ಖಾಸಗಿ ಪ್ರಯೋಗಾಲಯಗಳ ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆಗೆ ದರ ನಿಗದಿ
ಬೆಂಗಳೂರು, ಜುಲೈ 25: ಕೊವಿಡ್ 19 ತ್ವರಿತ ತಪಾಸಣೆಗೆ ಆರಂಭಿಸಲಾಗಿರುವ ಆರ್‌ಟಿ-ಪಿಸಿಆರ್ ಮತ್ತು ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆಗಳಿಗೆ ಈಗ ಸರ್ಕಾರ ದರ ನಿಗದಿ ಮಾಡಿದೆ.
Recommended Video
ಖಾಸಗಿ ವ್ಯಕ್ತಿಗಳ ಮಾದರಿ ತಪಾಸಣೆ ಮತ್ತು ದೃಢೀಕರಣ ಪರೀಕ್ಷೆಗೆ 3 ಸಾವಿರ ರೂ. ದರ ನಿದಗಿಯಾಗಿದೆ. ಖಾಸಗಿ ಪ್ರಯೋಗಾಲಯಗಳಲ್ಲಿ ಖಾಸಗಿ ಮಾದರಿಗಳ ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆಗೆ ತಲಾ 700 ರೂ. ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
ಖಾಸಗಿ ಪ್ರಯೋಗಾಲಯಗಳಿಗೆ ಸರ್ಕಾರದಿಂದ ಕಳುಹಿಸುವ ಮಾದರಿಗಳು, ತಪಾಸಣೆ ಮತ್ತು ದೃಢೀಕರಣ ಪರೀಕ್ಷೆಗಳನ್ನು ಒಳಗೊಂಡಂತೆ 2 ಸಾವಿರ ರೂ. ದರ ನಿಗದಿಪಡಿಸಲಾಗಿದೆ. ಇದು ಪಿಪಿಇ ಕಿಟ್ ದರವನ್ನು ಕೂಡ ಒಳಗೊಂಡಿದೆ.

ಶುಕ್ರವಾರ ರಾಜ್ಯದಲ್ಲಿ 5007 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. 110 ಮಂದಿ ಸಾವನ್ನಪ್ಪಿದ್ದರು. ಒಟ್ಟು ರಾಜ್ಯದಲ್ಲಿ 85,870 ಪ್ರಕರಣಗಳಿವೆ ಅದರಲ್ಲಿ 52,791 ಪ್ರಕರಣಗಳು ಸಕ್ರಿಯವಾಗಿವೆ.
ಕಳೆದ 24 ಗಂಟೆಗಳಲ್ಲಿ 2037 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 31,347 ಮಂದಿ ಗುಣಮುಖರಾಗಿದ್ದಾರೆ.ಮಾರ್ಚ್ 8 ರಂದು ಕರ್ನಾಟಕದಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಇದುವರೆಗೆ 1,724 ಮಂದಿ ಸಾವನ್ನಪ್ಪಿದ್ದಾರೆ.
ಸರ್ಕಾರವು ಖಾಸಗಿ ಪ್ರಯೋಗಾಲಯಕ್ಕೆ ಮಾದರಿಗಳನ್ನು ನೀಡಿ ವರದಿ ಪಡೆದರೆ 2 ಸಾವಿರ ರೂ, ಖಾಸಗಿ ಪ್ರಯೋಗಾಲಯಕ್ಕೆ ನೇರವಾಗಿ ಬಂದು ಪರೀಕ್ಷೆ ಮಾಡಿಸಿಕೊಂಡರೆ 3 ಸಾವಿರ ರೂ ತೆಗೆದುಕೊಳ್ಳಲಾಗುತ್ತಿತ್ತು.












Click it and Unblock the Notifications