ವರ್ಗಾವಣೆಗೊಂಡ 9 ಕೆಎಎಸ್ ಅಧಿಕಾರಿಗಳ ಪಟ್ಟಿ
ಬೆಂಗಳೂರು, ಫೆ. 21 : ಕರ್ನಾಟಕ ಸರ್ಕಾರ 9 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶುಕ್ರವಾರ ರಾತ್ರಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಹೆಸರು ಹೊಸ ಹುದ್ದೆಗಳ ವಿವರ ಇಲ್ಲಿದೆ.
ಹುಬ್ಬಳ್ಳಿ ಕಿಮ್ಸ್‌ನ ಮುಖ್ಯ ಆಡಳಿತಾಧಿಕಾರಿಯಾಗಿ ಮಹೇಶ್ ಕರ್ಜಗಿ ಅವರನ್ನು ನೇಮಕ ಮಾಡಲಾಗಿದೆ. ಮಹೇಶ್ ಅವರು ಧಾರವಾಡದಲ್ಲಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದರು. [ಮೆಹ್ದಿ ಕೇಸ್ ಐಒ ಸೇರಿ ಪ್ರಮುಖ ಅಧಿಕಾರಿಗಳು ವರ್ಗ]

ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಎಚ್.ಆರ್. ರಾಜಪ್ಪ ಅವರನ್ನು ಮಾತೃ ಇಲಾಖೆಯಾದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ವಾಪಸ್ ಕಳಿಸಲಾಗಿದ್ದು, ಅವರ ಸ್ಥಾನಕ್ಕೆ ಡಾ.ಡಿ. ಷಣ್ಮುಖ ಅವರನ್ನು ನೇಮಕ ಮಾಡಲಾಗಿದೆ. [ಶಿವಮೊಗ್ಗ, ಗುಲ್ಬರ್ಗಕ್ಕೆ ಹೊಸ ಜಿಲ್ಲಾಧಿಕಾರಿಗಳು]
ಎಸ್.ಪಿ. ಕುಲಕರ್ಣಿ - ಉದ್ಯೋಗ ಮತ್ತು ತರಬೇತಿ ಇಲಾಖೆ (ಬೆಂಗಳೂರು)
ಅಶೋಕ್ ಜಿ. ಭಟ್ ಕೆಎಸ್‌ಆರ್‌ಟಿಸಿ ನಿರ್ದೇಶಕರು (ಸಿಬ್ಬಂದಿ ಮತ್ತು ಪರಿಸರ, ಬೆಂಗಳೂರು),
ಪಿ. ವಸಂತಕುಮಾರ್ - ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರು
ಬಿ. ಶಿವಯ್ಯ - ಕೃಷಿ ಇಲಾಖೆಯ ಜಂಟಿ ನಿರ್ದೇಶಕರು (ಆಡಳಿತ)
ಡಾ.ಡಿ. ಷಣ್ಮುಖ - ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು (ಶಿವಮೊಗ್ಗ)
ಟಿ.ಆರ್. ಶೋಭಾ - ಸಕಾಲ ಮಿಷನ್ ಅಧೀನ ಕಾರ್ಯದರ್ಶಿ
ಬಿ.ಎನ್. ವರಪ್ರಸಾದ್‌ರೆಡ್ಡಿ ಕರ್ನಾಟಕ ರಾಜ್ಯ ಜೀವನೋಪಾಯ ಸಂವರ್ಧನಾ ಸಂಸ್ಥೆಯ ಅಪರ ಮಿಷನ್ ನಿರ್ದೇಶಕ
ಮಹೇಶ್ ಕರ್ಜಗಿ - ಹುಬ್ಬಳ್ಳಿ ಕಿಮ್ಸ್‌ನ ಮುಖ್ಯ ಆಡಳಿತಾಧಿಕಾರಿ
ಆರತಿ ಆನಂದ್ - ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರು











Click it and Unblock the Notifications