ಬಸ್ ಸಂಚಾರದಲ್ಲಿ ಇನ್ಮುಂದೆ ವ್ಯತ್ಯಯವಿಲ್ಲ: ಸಂಕಷ್ಟದಲ್ಲಿರುವ 4 ಸಾರಿಗೆ ನಿಗಮಗಳಿಗೆ 593 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ

ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಎದುರಿಸುತ್ತಿದ್ದ ಡೀಸೆಲ್ ಕೊರತೆ ಹಾಗೂ ಆರ್ಥಿಕ ಸಮಸ್ಯೆಗೆ ಸ್ಪಂದಿಸಿರುವ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆಯಿಟ್ಟಿದೆ. ಡೀಸೆಲ್ ಸಹಾಯಧನ, ವಿದ್ಯಾರ್ಥಿಗಳ ರಿಯಾಯಿತಿ ದರದ ಬಸ್ ಪಾಸ್ ಬಾಕಿ ಹಾಗೂ ಜನಪ್ರಿಯ ಶಕ್ತಿ ಯೋಜನೆಯ ಸಹಾಯಧನ ಸೇರಿದಂತೆ ಒಟ್ಟು 593.99 ಕೋಟಿ ರೂಪಾಯಿಗಳನ್ನ ಬಿಡುಗಡೆ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಇದರಿಂದಾಗಿ ನಿಗಮಗಳ ಆರ್ಥಿಕ ಹೊರೆ ಸ್ವಲ್ಪ ಕಡಿಮೆಯಾದಂತಾಗಿದ್ದು, ಸಾರ್ವಜನಿಕರಿಗೆ ಬಸ್ ಸೇವೆಗಳು ಎಂದಿನಂತೆ ಸುಗಮವಾಗಿ ದೊರೆಯಲಿವೆ.

Karnataka Govt Releases Rs 593 99 Crore For Transport Corporations Including Shakti Scheme amp amp Diesel

ಡೀಸೆಲ್ ಬಿಕ್ಕಟ್ಟಿಗೆ ತಾತ್ಕಾಲಿಕ ಪರಿಹಾರ: ₹100 ಕೋಟಿ ಬಿಡುಗಡೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ಗೆ ಸುಮಾರು 1,124.91 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತವನ್ನ ಬಾಕಿ ಉಳಿಸಿಕೊಂಡಿತ್ತು. ಈ ಕಾರಣದಿಂದಾಗಿ ಎಚ್‌ಪಿಸಿಎಲ್ ಸಂಸ್ಥೆಯು ಡೀಸೆಲ್ ಪೂರೈಕೆಯಲ್ಲಿ ಕಡಿತ ಮಾಡಿತ್ತು. ಇದರ ನೇರ ಪರಿಣಾಮವಾಗಿ ರಾಜ್ಯದ ಹಲವು ಡಿಪೋಗಳಲ್ಲಿ ಬಸ್‌ಗಳ ಕಾರ್ಯಾಚರಣೆಯನ್ನ ನಿಲ್ಲಿಸಿತ್ತು.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳಲ್ಲಿ ಪ್ರತಿದಿನ ಅಂದಾಜು 16.26 ಲಕ್ಷ ಲೀಟರ್ ಡೀಸೆಲ್ ಬಳಕೆಯಾಗುತ್ತಿದ್ದು, ತಿಂಗಳಿಗೆ ಒಟ್ಟಾರೆ 488 ಕೋಟಿ ರೂ. ಇಂಧನ ವೆಚ್ಚ ತಗಲುತ್ತಿದೆ. ಸದ್ಯ ಈ ಬಿಕ್ಕಟ್ಟನ್ನ ನಿಭಾಯಿಸಲು ಸರ್ಕಾರವು ನಾಲ್ಕೂ ನಿಗಮಗಳಿಗೆ ಇಂಧನ ಬಾಕಿ ಪಾವತಿಗಾಗಿ 100 ಕೋಟಿ ರೂ.ಗಳ ಅನುದಾನವನ್ನ ಬಿಡುಗಡೆ ಮಾಡಿದೆ.

ಶಕ್ತಿ ಯೋಜನೆ ಮತ್ತು ಉಚಿತ ಬಸ್ ಪಾಸ್ ಅನುದಾನ

2026-27ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ಗಳನ್ನ ವಿತರಿಸಲಾಗಿದೆ. ಮೇ 30 ರಿಂದ ಜೂನ್ 9ರವರೆಗೆ ಒಟ್ಟು 19,792 ರಿಯಾಯಿತಿ ದರದ ಪಾಸ್‌ಗಳನ್ನ ವಿತರಿಸಲಾಗಿದ್ದು, ಇದಕ್ಕೆ ವಾರ್ಷಿಕವಾಗಿ 286.08 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ ಎಂದು ನಿಗಮಗಳು ಅಂದಾಜಿಸಿದ್ದವು.

ಸದ್ಯ ಸರ್ಕಾರವು ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ವಿತರಣೆಯ ಫಲಾನುಭವಿಗಳ ವ್ಯತ್ಯಾಸದ ಮೊತ್ತವಾಗಿ 63.99 ಕೋಟಿ ರೂಪಾಯಿಗಳನ್ನ ಬಿಡುಗಡೆ ಮಾಡಿದೆ.

ಇದರ ಜೊತೆಗೆ, ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಯಡಿ ಅಕ್ಟೋಬರ್ ತಿಂಗಳಿನಲ್ಲಿ ವಿತರಿಸಲಾಗುವ ಟಿಕೆಟ್‌ಗಳ ವೆಚ್ಚವನ್ನ ಭರಿಸಲು ಬರೋಬ್ಬರಿ 430 ಕೋಟಿ ರೂಪಾಯಿಗಳನ್ನ ಸರ್ಕಾರ ಬಿಡುಗಡೆ ಮಾಡಿದೆ.

ಯಾವ ನಿಗಮಕ್ಕೆ ಎಷ್ಟು ಅನುದಾನ ಬಿಡುಗಡೆಯಾಗಿದೆ?

ನಾಲ್ಕು ರಾಜ್ಯ ಸಾರಿಗೆ ನಿಗಮಗಳಿಗೆ ಡೀಸೆಲ್ ಬಾಕಿ, ವಿದ್ಯಾರ್ಥಿ ಬಸ್ ಪಾಸ್ ಮತ್ತು ಶಕ್ತಿ ಯೋಜನೆಗಾಗಿ ಒಟ್ಟು ಬಿಡುಗಡೆಯಾದ ಹಣದ ವಿವರ ಈ ಕೆಳಗಿನಂತಿದೆ:

1. ಕೆಎಸ್‌ಆರ್‌ಟಿಸಿ: ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಒಟ್ಟು ಅತಿ ಹೆಚ್ಚು ಅನುದಾನ ದೊರೆತಿದ್ದು, ಡೀಸೆಲ್ ಬಾಕಿಗಾಗಿ ₹18.90 ಕೋಟಿ, ವಿದ್ಯಾರ್ಥಿಗಳ ಬಸ್ ಪಾಸ್‌ಗಾಗಿ ₹18.70 ಕೋಟಿ ಹಾಗೂ ಶಕ್ತಿ ಯೋಜನೆಗಾಗಿ ₹164.34 ಕೋಟಿ ಬಿಡುಗಡೆ ಮಾಡಲಾಗಿದೆ.

2. ಬಿಎಂಟಿಸಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಡೀಸೆಲ್ ಬಾಕಿ ಪಾವತಿಸಲು ಅತಿ ಹೆಚ್ಚು ಅಂದರೆ ₹62.53 ಕೋಟಿ ಬಿಡುಗಡೆಯಾಗಿದೆ. ಇದರೊಂದಿಗೆ ವಿದ್ಯಾರ್ಥಿ ಪಾಸ್‌ಗೆ ₹16.62 ಕೋಟಿ ಮತ್ತು ಶಕ್ತಿ ಯೋಜನೆಗೆ ₹78.43 ಕೋಟಿ ನೀಡಲಾಗಿದೆ.

3. ವಾಯುವ್ಯ ಕರ್ನಾಟಕ ಸಾರಿಗೆ: ಈ ನಿಗಮಕ್ಕೆ ಡೀಸೆಲ್ ಬಾಕಿಗಾಗಿ ₹7.96 ಕೋಟಿ, ವಿದ್ಯಾರ್ಥಿಗಳ ಉಚಿತ ಬಸ್ ಪಾಸ್‌ಗೆ ₹17.86 ಕೋಟಿ ಹಾಗೂ ಶಕ್ತಿ ಯೋಜನೆಗೆ ₹105.39 ಕೋಟಿ ಅನುದಾನ ನೀಡಲಾಗಿದೆ.

4. ಕಲ್ಯಾಣ ಕರ್ನಾಟಕ ಸಾರಿಗೆ: ಕಲ್ಯಾಣ ಕರ್ನಾಟಕ ನಿಗಮಕ್ಕೆ ಇಂಧನ ಬಾಕಿಗಾಗಿ ₹10.61 ಕೋಟಿ, ವಿದ್ಯಾರ್ಥಿ ಬಸ್ ಪಾಸ್‌ಗಾಗಿ ₹10.81 ಕೋಟಿ ಹಾಗೂ ಶಕ್ತಿ ಯೋಜನೆಯ ವೆಚ್ಚಕ್ಕಾಗಿ ₹81.82 ಕೋಟಿ ಹಣವನ್ನ ಸರ್ಕಾರ ಬಿಡುಗಡೆ ಮಾಡಿದೆ.

ಒಟ್ಟಾರೆಯಾಗಿ, ಸರ್ಕಾರದ ಈ ಆರ್ಥಿಕ ನೆರವಿನಿಂದಾಗಿ ಸಾರಿಗೆ ನಿಗಮಗಳು ಎದುರಿಸುತ್ತಿದ್ದ ಇಂಧನ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನಗೊಂಡಿದ್ದು, ಶಕ್ತಿ ಯೋಜನೆ ಹಾಗೂ ವಿದ್ಯಾರ್ಥಿಗಳ ಬಸ್ ಪ್ರಯಾಣ ಯಾವುದೇ ಅಡೆತಡೆಯಿಲ್ಲದೆ ಮುಂದುವರೆಯಲು ಸಹಾಯಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+