Breaking; ಹಿಜಾಬ್ ವಿವಾದ, ಮಧ್ಯಂತರ ಆದೇಶ ಪ್ರಕಟ

ಬೆಂಗಳೂರು, ಫೆಬ್ರವರಿ 10; ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ 6 ಅರ್ಜಿಗಳ ವಿಚಾರಣೆ ಕರ್ನಾಟಕ ಹೈಕೋರ್ಟ್‌ನ ವಿಶೇಷ ಪೀಠದಲ್ಲಿ ಗುರುವಾರ ನಡೆಯಿತು.

ಗುರುವಾರ ಮಧ್ಯಾಹ್ನ 2.30ಕ್ಕೆ ಆರಂಭವಾದ ವಿಚಾರಣೆ 4.40ರ ತನಕ ನಡೆಯಿತು. ಸೋಮವಾರ ಮಧ್ಯಾಹ್ನ 2.30ಕ್ಕೆ ಅರ್ಜಿಯ ವಿಚಾರಣೆಯನ್ನು ಮುಂದೂಡಿದ ಕೋರ್ಟ್ ಮಧ್ಯಂತರ ಆದೇಶವನ್ನು ನೀಡಿತು. ಸೋಮವಾರ ಶಾಲಾ, ಕಾಲೇಜುಗಳನ್ನು ಆರಂಭಿಸಬಹುದು ಎಂದು ಹೇಳಿತು.

ನ್ಯಾಯಾಲಯದ ಮುಂದಿನ ತೀರ್ಮಾನ ಬರುವ ತನಕ ಧಾರ್ಮಿಕ ಗುರುತು ತೋರಿಸುವ ಬಟ್ಟೆಯನ್ನು ವಿದ್ಯಾರ್ಥಿಗಳು ಹಾಕುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ ಆದೇಶ ನೀಡಿದರು.

Karnataka Hijab Row : High Court Says Colleges Can Open but No Religious Dress to Be Worn; Matter to Be Heard on Monday Again.

ಬುಧವಾರ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರ ಏಕಸದಸ್ಯ ಪೀಠ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿತ್ತು. ಅರ್ಜಿಗಳ ವಿಚಾರಣೆಗೆ ವಿಶೇಷ ಪೂರ್ಣ ಪೀಠವನ್ನು ರಚನೆ ಮಾಡಲಾಗಿತ್ತು.

ಗುರುವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ ನೇತೃತ್ವದ ವಿಶೇಷ ಪೀಠ ಅರ್ಜಿ ವಿಚಾರಣೆ ಆರಂಭಿಸಿತು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಪೀಠದಲ್ಲಿದ್ದಾರೆ.

ಅರ್ಜಿಯ ವಿಚಾರಣೆ ವೇಳೆ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹಿಜಾಬ್‌ಗೆ ಪ್ರತಿಯಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬರುತ್ತಿದ್ದಾರೆ. ಇದರಿಂದಾಗಿ ರಾಜ್ಯಾದ್ಯಂತ ಗಲಭೆ ವಾತಾವರಣ ಇದೆ. ಸರ್ಕಾರ ಹೈಸ್ಕೂಲ್ ಮತ್ತು ಕಾಲೇಜುಗಳಿಗೆ ಶುಕ್ರವಾರದ ತನಕ ರಜೆ ನೀಡಿದೆ ಎಂದರು.

ನಾವು ಕಾಲೇಜುಗಳನ್ನು ಆರಂಭಿಸಲು ಸಿದ್ಧರಾಗಿದ್ದೇವೆ. ಆದರೆ ಒಬ್ಬರು ಹಿಜಾಬ್ ಮತ್ತೊಬ್ಬರು ಕೇಸರಿ ಶಾಲು ಧರಿಸಿ ಬಂದರೆ ಇಂತಹ ಪರಿಸ್ಥಿತಿಯಲ್ಲಿ ಕಾಲೇಜು ಆರಂಭಿಸುವುದು ಕಷ್ಟ. ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿದ್ದು ಅವರು ಶಿಕ್ಷಣದಿಂದ ವಂಚಿತರಾಗಬಾರದು ಎಂದರು.

ಅರ್ಜಿ ವಿಚಾರಣೆ ಮುಂದೂಡುವ ಮೊದಲು ಮಧ್ಯಂತರ ಆದೇಶ ನೀಡಿದ ಮುಖ್ಯ ನ್ಯಾಯೂರ್ತಿಗಳು, ರಾಜ್ಯದಲ್ಲಿ ಶಾಲೆಗಳು ಮರು ಆರಂಭವಾಗಬೇಕು. ವಿದ್ಯಾರ್ಥಿಗಳು ಹಿಜಾಬ್ ಅಥವಾ ಕೇಸರಿ ಸಾಲು ಸೇರಿದಂತೆ ಧಾರ್ಮಿಕ ಆಚರಣೆ ಭಾಗದ ಯಾವುದೇ ಉಡುಪು ಧರಿಸಿ ಶಾಲೆಗೆ ಹಾಜರಾಗಬಾರದು.

ಈ ಸಂಬಂಧ ವಿದ್ಯಾರ್ಥಿಗಳಿಗೆ ಯಾರೂ ಒತ್ತಡ ಹೇರಬಾರದು ನೀಡಬಾರದು. ರಾಜ್ಯದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲಸಬೇಕು. ಆ ನಿಟ್ಟಿನಲ್ಲಿ ಮಧ್ಯಂತರ ಆದೇಶ ಮಾಡಲಾಗುತ್ತದೆ. ಅಗತ್ಯವಾದರೆ ಪ್ರಕರಣವನ್ನು ಪ್ರತಿದಿನದ ಆಧಾರದ ಮೇಲೆ ವಿಚಾರಣೆ ನಡೆಸಲಾಗುತ್ತದೆ ಎಂದು ಮೌಖಿಕವಾಗಿ ತಿಳಿಸಿತು.

ಇನ್ನು ಗುರುವಾರ ಅರ್ಜಿದಾರರ ಪರವಾಗಿ ಸಂಜಯ್ ಹೆಗ್ಡೆ, ದೇವದತ್ ಕಾಮತ್ ಸಹ ವಾದ ಮಂಡನೆ ಮಾಡಿದರು. ಸುಪ್ರೀಂಕೋರ್ಟ್, ವಿವಿಧ ಹೈಕೋರ್ಟ್‌ಗಳ ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು. ಹಿಜಾಬ್ ಧರಿಸಲು ಅವಕಾಶ ನೀಡಿ ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.

Recommended Video

      ಯೋಗಿಗೆ ಶುರುವಾಗಿರೋ ಭಯ ಏನು ಅಂತಾ ಹೇಳಿದ ಕೇರಳ CM ಪಿಣರಾಯಿ ವಿಜಯನ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+