• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿ ಕಾಲಿಂಗ್‌: ಜಗ್ಗಿ ವಾಸುದೇವ್‌ಗೆ ಕೋರ್ಟ್‌ನಿಂದ ಸಿಹಿ ಸುದ್ದಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 7: ಸದ್ಗುರು ಜಗ್ಗಿ ವಾಸುದೇವ್‌ ನೇತೃತ್ವದ ಇಶಾ ಫೌಂಡೇಶನ್‌ ಸಂಸ್ಥೆಯ ಕಾವೇರಿ ಕಾಲಿಂಗ್ ಯೋಜನೆಯಡಿಯಲ್ಲಿ ಗಿಡ ನೆಡಲು ದೇಣಿಗೆ ಸಂಗ್ರಹದ ಬಗ್ಗೆ ಆಕ್ಷೇಪವೆತ್ತಲಾಗಿತ್ತು. ದೇಣಿಗೆ ಸಂಗ್ರಹ ಕುರಿತಂತೆ ಸಲ್ಲಿಸಲಾಗಿದ್ದ ತಕರಾರು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಜಾಗೊಳಿಸಿದೆ. ಈ ಮೂಲಕ ಜಗ್ಗಿ ವಾಸುದೇವ್‌ಗೆ ಕೋರ್ಟ್‌ನಿಂದ ಸಿಹಿ ಸುದ್ದಿ ಸಿಕ್ಕಿದೆ.

ಕಾವೇರಿ ಕಾಲಿಂಗ್‌ ಯೋಜನೆಗೆ ಹೆಸರಿನಲ್ಲಿ ಗಿಡ ನೆಡಲು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಂಡಿದೆ. ಎ. ವಿ ಅಮರನಾಥನ್‌ ಅವರು ದೇಣಿಗೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ಸೆ.7ಕ್ಕೆ ತೀರ್ಪು ಕಾಯ್ದಿರಿಸಿದ್ದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ಗಿಡ ನೆಡುವ ಸಂಬಂಧದ ಇಶಾ ಫೌಂಡೇಶನ್‌ ಕೈಗೊಂಡಿರುವ ಕಾರ್ಯಕ್ರಮದಲ್ಲಿ ಯಾವುದೇ ತಪ್ಪು ಕಂಡು ಬಂದಿಲ್ಲ ಎಂದು ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

"ಈ ಪ್ರಕರಣದಲ್ಲಿ ಅರಣ್ಯ ನಾಶದಿಂದ ಸಂಭವಿಸುತ್ತಿರುವ ವಿಪತ್ತು ಹಾಗೂ ಅರಣ್ಯದ ಅಗತ್ಯತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿಸ್ತೃತವಾಗಿ ಚರ್ಚಿಸಿದೆ. ಹೀಗಾಗಿ, ಮಾನವ ಕುಲ ಮತ್ತು ಭೂಮಿಯನ್ನು ರಕ್ಷಿಸಲು ಇರುವ ಏಕೈಕ ಅವಕಾಶ ಅರಣ್ಯೀಕರಣ. ಈ ನೆಲೆಯಲ್ಲಿ ಮೂರನೇ ಪ್ರತಿವಾದಿಯಾದ ಇಶಾ ಔಟ್‌ರೀಚ್‌ ಕೈಗೊಂಡಿರುವ ಅರಣ್ಯೀಕರಣದ ಕಾರ್ಯಕ್ರಮಕ್ಕೆ ನಾವು ಮೆಚ್ಚುಗೆಯನ್ನು ದಾಖಲಿಸಬೇಕಾಗುತ್ತದೆ. ಇದನ್ನು ಪ್ರಶ್ನಿಸಿರುವ ಅರ್ಜಿ ವಜಾಕ್ಕೆ ಅರ್ಹವಾಗಿದೆ'' ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.


ಇಶಾ ಫೌಂಡೇಶನ್‌ ಮೇಲ್ಮನವಿ ಸಲ್ಲಿಸಿತ್ತು
ಕಳೆದ ವರ್ಷದ ಅಕ್ಟೋಬರ್‌ 15ರಂದು ಕರ್ನಾಟಕ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಇಶಾ ಫೌಂಡೇಶನ್‌ ಮೇಲ್ಮನವಿ ಸಲ್ಲಿಸಿತ್ತು. ಅಂದು, ಹೈಕೋರ್ಟ್‌ ಇಶಾ ಫೌಂಡೇಶನ್‌ನ ಕಾವೇರಿ ಕಾಲಿಂಗ್‌ ಯೋಜನೆಯ ಕುರಿತಾದ ಮನವಿಯನ್ನು ಸ್ವಯಂಪ್ರೇರಿತ ಮನವಿ ಎಂದು ಪರಿಗಣಿಸಲು ನಿರ್ಧರಿಸಿತ್ತು.

ಬತ್ತಿರುವ ನದಿಗಳ ಪುನರುಜ್ಜೀವನ, ನದಿ ಜೋಡಣೆ ಕಾವೇರಿ ಕಾಲಿಂಗ್‌ನ ಯೋಜನೆಯ ಭಾಗವಾಗಿದೆ. ಸರ್ಕಾರಿ ಭೂಮಿಯಲ್ಲಿ ಗಿಡ ನೆಡುವುದರ ಜೊತೆಗೆ ಇದಕ್ಕಾಗಿ ಇಶಾ ಫೌಂಡೇಶನ್‌ ಜನರಿಂದ ದೇಣಿಗೆ ಸಂಗ್ರಹಿಸುತ್ತಿದೆ, ಸರ್ಕಾರಿ ಜಾಗದಲ್ಲಿ ಖಾಸಗಿ ಸಂಸ್ಥೆ ಗಿಡ ನೆಡಲು ಅವಕಾಶ ಮಾಡಿಕೊಡಲಾಗುತ್ತಿದೆ, ಇದಕ್ಕಾಗಿ ಸಾರ್ವಜನಿಕರಿಂದ 10,626 ಕೋಟಿ ರು ಗಳಷ್ಟು ದೇಣಿಗೆಯನ್ನು ಇಶಾ ಫೌಂಡೇಶನ್‌ ಸಂಗ್ರಹಿಸಲಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿತ್ತು.

Karnataka HC dismisses plea against Isha Foundations Cauvery Calling donation

ಆದರೆ, ಸರ್ಕಾರಿ ಸ್ವತ್ತನ್ನು ಈ ಯೋಜನೆಗೆ ಬಳಸಲಾಗಿಲ್ಲ ಎಂದು ಈ ಹಿಂದಿನ ಯಡಿಯೂರಪ್ಪ ಸರ್ಕಾರ ಕೂಡಾ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿತ್ತು. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ಅರಣ್ಯ ಇಲಾಖೆಯು 2 ಕೋಟಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದ್ದನ್ನು ಇಶಾ ಫೌಂಡೇಶನ್ ತನ್ನ ಪ್ರಚಾರಕ್ಕೆ ಬಳಸಿಕೊಂಡಿದೆ ಎಂಬ ಆರೋಪ ಕೂಡಾ ಕೇಳಿ ಬಂದಿತ್ತು.

ಕಾವೇರಿ ಕಾಲಿಂಗ್:

ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ 253 ಕೋಟಿ ಮರಗಳನ್ನು ಬೆಳೆಸುವ ಯೋಜನೆಯನ್ನು ಈಶ ಫೌಂಡೇಷನ್ 'ಕಾವೇರಿ ಕೂಗು' ಅಭಿಯಾನದಡಿ ಹಮ್ಮಿಕೊಂಡಿದೆ. ಹೀಗೆ ನೆಡಲಾಗುವ ಪ್ರತಿ ಸಸಿಗೆ 42 ರೂ. ನಂತೆ ಜನರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕಾಗಿ ರಾಷ್ಟ್ರವ್ಯಾಪಿ ರಾಲಿಗಳನ್ನು ಕೂಡ ನಡೆಸಲಾಗಿದೆ. ಹೀಗೆ ಜನರಿಂದ ಸಂಗ್ರಹಿಸಲಾಗುವ ಹಣದ ಪ್ರಮಾಣವು 10,626 ಕೋಟಿ ರೂ. ಮೀರಲಿದೆ. ನದಿ ರಕ್ಷಣೆಯ ಕಾರ್ಯ ಮತ್ತು ಮರ ಬೆಳೆಸುವ ವಿಚಾರಗಳಿಗೆ ತಮ್ಮ ಆಕ್ಷೇಪವಿಲ್ಲ. ಆದರೆ ಸರ್ಕಾರದ ಜಮೀನಿನಲ್ಲಿ ಗಿಡಗಳನ್ನು ನೆಡಲು ಜನರಿಂದ ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಸರ್ಕಾರದ ಸ್ಪಷ್ಟನೆ:
ಈ ಕುರಿತು ಪತ್ರಿಕೆಗಳಲ್ಲಿ ಸಾರ್ವಜನಿಕ ಸುತ್ತೋಲೆ ಹೊರಡಿಸಿರುವ ರಾಜ್ಯ ಅರಣ್ಯ ಇಲಾಖೆ, ''ಈಶಾ ಫೌಂಡೇಷನ್/ಈಶಾ ಔಟ್‌ರೀಚ್ ಆರಂಭಿಸಿರುವ 'ಕಾವೇರಿ ಕೂಗು' ಎಂಬ ಹೆಸರಿನ ಯೊಜನೆಯು ಕರ್ನಾಟಕ ಸರ್ಕಾರದ ಯೋಜನೆಯಲ್ಲ ಎಂದು ಪ್ರತಿಯೊಬ್ಬರಿಗೂ ಸ್ಪಷ್ಟೀಕರಣ ನೀಡುತ್ತಿದ್ದೇವೆ'' ಎಂದು ತಿಳಿಸಿತ್ತು. ಈ ಯೋಜನೆಯ ಭಾಗವಾಗಿ ಗಿಡಗಳನ್ನು ನೆಡಲು ಕರ್ನಾಟಕ ಸರ್ಕಾರವು ಯೋಜನೆಗೆ ಅನುದಾನವನ್ನಾಗಲೀ, ಸರ್ಕಾರಿ ಭೂಮಿ ಅಥವಾ ಅರಣ್ಯ ಭೂಮಿಯನ್ನಾಗಲೀ ನೀಡಿಲ್ಲ ಮತ್ತು ಗಿಡಗಳನ್ನು ನೆಡುವುದು ರೈತರ ಖಾಸಗಿ ಜಮೀನಿನಲ್ಲಿ ಮಾತ್ರವೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸುತ್ತೇವೆ'' ಎಂದು ಹೇಳಿದೆ.

ತಲಕಾವೇರಿಯಿಂದ ತಿರುವರೂರುವರೆಗೆ
ಕಾವೇರಿ ಕೂಗು ಅಭಿಯಾನದ ಮೂಲಕ ಕಾವೇರಿಯ ಹುಟ್ಟೂರಾದ ತಲಕಾವೇರಿಯಿಂದ ತಿರುವರೂರುವರೆಗಿನ 639.1 ಕಿ.ಮೀ. ವ್ಯಾಪ್ತಿಯಲ್ಲಿ ಮರಗಳನ್ನು ನೆಡುವುದು ಈ ಯೋಜನೆಯ ಉದ್ದೇಶ. ಅದಕ್ಕಾಗಿ ಸೆ. 3, 2019ರಂದು ಬೈಕ್ ರಾಲಿಗೆ ಚಾಲನೆ ನೀಡಲಾಗಿತ್ತು.

   ವೀಕೆಂಡ್ ಕರ್ಫ್ಯೂ ಹಿಂದಿನ ಉದ್ದೇಶ ಅರ್ಥವಾಗ್ತಿಲ್ಲ:ಯು.ಟಿ ಖಾದರ್ | Oneindia Kannada

   ಅನೇಕ ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಜತೆಗೆ ಒಂದು ಗಿಡಕ್ಕೆ 42 ರೂ. ನಂತೆ ದೇಣಿಗೆ ನೀಡುವಂತೆ ಕರೆ ನೀಡಿವೆ. ಬುಧವಾರದ ವೇಳೆಗೆ ಈಶ ವೆಬ್‌ಸೈಟ್ ನೀಡಿರುವ ಮಾಹಿತಿ ಪ್ರಕಾರ ಸುಮಾರು 4 ಕೋಟಿ ಮರಗಳನ್ನು ನೆಡಲು ಸಾಲುವಷ್ಟು ಹಣ ಸಂಗ್ರಹವಾಗಿದೆ. ವೆಬ್‌ಸೈಟ್‌ನಲ್ಲಿ ಮೂರು ಕ್ರೌಡ್ ಫಂಡಿಂಗ್ ಲಿಂಕ್‌ಗಳನ್ನು ನೀಡಲಾಗಿದ್ದು, 58 ಲಕ್ಷ ಸಂಗ್ರಹಿಸಲಾಗಿದೆ. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)

   English summary
   Karnataka High Court bench today(sept 7) dismissed a PIL plea against Isha Foundation's 'Cauvery Calling' donation collection.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X