ಗೆ ಹೆಚ್ಚಳ
* ಹೊರ ರಾಜ್ಯ ಭತ್ಯೆ 1,500 ರೂ ನಿಂದ 2 ಸಾವಿರಕ್ಕೆ ಏರಿಕೆ [ಒಟ್ಟು ಶಾಸಕರಿಗೆ ಮಾಸಿಕ 1.25 ಲಕ್ಷ ರೂ.ದೊರೆಯಲಿದೆ]

ವಿರೋಧ ಪಕ್ಷದ ನಾಯಕರು

ವಿರೋಧ ಪಕ್ಷದ ನಾಯಕರು

ವಿರೋಧ ಪಕ್ಷದ ನಾಯಕರ ವೇತನವೂ ಹೆಚ್ಚಳವಾಗಿದೆ.

* ವೇತನ 20 ಸಾವಿರದಿಂದ 40 ಸಾವಿರಕ್ಕೆ ಏರಿಕೆ
* ಆತಿಥ್ಯ ಭತ್ಯೆ 1 ಲಕ್ಷದಿಂದ 2 ಲಕ್ಷಕ್ಕೆ ಏರಿಕೆ
* ವಾಹನ ಭತ್ಯೆ 750 ಲೀಟರ್‌ನಿಂದ 1000 ಲೀಟರ್‌ಗೆ ಏರಿಕೆ

ಸಭಾಧ್ಯಕ್ಷರು, ಉಪ ಸಭಾಪತಿಗಳು

ಸಭಾಧ್ಯಕ್ಷರು, ಉಪ ಸಭಾಪತಿಗಳು

ಸಭಾಧ್ಯಕ್ಷರು ಮತ್ತು ಉಪ ಸಭಾಪತಿಗಳ ವೇತನ 20 ರಿಂದ 40 ಸಾವಿರಕ್ಕೆ ಹೆಚ್ಚಳವಾಗಿದೆ. ಉಳಿದಂತೆ

* ಆತಿಥ್ಯ ಭತ್ಯೆ 2 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ
* ಮನೆ ಬಾಡಿಗೆ 40 ಸಾವಿರದಿಂದ 80 ಸಾವಿರಕ್ಕೆ ಹೆಚ್ಚಳ
* ಮನೆ ನಿರ್ವಹಣೆಗೆ 10 ಸಾವಿರದಿಂದ 20 ಸಾವಿರಕ್ಕೆ ಏರಿಕೆ
* ವಾಹನ ಭತ್ಯೆ 750 ಲೀಟರ್‌ನಿಂದ 1000 ಲೀಟರ್‍ಗೆ ಏರಿಕೆ

ವೇತನ ಎಷ್ಟಿತ್ತು?, ಎಷ್ಟಾಯಿತು?

ವೇತನ ಎಷ್ಟಿತ್ತು?, ಎಷ್ಟಾಯಿತು?

2005ರಲ್ಲಿ ಶಾಸಕರ ಮೂಲ ವೇತನ 8 ಸಾವಿರ ರೂ. ಇತ್ತು. 2009ರಲ್ಲಿ ಇದನ್ನು 10 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ನಂತರ 2011ರಲ್ಲಿ 20ಸಾವಿರಕ್ಕೆ ಏರಿಸಲಾಗಿತ್ತು. ಮೂರು ವರ್ಷಗಳ ನಂತರ ಈ ಮೂಲ ವೇತನ 25 ಸಾವಿರಕ್ಕೆ ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+