ರವಿ ಚನ್ನಣ್ಣನವರ್ ಸೇರಿ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು,ನವೆಂಬರ್ 14: ಕರ್ನಾಟಕ ಸರಕಾರ ರಾಜ್ಯ ಪೊಲೀಸ್ ಇಲಾಖೆಯಲ್ಲಿ 11 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಇದರಲ್ಲಿ ಏಳು ಅಧಿಕಾರಿಗಳು ವರ್ಗಾವಣೆಯಾದರೆ, ನಾಲ್ಕು ಅಧಿಕಾರಿಗಳಿಗೆ ಮುಂಬಡ್ತಿ ಸಿಕ್ಕಿದೆ.
ಆಡಳಿತ ವಿಭಾಗದ ಎಡಿಜಿಪಿ ವಿಭಾಗದಲ್ಲಿ ಎಡಿಜಿಪಿಯಾಗಿದ್ದ ಅಬ್ದುಲ್ ಸಲೀಂರನ್ನು ಸಂಚಾರ ವಿಭಾಗದ ಮುಖ್ಯಸ್ಥರಾಗಿ ವರ್ಗಾವಣೆ ಮಾಡಲಾಗಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಬೆಂಗಳೂರು ನಗರ ಸಂಚಾರ ವಿಭಾಗಕ್ಕೆ ವಿಶೇಷ ಆಯುಕ್ತರ ಹುದ್ದೆಯನ್ನು ಸೃಷ್ಟಿಸಲಾಗಿದೆ.
ಸಿಐಡಿ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್ ಅವರನ್ನು ಆಡಳಿತ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಸಿಐಡಿ ಎಸ್‌ಪಿಯಾಗಿದ್ದ ರವಿ ಡಿ ಚನ್ನಣ್ಣನವರ್‌ರನ್ನು ಕಿಯೋನಿಕ್ಸ್ ನಿರ್ದೇಶಕನಾಗಿ ಹಾಗೂ ಮಂಗಳೂರು ಪಶ್ಚಿಮ ಶ್ರೇಣಿ ಐಜಿಪಿ ದಿವ್ಯಾಜ್ಯೋತಿ ರಾಯ್ ಅವರನ್ನು ಮಾನವ ಹಕ್ಕುಗಳ ಆಯೋಗ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

ವಿವಿಧ ಇಲಾಖೆಗೆ ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳ ಪಟ್ಟಿ
ಅಬ್ದುಲ್ ಸಲೀಂ ಸಂಚಾರ ವಿಭಾಗದ ಮುಖ್ಯಸ್ಥ
ಉಮೇಶ್ ಕುಮಾರ್-ಆಡಳಿತ ವಿಭಾಗದ ಎಡಿಜಿಪಿ
ರವಿ ಡಿ ಚೆನ್ನಣ್ಣ ನವರ್ - ಕಿಯೋನಿಕ್ಸ್ ನಿರ್ದೇಶಕ
ದಿವ್ಯಜ್ಯೋತಿ ರಾಯ್- ಮಾನವ ಹಕ್ಕುಗಳ ಆಯೋಗ ಇಲಾಖೆ ಐಜಿಪಿ
ರಮಣ್ ಗುಪ್ತಾ- ಐಜಿಪಿ, ಗುಪ್ತಚರ, ಬೆಂಗಳೂರು ನಗರ
ರವಿಕಾಂತೇಗೌಡ - ಡಿಐಜಿ, ಸಿಐಡಿ
ಲೋಕೇಶ್ ಕುಮಾರ್ - ಡಿಐಜಿ ಬಳ್ಳಾರಿ
ಡಾ.ಚಂದ್ರಗುಪ್ತ - ಮಂಗಳೂರು ಪಶ್ಚಿಮ ವಲಯ ಡಿಐಜಿ
ಡಾ.ಶರಣಪ್ಪ - ಜಂಟಿ ಪೊಲೀಸ್ ಆಯುಕ್ತ , ಅಪರಾಧ ವಿಭಾಗ
ಎಂ ಎನ್ ಅನುಚೇತ್ - ಜಂಟಿ ಪೊಲೀಸ್ ಆಯುಕ್ತ ಸಂಚಾರ ವಿಭಾಗ
ಬಿ. ರಮೇಶ್ - ಮೈಸೂರು ಪೊಲೀಸ್ ಆಯುಕ್ತ












Click it and Unblock the Notifications