ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿವೃತ್ತಿ ವೇತನ ಪಡೆಯುವವರಿಗೆ ಸರ್ಕಾರದಿಂದ ಶುಭ ಸುದ್ದಿ!

|
Google Oneindia Kannada News

ಬೆಂಗಳೂರು, ಜನವರಿ 13: 6ನೇ ವೇತನ ಆಯೋಗದ ಶಿಫಾರಸಿನ ಅನ್ವಯ ವಿವಿಧ ಸಿಬ್ಬಂದಿಗಳು ಅಧಿಕಾರಿಗಳ ವಿಶೇಷ ಭತ್ಯೆಯನ್ನು ಪರಿಷ್ಕರಣೆ ಮಾಡಿದ ಬಳಿಕ ನಿವೃತ್ತಿ ವೇತನ ಸೌಲಭ್ಯ ಪಡೆಯಲು ಬೇಕಾದ ಕನಿಷ್ಟ ಸೇವಾವಧಿಯನ್ನು ತಗ್ಗಿಸಲಾಗಿದೆ. ಈ ಮೂಲಕ ಸರ್ಕಾರಿ ನೌಕರರಿಗೆ ಮತ್ತೊಂದು ಶುಭ ಸುದ್ದಿ ನೀಡಲಾಗಿದೆ.

ಹೊಸ ಆದೇಶದಂತೆ 30 ವರ್ಷ ಸರ್ಕಾರಿ ಸೇವೆ ಮಾಡಿದ ನೌಕರರಿಗೂ ಪೂರ್ಣ ಪ್ರಮಾಣದ ನಿವೃತ್ತಿ ವೇತನ ಸೌಲಭ್ಯ ಸಿಗಲಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ.

ಸರ್ಕಾರಿ ನೌಕರರ ವಿಶೇಷ ಭತ್ಯೆ ಹೆಚ್ಚಳ ಮಾಡಿದ ಕರ್ನಾಟಕ ಸರ್ಕಾರ!ಸರ್ಕಾರಿ ನೌಕರರ ವಿಶೇಷ ಭತ್ಯೆ ಹೆಚ್ಚಳ ಮಾಡಿದ ಕರ್ನಾಟಕ ಸರ್ಕಾರ!

ಸರ್ಕಾರಿ ನೌಕರರು ಪೂರ್ಣ ಪ್ರಮಾಣದ ನಿವೃತ್ತಿ ವೇತನ ಸೌಲಭ್ಯ ಪಡೆಯಲು 33 ವರ್ಷ ಕರ್ತವ್ಯದ ಅವಧಿ ನಿಗದಿಪಡಿಸಲಾಗಿತ್ತು. ಈಗ 30 ವರ್ಷಕ್ಕೆ ಇಳಿಸುವಂತೆ ವೇತನ ಆಯೋಗ ಶಿಫಾರಸು ಮಾಡಿತ್ತು. ಜನವರಿ 1 ರಿಂದಲೇ ಜಾರಿಗೆ ಬರುವಂತೆ 30 ವರ್ಷ ಸರ್ಕಾರಿ ನೌಕರಿ ಮಾಡಿದವರಿಗೆ ಪೂರ್ಣ ಪ್ರಮಾಣದ ನಿವೃತ್ತಿ ಸೌಲಭ್ಯ ನೀಡಲು ಆದೇಶಿಸಲಾಗಿದೆ.

Karnataka Govt Pension qualifying service period reduced

ವೃದ್ಧಾಪ್ಯ ವೇತನ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಸುಪ್ರೀಂ ಆದೇಶವೃದ್ಧಾಪ್ಯ ವೇತನ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಸುಪ್ರೀಂ ಆದೇಶ

ವಿಶೇಷ ಭತ್ಯೆ ಮಂಜೂರಾತಿ ಮತ್ತು ಪರಿಷ್ಕರಣೆ ಕುರಿತಂತೆ 2011ರ ಅಧಿಕಾರಿ ವೇತನ ಸಮಿತಿಯು ಅನುಸರಿಸಿದ ಮಾನದಂಡಗಳನ್ನು 6ನೇ ರಾಜ್ಯ ವೇತನ ಆಯೋಗವು ಮಾನ್ಯ ಮಾಡಿರುತ್ತದೆ.

English summary
The Government has reduced the qualifying service from 33 years to 30 years to become eligible for full Pension with effect from 1.1.2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X