Government Employees: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್: HRMS-2.0, e-SR ಸಮಸ್ಯೆಗೆ ಇನ್ಮುಂದೆ ಒಂದೇ ಕರೆ ಸಾಕು!

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು HRMS-2.0, e-SR ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಸೇರಿದಂತೆ ವಿವಿಧ ಸರ್ಕಾರಿ ತಂತ್ರಾಂಶಗಳ ಬಳಕೆಯಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳಿಗೆ ಇನ್ನು ಮುಂದೆ ನೇರವಾಗಿ ಸಹಾಯವಾಣಿ ಮೂಲಕ ಪರಿಹಾರ ಪಡೆಯಬಹುದಾಗಿದೆ.

ಕರ್ನಾಟಕ ಸರ್ಕಾರದ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ-2.0 (HRMS-2.0) ನಿರ್ದೇಶನಾಲಯವು ಈ ಕುರಿತು ಮಹತ್ವದ ಮಾಹಿತಿ ಪ್ರಕಟಿಸಿದೆ. ಆಗಸ್ಟ್ 18, 2026ರಂದು ಹೊರಡಿಸಿರುವ ಪತ್ರದಲ್ಲಿ, HRMS-2.0, e-SR ಮತ್ತು KASS ತಂತ್ರಾಂಶಗಳ ನಿರ್ವಹಣೆ ಹಾಗೂ ಬಳಕೆಗೆ ಸಂಬಂಧಿಸಿದಂತೆ ಸರ್ಕಾರಿ ನೌಕರರಿಗೆ ಅಗತ್ಯ ತಾಂತ್ರಿಕ ನೆರವು ಒದಗಿಸಲು ಸಹಾಯವಾಣಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.

Karnataka Govt Employees Get Key Update Helpline Numbers Released for HRMS-2 0 e-SR Issues

ಯಾವ ಸಮಸ್ಯೆಗಳಿಗೆ ಸಹಾಯ ಪಡೆಯಬಹುದು?

HRMS-2.0, e-SR ಹಾಗೂ ಸಂಬಂಧಿತ ಸರ್ಕಾರಿ ತಂತ್ರಾಂಶಗಳನ್ನು ಬಳಸುವ ವೇಳೆ ಎದುರಾಗುವ ತಾಂತ್ರಿಕ ತೊಂದರೆಗಳು, ತಂತ್ರಾಂಶ ಬಳಕೆಗೆ ಸಂಬಂಧಿಸಿದ ಮಾಹಿತಿ ಹಾಗೂ ಇತರ ಸಂಬಂಧಿತ ಸಮಸ್ಯೆಗಳಿಗೆ ನೌಕರರು ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

IVRS Help Desk (HRMS-1 & HRMS-2): 080-24413599

WhatsApp Help Desk: 9141570176

ತಂತ್ರಾಂಶ ಬಳಕೆಯಲ್ಲಿ ಸಮಸ್ಯೆ ಎದುರಾದಾಗ ಸಂಬಂಧಿತ ಸರ್ಕಾರಿ ನೌಕರರು ಮೇಲಿನ ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಅಗತ್ಯ ನೆರವು ಪಡೆಯಬಹುದಾಗಿದೆ ಎಂದು HRMS-2.0 ನಿರ್ದೇಶನಾಲಯ ತಿಳಿಸಿದೆ.
ಈ ಸಹಾಯವಾಣಿ ವ್ಯವಸ್ಥೆಯಿಂದ ರಾಜ್ಯದ ಸರ್ಕಾರಿ ನೌಕರರಿಗೆ HRMS-2.0, e-SR ಮತ್ತು KASS ಸೇರಿದಂತೆ ಪ್ರಮುಖ ಸರ್ಕಾರಿ ತಂತ್ರಾಂಶಗಳ ಬಳಕೆಯಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಲಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ರವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ಎನ್.ವಿ.ಪ್ರಸಾದ್ ರವರನ್ನು ಭೇಟಿ ಮಾಡಿ ಕೆನಪದರ ಮಿತಿಯನ್ನು 8ಲಕ್ಷದಿಂದ 12ಲಕ್ಷಗಳಿಗೆ ಹೆಚ್ಚಿಸಿ ಆದೇಶ ಹೊರಡಿಸುವಂತೆ ಮನವಿ ಮಾಡಿದರು

ಕಾರ್ಯದರ್ಶಿಗಳು ಸಕರಾತ್ಮಕವಾಗಿ ಸ್ಪಂದಿಸಿ ಕೆನಪದರ ಮಿತಿಯನ್ನು 8ಲಕ್ಷದಿಂದ 12ಲಕ್ಷಕ್ಕೆ ಹೆಚ್ಚಿಸುವಂತೆ ಕಡತವನ್ನು ಶೀಘ್ರವಾಗಿ ಮಾನ್ಯ ಸಚಿವರ ಅನುಮೋದನೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು. ಸಚಿವರ ಅನುಮೋದನೆ ನಂತರ ಮುಖ್ಯಮಂತ್ರಿಗಳ ಡಿ ಕೆ ಶಿವಕುಮಾರ್ ಅನುಮೋದನೆ ಆಗಬೇಕಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸದರಿ ಕಡತದ ಅನುಪಾಲನೆಯಲ್ಲಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+