KRS Dam: ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿಮಳೆ; ಕೆ ಆರ್‌ ಎಸ್‌ ಡ್ಯಾಂನ ಒಳಹರಿವಿನಲ್ಲಿ ದಿಢೀರ್ ಏರಿಕೆ

ಮಂಡ್ಯ, ಜುಲೈ 20: ಸದ್ಯ ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿರುವುದರಿಂದ ಕೆ.ಆರ್.ಎಸ್ ಡ್ಯಾಂ ನೀರಿನ ಮಟ್ಟ ಏರಿಕೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ನಿರಂತವಾಗಿ ಸುರಿಯುತ್ತಿದೆ. ಪರಿಣಾಮ ಕಾವೇರಿ ಒಡಲು ತುಂಬಿಸಿಕೊಳ್ಳುತ್ತಿದ್ದು, ರೈತರು ಸಂತಸದಲ್ಲಿದ್ದಾರೆ.

ಕಳೆದ 15 ದಿನಗಳಿಂದ ನಿರಂತರ ಮಳೆಯಿಂದಾಗಿ ಹಳ್ಳ, ನದಿಗಳು ತುಂಬುತ್ತಿವೆ. ಇತ್ತ ಕೃಷ್ಣರಾಜ ಸಾಗರದ ಸುತ್ತಲೂ ಮಳೆಯ ಆರ್ಭಟ ಜೋರಾಗಿದ್ದು, ಕಾವೇರಿ ಒಡಲು ಭರ್ತಿಯಾಗಿದೆ. ಇದರ ಪರಿಣಾಮವಾಗಿ ಕೆಆರ್‌ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.

Karnataka Heavy Rain Effects KRS Dam Water Level Rise

ಇನ್ನೂ ಕೆಆರ್​​ಎಸ್​ ಡ್ಯಾಂನ ನೀರಿನ ಮಟ್ಟ 124.80 ಅಡಿಯಷ್ಟಿದ್ದು, ಇಂದು ಮಳೆಯಿಂದಾಗಿ 120.00 ಅಡಿಯಷ್ಟು ಏರಿಕೆ ಕಂಡಿದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಇಂದು 42.916 ಟಿಎಂಸಿ ಸಾಮರ್ಥ್ಯದಷ್ಟಿದೆ. ಇನ್ನು ಡ್ಯಾಂನ ಒಳಹರಿವು 51,374 ಕ್ಯೂಸೆಕ್ ಇದ್ದು, 4,714 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಇತ್ತ ಎಡೆಬಿಡದೆ ಧಾರಾಕಾರ ಮಳೆ ಮುಂದುವರಿದಿದ್ದು, ಕೃಷ್ಣರಾಜ ಅಣೆಕಟ್ಟೆ ಭರ್ತಿಯಾಗುತ್ತಿದ್ದು, ಮುಂಜಾಗೃತ ಕ್ರಮವಾಗಿ ಡ್ಯಾಂನಿಂದ ನದಿಗೆ ನೀರು ಬಿಡುಗಡೆ ಮಾಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 120.00 ಅಡಿ.
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ.
ಇಂದಿನ ಸಾಮರ್ಥ್ಯ - 42.916 ಟಿಎಂಸಿ
ಒಳ ಹರಿವು - 51,374 ಕ್ಯೂಸೆಕ್
ಹೊರ ಹರಿವು - 4,714 ಕ್ಯೂಸೆಕ್

ಇಂದಿನ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ

ಒಳ ಹರಿವು : 69724 ಕ್ಯೂಸೆಕ್
ಹೊರ ಹರಿವು : 0000 ಕ್ಯೂಸೆಕ್
ಗರಿಷ್ಟ ಮಟ್ಟ : 1819 ಅಡಿ
ಇಂದಿನ ಮಟ್ಟ : 1794.50 ಅಡಿ
ಒಟ್ಟು : 151.64 ಟಿಎಂಸಿ
ಇಂದು : 82.42 ಟಿಎಂಸಿ

ಇಂದಿನ ತುಂಗಾ ಜಲಾಶಯದ ನೀರಿನ ಮಟ್ಟ

ಒಳ ಹರಿವು : 63744 ಕ್ಯೂಸೆಕ್
ಹೊರ ಹರಿವು : 63744 ಕ್ಯೂಸೆಕ್
ಗರಿಷ್ಟ ಮಟ್ಟ : 588.24 ಮೀ
ಇಂದಿನ ಮಟ್ಟ 588.24 ಮೀ
ಒಟ್ಟು : 3.24 ಟಿಎಂಸಿ
ಇಂದು : 3.24 ಟಿಎಂಸಿ

ಇಂದಿನ ಹೇಮಾವತಿ ಜಲಾಶಯದ ನೀರಿನ ಮಟ್ಟ

ಇಂದಿನ‌ ಮಟ್ಟ - 2918.80 ಅಡಿ
ಗರಿಷ್ಠ ಮಟ್ಟ - 2922 ಅಡಿ
ಒಟ್ಟು ಸಂಗ್ರಹ ಸಾಮರ್ಥ್ಯ - 37.103 ಟಿಎಂಸಿ
ಇಂದಿನ ಸಂಗ್ರಹ - 34.057 ಟಿಎಂಸಿ
ಒಳಹರಿವು - 40267 ಕ್ಯೂಸೆಕ್
ಹೊರಹರಿವು - 12079 ಕ್ಯೂಸೆಕ್

ಇಂದಿನ ಭದ್ರಾ ಜಲಾಶಯದ ನೀರಿನ ಮಟ್ಟ

ಒಳ ಹರಿವು : 46876 ಕ್ಯೂಸೆಕ್
ಹೊರ ಹರಿವು : 186 ಕ್ಯೂಸೆಕ್
ಗರಿಷ್ಟ ಮಟ್ಟ : 186 ಅಡಿ
ಇಂದಿನ ಮಟ್ಟ 162.3 ಅಡಿ
ಒಟ್ಟು : 71.5 ಟಿಎಂಸಿ
ಇಂದು : 45.04 ಟಿಎಂಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+