ಶಿಕ್ಷಕರ ನೇಮಕಾತಿ ಕೌನ್ಸಿಲಿಂಗ್; ಅಭ್ಯರ್ಥಿಗಳಿಗೆ ಸೂಚನೆಗಳು

ಬೆಂಗಳೂರು, ಅಕ್ಟೋಬರ್ 20: ಕರ್ನಾಟಕದ ಶಿಕ್ಷಣ ಇಲಾಖೆ 2022ರ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿ) ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಆಯ್ಕೆಪಟ್ಟಿಯಲ್ಲಿ ಆಯ್ಕೆಗೊಂಡಿರುವ 13,352 ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಕೌನ್ಸಿಲಿಂಗ್‌ ಪ್ರಕ್ರಿಯೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.

ದಿನಾಂಕ 08/03/2023 ರಂದು ಪ್ರಕಟಿತ 1:1 ಆಯ್ಕೆ ಪಟ್ಟಿಯ ಕೌನ್ಸಿಲಿಂಗ್‌ಗೆ ಅರ್ಹ ಅಭ್ಯರ್ಥಿಗಳ ವಿವರ https://schooleducation.karnataka.gov.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

teacher-counseling-directions

ಆಯ್ಕೆಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಸ್ಥಳನಿಯುಕ್ತಿ ಕೌನ್ಸಿಲಿಂಗ್‌ 21/10/2023 ರಿಂದ ಬೆಳಗ್ಗೆ 10.30ಗಂಟೆಯಿಂದ ಜಿಲ್ಲೆಗಳಲ್ಲಿನ ಆಯಾ ಜಿಲ್ಲಾ ನೇಮಕಾತಿ ಪ್ರಾಧಿಕಾರಿಯವರಾದ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರ ಕಛೇರಿಯಲ್ಲಿ ನಡೆಸಲಾಗುತ್ತದೆ. ನೇಮಕಾತಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ.

ಅಭ್ಯರ್ಥಿಗಳಿಗೆ ಕಡ್ಡಾಯವಾದ ಸೂಚನೆಗಳು

* ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುವ ವಿವರಗಳು ನೇಮಕಾತಿ ಪ್ರಾಧಿಕಾರಿಯವರಾದ ಆಯಾ ಉಪನಿರ್ದೇಶಕರು (ಆಡಳಿತ)ರವರ ಪರವಾಗಿ ಅಭ್ಯರ್ಥಿಗಳ ಮಾಹಿತಿಗೆ ಪ್ರಕಟಿಸಲಾಗಿರುವ ವಿವರಗಳಾಗಿರುತ್ತದೆ.

* ಇದು ನೇಮಕಾತಿ ಪ್ರಾಧಿಕಾರಿಯಾಗಿರುವ ಆಯಾ ಉಪನಿರ್ದೇಶಕರು (ಆಡಳಿತ) ರವರು ಅಭ್ಯರ್ಥಿಗಳ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನಿಯಮಾನುಸಾರ ಅಂತಿಮಗೊಳಿಸಿರುವ ವಿವರಗಳಾಗಿರುತ್ತದೆ.

* ಇದು, ರಿಟ್ ಅಪೀಲ್ ಸಂಖ್ಯೆ: 305/2023 ರಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ದಿನಾಂಕ: 12.10.2023 ರಲ್ಲಿ ನೀಡಿರುವ ತೀರ್ಪಿನ ಅನುಸಾರ ಆಯಾ ನೇಮಕಾತಿ ಪ್ರಾಧಿಕಾರಿಯವರು ಅಂತಿಮಗೊಳಿಸಿ ದೃಢೀಕರಿಸಿರುವ ವಿವರಗಳಾಗಿರುತ್ತದೆ.

* ಆಯಾ ಜಿಲ್ಲಾ ಉಪನಿರ್ದೇಶಕರ ಕಛೇರಿಗಳ ವಿಳಾಸ ಮತ್ತು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ವಿವರಗಳನ್ನು ಇಲಾಖಾ ವೆಬ್‌ಸೈಟ್‌ನಿಂದ 'ನಮ್ಮನ್ನು ಸಂಪರ್ಕಿಸಿ' ವಿಭಾಗದಲ್ಲಿ ಪಡೆದುಕೊಳ್ಳಬಹುದಾಗಿದೆ.

* ಕೌನ್ಸಿಲಿಂಗ್ ಪ್ರಕ್ರಿಯೆ ದಿನಾಂಕ 21/10/2023ರಿಂದ ಆಯಾ ನೇಮಕಾತಿ ಪ್ರಾಧಿಕಾರಿಯವರ ಕಛೇರಿಯಲ್ಲಿ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಸದರಿ ಕಛೇರಿಯ ವಿಳಾಸದಲ್ಲಿ ಸಂಪರ್ಕಿಸಿ ಅಥವಾ ದೂರವಾಣಿ ಮುಖಾಂತರ ಪಡೆದುಕೊಳ್ಳಬಹುದಾಗಿದೆ.

* ದಿನಾಂಕ 21/10/2023ರಿಂದ ನಡೆಯುವ ಕೌನ್ಸಿಲಿಂಗ್‌ ಬಗ್ಗೆ ದಿನ ಪತ್ರಿಕೆಗಳಲ್ಲಿ ಹಾಗೂ ವಿವಿಧ ಮಾಧ್ಯಮಗಳ ಮುಖಾಂತರ ವ್ಯಾಪಕವಾಗಿ ಅಭ್ಯರ್ಥಿಗಳ ಹಾಗೂ ಸಾರ್ವಜನಿಕರ ಗಮನಕ್ಕೆ ಪ್ರಚುರ ಪಡಿಸಲಾಗಿದೆ.

* ಕೌನ್ಸಿಲಿಂಗ್‌ಗಾಗಿ ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ವಿವರ ಕುರಿತಂತೆ ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸ್ಪಷ್ಟೀಕರಣಗಳಿಗೆ ಆಯಾ ನೇಮಕಾತಿ ಪ್ರಾಧಿಕಾರಿ ಅಂದರೆ ಆಯಾ ಉಪನಿರ್ದೇಶಕರ ಕಛೇರಿಯನ್ನೇ ಸಂಪರ್ಕಿಸಬೇಕು.

* ದಿನಾಂಕ 21/10/2023 ರಿಂದ ವಿವಿಧ ವಿಷಯ/ ಭಾಷೆ ಹುದ್ದೆಗಳಿಗೆ ಆರಂಭವಾಗುವ ಕೌನ್ಸಿಲಿಂಗ್‌ ಪ್ರಕ್ರಿಯೆಯು ವಿವರಯಲ್ಲಿನ ಎಲ್ಲಾ ಅಭ್ಯರ್ಥಿಗಳ ಕೌನ್ಸಿಲಿಂಗ್ ಪ್ರಕ್ರಿಯೆ ಮುಗಿಯುವವರೆಗೆ ನಿಗದಿತ ದಿನಾಂಕಗಳಂದು ನಿರಂತರವಾಗಿ ನಡೆಯುತ್ತದೆ.

* ಕೌನ್ಸಿಲಿಂಗ್‌ಗೆ ಅಭ್ಯರ್ಥಿಗಳೇ ಕಡ್ಡಾಯವಾಗಿ ಖುದ್ದು ಹಾಜರಿದ್ದು ಸ್ಥಳ ಆಯ್ಕೆ ಮಾಡಿಕೊಳ್ಳತಕ್ಕದ್ದು.

* ಅಭ್ಯರ್ಥಿಗಳ ಪರವಾಗಿ ಮತ್ತೊರ್ವರು ಕೌನ್ಸಿಲಿಂಗ್‌ಗೆ ಹಾಜರಾಗಲು ಅವಕಾಶವಿರುವುದಿಲ್ಲ, ಈ ಕುರಿತು ನೇಮಕಾತಿ ಪ್ರಾಧಿಕಾರಿಯವರ ತೀರ್ಮಾನವೇ ಅಂತಿಮವಾಗಿರುತ್ತದೆ.

* ಕೌನ್ಸಿಲಿಂಗ್‌ಗೆ ಗೈರು ಹಾಜರಾದ ಅಭ್ಯರ್ಥಿಗಳ ಕುರಿತಂತೆ ಅವರ ನೇಮಕಾತಿಯನ್ನು ರದ್ದುಗೊಳಿಸಬಹುದಾದ ಕುರಿತಂತೆಯೂ ಸೇರಿ ಎಲ್ಲಾ ಕ್ರಮಗಳನ್ನು ಆಯಾ ನೇಮಕಾತಿ ಪ್ರಾಧಿಕಾರಿಯವರು ಕೈಗೊಳ್ಳಲು ಸಕ್ಷಮರಿರುತ್ತಾರೆ.

* ಕೌನ್ಸಿಲಿಂಗ್‌ಗೆ ಹಾಜರಾಗುವ ಸಂದರ್ಭದಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಅಂಗೀಕೃತವಾಗುವ ಭಾವಚಿತ್ರ ಸಹಿತ ಇರುವ ದೃಢೀಕೃತ ಗುರುತಿನ ಚೀಟಿಯನ್ನು ಹಾಜರುಪಡಿಸತಕ್ಕದ್ದು, ಇದು ಅಭ್ಯರ್ಥಿಗಳ ಗುರುತಿಸುವಿಕೆಗೆ ಕಡ್ಡಾಯವಾಗಿರುತ್ತದೆ.

* ಕೌನ್ಸಿಲಿಂಗ್‌ಗೆ ಹಾಜರಾಗುವ ಸಂದರ್ಭದಲ್ಲಿ ಅಭ್ಯರ್ಥಿಗಳು ಅವರ ನೇಮಕಾತಿ ಅರ್ಜಿಗೆ ಸಂಬಂಧಪಟ್ಟಂತೆ ಇರುವ ಇತರೆ ಅವಶ್ಯಕ ದಾಖಲೆಗಳನ್ನೂ ಸಹಾ ಹೊಂದಿರತಕ್ಕದ್ದು.

* ರಾಜ್ಯ ಉಚ್ಚ ನ್ಯಾಯಾಲಯ, ಕೆ.ಎ.ಟಿ, ನ್ಯಾಯಾಲಯಗಳಲ್ಲಿ ಆಯ್ಕೆ ಮತ್ತು ನೇಮಕಾತಿ ವಿಷಯದ ಬಗ್ಗೆ ಅಭ್ಯರ್ಥಿಯು ಯಾವುದೇ ದಾವೆಯನ್ನು ಹೂಡಿರುವುದಿಲ್ಲ ಎಂಬುದಾಗಿ ನಿಗದಿತ ಮಾದರಿಯಲ್ಲಿ ರೂ 20 ಮೌಲ್ಯದ ದಸ್ತಾವೇಜಿನ ಮೇಲೆ ನೋಟರೀಕೃತ ಮುಚ್ಚಳಿಕೆಯನ್ನು ಕೌನ್ಸಿಲಿಂಗ್ ಸಂದರ್ಭದಲ್ಲಿ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

* ಕೌನ್ಸಿಲಿಂಗ್ ಕ್ರಮಗಳು ಆನ್ ಲೈನ್ ವ್ಯವಸ್ಥೆಯಲ್ಲಿ ನೇಮಕಾತಿ ಪ್ರಾಧಿಕಾರಿಯವರ ಸಮ್ಮುಖದಲ್ಲಿ ಇರುತ್ತದೆ.

* ಅಭ್ಯರ್ಥಿಯ ಆಯ್ಕೆ ಮೆರಿಟ್ ranking ಕ್ರಮದಲ್ಲಿ ಕೌನ್ಸಿಲಿಂಗ್ ಇರುತ್ತದೆ, ಅಂಗವಿಕಲ ಮೀಸಲಾತಿಯಡಿ ನೇಮಕವಾದವರಿಗೆ ಮಾತ್ರ ಆದ್ಯತೆ ನೀಡಲಾಗಿದೆ, ಅಂಗವಿಕಲ ಅಭ್ಯರ್ಥಿಗಳು ಕಡ್ಡಾಯವಾಗಿ ಅಂಗವಿಕಲತೆ ಕುರಿತಾದ ಚಾಲ್ತಿಯಲ್ಲಿರುವ ದಾಖಲೆಯನ್ನು ಪ್ರಸ್ತುತ ಪಡಿಸತಕ್ಕದ್ದು.

* ಒಮ್ಮೆ ಆಯ್ಕೆ ಮಾಡಿಕೊಂಡ ಸ್ಥಳವನ್ನು ಯಾವುದೇ ಕಾರಣಕ್ಕೂ ಬದಲಾಯಿಸಿಕೊಳ್ಳಲು ಅಥವಾ ಮತ್ತೊಬ್ಬ ಅಭ್ಯರ್ಥಿಯ ಸ್ಥಳದೊಂದಿಗೆ ಪರಸ್ಪರ ವಿನಿಮಯಕ್ಕೆ ಅವಕಾಶವಿರುವುದಿಲ್ಲ.

* ಕೌನ್ಸಿಲಿಂಗ್‌ಗೆ ನೀಡುವ ಹುದ್ದೆಗಳ ಹೊರತಾಗಿ ಅಭ್ಯರ್ಥಿಗಳಿಗೆ ಬೇರೆ ಆಯ್ಕೆ ಇರುವುದಿಲ್ಲ. ಅಭ್ಯರ್ಥಿಗಳಿಗೆ ಶಾಲೆ ಅಥವಾ ಕ್ಷೇತ್ರಶಿಕ್ಷಣಾಧಿಕಾರಿಯವರ/ ಉಪನಿರ್ದೇಶಕರ/ ಡಯಟ್ ಕಛೇರಿಯ ಆಯ್ಕೆಯನ್ನು ನೀಡಲಾಗಿದೆ. ಆದರೆ ಕ್ಷೇತ್ರಶಿಕ್ಷಣಾಧಿಕಾರಿಗಳ/ ಉಪನಿರ್ದೇಶಕರ/ ಡಯಟ್ ಕಛೇರಿಯನ್ನು ಆಯ್ಕೆ ಮಾಡಬೇಕಾದ ಅಭ್ಯರ್ಥಿಗಳು ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಹಾಜರಾಗಿ ತಕ್ಷಣವೇ ವೃತ್ತಿ ಬುನಾದಿ ತರಬೇತಿಗೆ ನಿಯೋಜನೆಗೊಳ್ಳುತ್ತಾರೆ ಮತ್ತು ನಂತರದ ಮತ್ತೊಂದು ಕೌನ್ಸಿಲಿಂಗ್ ಮುಖಾಂತರ ನಿಯಮಾನುಸಾರ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದಾದರೂ ಶಾಲೆಯ ಆಯ್ಕೆಯನ್ನು ಪಡೆಯುತ್ತಾರೆ.

* ಜಿಲ್ಲೆಯಲ್ಲಿ ಇರುವ ಖಾಲಿ ಹುದ್ದೆಗಳಲ್ಲಿ ಗ್ರಾಮೀಣ ಪ್ರದೇಶದ 'ಸಿ' ವಲಯದ ಶಾಲೆಯನ್ನೇ ಆದ್ಯತೆಯಲ್ಲಿ ಕೌನ್ಸಿಲಿಂಗ್‌ಗೆ ನೀಡಲಾಗಿದೆ. ಈ ಕುರಿತಂತೆ ಕಾಯ್ದೆ-ನಿಯಮ ಇದ್ದು, ಎಲ್ಲಾ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಅನ್ವಯವಾಗುವ ಕ್ರಮವಾಗಿರುತ್ತದೆ.

* ಎಲ್ಲಾ ದಾಖಲೆಗಳು ಸಿಂದುತ್ವ ಇದ್ದಲ್ಲಿ ಕೌನ್ಸಿಲಿಂಗ್ ಮುಗಿದ ತಕ್ಷಣದಲ್ಲಿಯೇ ಅರ್ಹ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್‌ ಸ್ಥಳದಲ್ಲಿಯೇ ಆಯಾ ನೇಮಕಾತಿ ಪ್ರಾಧಿಕಾರಿಯವರು ನೇಮಕಾತಿ ಆದೇಶವನ್ನು ವಿತರಿಸಲಿದ್ದಾರೆ. ನೇಮಕಾತಿ ಆದೇಶದಲ್ಲಿ ಅಭ್ಯರ್ಥಿಯ ಮೂಲಭೂತ ವಿವರಗಳು ಮತ್ತು ಸ್ಥಳ ಆಯ್ಕೆ ವಿವರ ಇರುತ್ತದೆ. ನೇಮಕಾತಿ ಆದೇಶದಲ್ಲಿನ ವಿವರಗಳಂತೆ ಮುಂದಿನ ಕ್ರಮಗಳು ಇರುತ್ತದೆ, ನೇಮಕಾತಿ ಆದೇಶ ಪಡೆದ 15 ದಿನಗಳೊಳಗಾಗಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು, ತಪ್ಪಿದ್ದಲ್ಲಿ ನೇಮಕಾತಿ ಆದೇಶವು ತನ್ ತಾನಾಗಿಯೇ ರದ್ದಾಗುತ್ತದೆ.

* ದಾಖಲೆಗಳ ಪರಿಶೀಲನೆ ಬಾಕಿ ಇರುವ ಮತ್ತು ನೈಜತೆ ಸ್ವೀಕೃತಿ/ ಸಿಂಧುತ್ವ ಪ್ರಮಾಣ ಪತ್ರ ಇತ್ಯಾದಿ ಬಾಕಿ ಇರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶದ ವಿತರಣೆ ಇರುವುದಿಲ್ಲ. ಸದರಿಯವರು ಅಗತ್ಯ ದಾಖಲೆಗಳನ್ನು ನೇಮಕಾತಿ ಪ್ರಾಧಿಕಾರಿಯವರಿಗೆ ಸ್ವೀಕೃತವಾದ ನಂತರ ಪರಿಶೀಲಿಸಿ ನಿಯಮಾನುಸಾರ ನೇಮಕಾತಿ ಆದೇಶವನ್ನು ಪಡೆಯಲಿದ್ದಾರೆ.

* ನೇಮಕಾತಿ ಆದೇಶ ಪಡೆದ ಅಭ್ಯರ್ಥಿಗಳು ನಿಯಮಾನುಸಾರ ಆದೇಶದಲ್ಲಿನ ಕ್ರಮಗಳಂತೆ ಕ್ರಮವಹಿಸತಕ್ಕದ್ದು, ತಪ್ಪಿದ್ದಲ್ಲಿ ಮುಂದಿನ ಆಗುಹೋಗುಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ.

* ಯಾವುದೇ ಹೆಚ್ಚಿನ ಮಾಹಿತಿಗೆ ಆಯಾ ನೇಮಕಾತಿ ಪ್ರಾಧಿಕಾರಿಯವರನ್ನೇ ಸಂಪರ್ಕಿಸಲು ತಿಳಿಸಿದೆ.

* ಕೌನ್ಸಿಲಿಂಗ್‌ನಲ್ಲಿ ಸ್ಥಳ ಆಯ್ಕೆಗೆ ಯಾವುದೇ ರೀತಿಯ ಪ್ರಭಾವವನ್ನು ಬಳಸುವಂತಿಲ್ಲ. ಅಂತಹ ಸಂದರ್ಭಗಳನ್ನು ತೀವ್ರವಾಗಿ ಪರಿಗಣಿಸುವುದಲ್ಲದೇ ಯಾವುದೇ ರದ್ದುಪಡಿಸಬಹುದಾದ ಹಕ್ಕನ್ನು ಕಾಯ್ದಿರಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+