New Projects: 'ಹೆಲ್ತ್ ಟೆಕ್-ಮೆಡ್ ಟೆಕ್' ಸ್ಥಾಪನೆ ಸೇರಿ ಈ ಯೋಜನೆಗಳಿಗೆ ಸಂಪುಟ ಅಸ್ತು: ಯೋಜನೆ-ವೆಚ್ಚದ ಮಾಹಿತಿ
ಬೆಂಗಳೂರು, ಫೆಬ್ರವರಿ 23: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಜಾರಿಗೊಳಿಸಲು ಉದ್ದೇಶಿಸಲಾಗಿರುವ ಅಭಿವೃದ್ಧಿ ಯೋಜನೆಗಳಿಗೆ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಹಾಗಾದರೆ ಇದರಲ್ಲಿ ಯಾವೆಲ್ಲ ಯೋಜನೆಗಳಿಗೆ, ವೆಚ್ಚದ ಸೇರಿ ಮುಂತಾದ ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 369 ಗ್ರಾಮಗಳಿಗೆ 980ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ 50 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 'ಹೆಲ್ತ್ ಟೆಕ್ ಮತ್ತು ಮೆಡ್ ಟೆಕ್' ಉತ್ಕೃಷ್ಟತಾ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳ ಜಾರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ನೀಡಿದೆ.

ಕುಡಿಯುವ ನೀರಿನ ಯೋಜನೆಗಳು
ಮೈಸೂರು ಟಿ. ನರಸೀಪುರ ತಾಲೂಕಿನ ಮೂಗೂರು ಮತ್ತು ಇತರೆ 43 ಜನವಸತಿ ಪ್ರದೇಶ, ಮೈಸೂರು ತಾಲೂಕು ಉಂಡವಾಡಿ ಮತ್ತು ಇತರೆ6 7 ಜನವಸತಿ ಪ್ರದೇಶ, ಕಲಬುರಗಿ ಜಿಲ್ಲೆಯ ಆಳಂದ ಹಾಗೂ ಕಮಲಾಪುರ ತಾಲೂಕುಗಳಲ್ಲಿ ವಿ.ಕೆ. ಸಲಗಾರ್ ಮತ್ತು ಇತರೆ 16 ಗ್ರಾಮಗಳು.
ಅಷ್ಟೇ ಅಲ್ಲದೇ ಜೇವರ್ಗಿ ತಾಲೂಕಿನ 22 ಗ್ರಾಮಗಳು, ಬೀದರ್ ತಾಲೂಕಿನ ಬಗಾಲ್ ಮತ್ತು ಇತರೆ 136ಜನ ವಸತಿ ಪ್ರದೇಶ, ರಾಣಿಬೆನ್ನೂರು ತಾಲೂಕಿನಲ್ಲಿ ಒಟ್ಟು 100 ಕೋಟಿ ರೂಪಾಯಿ ವೆಚ್ಚದಲ್ಲಿ 27 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಳ್ಳಲಿದೆ.
ಕಾರಾಗೃಹ ಉಪಕರಣ ಸುಧಾರಣೆ ಶೀಘ್ರ
ರಾಜ್ಯದ ಆರು ಕೇಂದ್ರ ಕಾರಾಗೃಹಗಳು ಮತ್ತು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್ ಉಪಕರಣಗಳ ಮೇಲ್ದರ್ಜೆಗೇರಿಸುವುದು 5 ಹಾಗೂ ಮೂರು ವರ್ಷಗಳ ನಿರ್ವಹಣೆಯನ್ನು 43.75 ಕೋಟಿ ರು.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸರ್ಕಾರ ಸಹಮತಿ ನೀಡಿದೆ.

ಕರ್ನಾಟಕ ಅನಿಮೇಷನ್, ವಿಷಯಲ್ ಎಫೆಕ್ಟ್, ಗೇಮಿಂಗ್ ಕಾಮಿಕ್ಸ್ ಮತ್ತು ಎಕ್ಸೆಂಟೆಡ್ ರಿಯಾಲಿಟಿ (ಎವಿಜಿಸಿ-ಎಕ್ಸ್ ಆರ್) 3.0 (2024-2029) ಕ್ಕೆ ಅನುಮೋದನೆ ನೀಡಲಾಗಿದೆ. ಈ ಸಂಬಂಧ ಮುಂದಿನ 5 ವರ್ಷದಲ್ಲಿ 150 ಕೋಟಿ ರು. ವಿನಿಯೋಗಿಸಲು ಸರ್ಕಾರ ನಿರ್ಧರಿಸಿದ್ದರ ಬಗ್ಗೆ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ಪೌರಕಾರ್ಮಿಕರ ಹುದ್ದೆಗಳಿಗೆ ನೇಮಕಾತಿ
ರಾಜ್ಯ ಸರ್ಕಾರ ಆದಷ್ಟು ಶೀಘ್ರವೇ ಬಿಬಿಎಂಪಿಯಲ್ಲಿ ನೇರ ಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಸೃಜಿಸಲಾಗಿರುವ 11,307 ಪೌರಕಾರ್ಮಿಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರವೇ ಚಾಲನೆ ನೀಡಲಿದೆ. ಒಂದು ವೇಳೆ ಇವುಗಳಿಗೆ ಅರ್ಹರು ಸಿಗದಿದ್ದಲ್ಲಿ, ಆ ಹುದ್ದೆಗೂ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಸಂಪುಟ ಒಪ್ಪಿಕೊಂಡಿದೆ.
ಅಲ್ಲದೆ ಬಿಬಿಎಂಪಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆ ವಿಳಂಬ ಹಿನ್ನೆಲೆಯಲ್ಲಿ ಕಂಪನಿಗಳಿಗೆ ನೀಡಿದ್ದ ಅನುಮತಿ ರದ್ದುಗೊಳಿಸಲಾಗಿದೆ.












Click it and Unblock the Notifications