ಹೊಸ‌ ಕಾರು, ಬೈಕ್ ಖರೀದಿಸುವವರಿಗೆ ರಾಜ್ಯ ಸರ್ಕಾರದಿಂದ ದೊಡ್ಡ ಶಾಕ್‌

ಈಗಾಗಲೇ ಕಾರು ಹಾಗೂ ಬೈಕ್‌ ದರಗಳು ಗಗನಕ್ಕೇರಿವೆ. ಈ ದುಬಾರಿ ದುನಿಯಾದಲ್ಲಿ ಸಿಲುಕಿರುವ ಬಡ ಹಾಗೂ ಮಧ್ಯಮವರ್ಗವು ಇನ್ನೇನು ಹೊಸ ವರ್ಷದ ಸಂದರ್ಭದಲ್ಲಿ ಹೊಸ ಬೈಕು ಕಾರು ಖರೀದಿಸುವ ಪ್ಲ್ಯಾನ್‌ನಲ್ಲಿದ್ದಾರೆ. ಆದರೆ ರಾಜ್ಯ ಸರ್ಕಾರವು ಇವರಿಗೆಲ್ಲ ಶಾಕ್‌ ಕೊಡಲು ಮುಂದಾಗಿದೆ.

ಹೊಸ ಕಾರು ಖರೀದಿಗೆ 1000 ರೂಪಾಯಿ ಮತ್ತು ಹೊಸ ಬೈಕ್‌ಗಳಿಗೆ 500 ರೂಪಾಯಿವರೆಗೆ ಸೆಸ್‌ (ಉಪ ತೆರಿಗೆ) ಏರಿಸಲು ತೀರ್ಮಾನಿಸಿದೆ. ದ್ವಿಚಕ್ರ ವಾಹನಗಳಿಗೆ ಮತ್ತು ಸಾರಿಗೆಯೇತರ ಕಾರುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ವರದಿಯಾಗಿದೆ.

Karnataka Government Proposes Additional Tax On New Cars And Bikes

ಮತ್ತೊಂದೆಡೆ ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ವಿರೋಧ ವ್ಯಕ್ತಪಡಿಸಿವೆ. ಕಾಂಗ್ರೆಸ್‌ ಸರ್ಕಾರ ಈಗ ಹೊಸ ಕಾರು ಮತ್ತು ಬೈಕ್‌ಗಳಿಗೆ ಕ್ರಮವಾಗಿ ₹500 ಮತ್ತು ₹1000 ಸೆಸ್‌ ಏರಿಸಲು ತೀರ್ಮಾನಿಸಿದ್ದು ಸಂಪೂರ್ಣ ದಿವಾಳಿಯಾಗಿರುವ ಸರ್ಕಾರ ಕನ್ನಡಿಗರ ಜೇಬಿಗೆ ಕನ್ನ ಹಾಕುವುದಕ್ಕೆ ಸದಾ "ಸಿದ್ದ" ಎಂದು ಬಿಜೆಪಿ ಟ್ವೀಟ್‌ ಮೂಲಕ ಆಕ್ರೋಶ ಹೊರಹಾಕಿದೆ.

ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ರಸ್ತೆ ತೆರಿಗೆಗಳನ್ನು ಈಗಾಗಲೇ ಏರಿಸಿರುವ ಕಾಂಗ್ರೆಸ್‌ ಸರ್ಕಾರ ಈಗ ಹೊಸ ಕಾರು ಮತ್ತು ಬೈಕ್‌ಗಳಿಗೆ ಕ್ರಮವಾಗಿ ₹500 ಮತ್ತು ₹1000 ಸೆಸ್‌ ಏರಿಸಲು ತೀರ್ಮಾನಿಸಿದ್ದು, ಇದು ಕಾಂಗ್ರೆಸ್‌ನ ಜನವಿರೋಧಿ ಮನಸ್ಥಿತಿಯ ಸುಸ್ಪಷ್ಟ ನಿದರ್ಶನ. ಸಿಎಂ ಸಿದ್ದರಾಮಯ್ಯ ಅವರೆ, ಸುಳ್ಳು ಹೇಳುವುದನ್ನು ಬಿಟ್ಟು, ನಿಮ್ಮ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ಕೂಡಲೇ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದೆ.

Karnataka Government Proposes Additional Tax On New Cars And Bikes

ಗ್ಯಾರಂಟಿಗೆ ಹಣ ಹೊಂದಿಸಲು ಸರ್ಕಸ್‌: ಜೆಡಿಎಸ್‌

ರಾಜ್ಯ ಸರ್ಕಾರದ ಈ ನಿಲುವಿಗೆ ಜೆಡಿಎಸ್‌ ಪಕ್ಷ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಮಧ್ಯಮ ವರ್ಗದವರನ್ನು ಸುಲಿಗೆ ಮಾಡುವುದೇ ಕಾಂಗ್ರೆಸ್‌ ಸರ್ಕಾರದ ಖಯಾಲಿ ಆಗಿಬಿಟ್ಟಿದೆ. ಗ್ಯಾರಂಟಿಗಾಗಿ ಹಣ ಹೊಂದಿಸಲು ಸರ್ಕಸ್‌ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ ಈಗ ಸೆಸ್‌ ನೆಪದಲ್ಲಿ ರಾಜ್ಯದಲ್ಲಿ ಲೂಟಿಗೆ ಇಳಿದಿದೆ ಎಂದು ಕಿಡಿಕಾರಿದೆ.

ದ್ವಿಚಕ್ರ ವಾಹನಗಳಿಗೆ ಮತ್ತು ಸಾರಿಗೆಯೇತರ ಮೋಟಾರು ಕಾರುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ವಿಧೇಯಕವನ್ನು ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ. ಇನ್ನು ಮುಂದೆ ಹೊಸ ವಾಹನ ಖರೀದಿ ವೇಳೆ ಖರೀದಿದಾರರು ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕು. ಖಾಲಿಯಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಕಾಂಗ್ರೆಸ್‌ ಸರ್ಕಾರ ಮಧ್ಯಮ ವರ್ಗವನ್ನು ಟಾರ್ಗೆಟ್‌ ಮಾಡಿ ತೆರಿಗೆ ಬರೆ ಎಳೆಯುತ್ತಿದೆ ಎಂದು ಆರೋಪ ಮಾಡಿದೆ.

ಈಗಾಗಲೇ ಹೊಸ ವಾಹನಗಳ ದರವು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದ್ದು, ಮತ್ತೊಂದೆಡೆ ಇಲ್ಲಸಲ್ಲದ ತೆರಿಗೆಗಳನ್ನು ಹಾಕಿ ಸಾರ್ವಜನಿಕರ ತಲೆ ಮೇಲೆ ಹೊರೆ ಇಟ್ಟಿದೆ. ಈಗ ಮತ್ತೆ ತೆರಿಗೆ ಹೆಚ್ಚಾದರೆ ಇಂತದ ದುಬಾರಿ ಜೀವನ ನಮ್ಮಿಂದ ನಡೆಸಲು ಸಾಧ್ಯವೇ ಎಂದು ಸಾರ್ವಜನಿಕರು ಕೂಡ ಸರ್ಕಾರದ ಈ ನಿರ್ಣಯವನ್ನು ವಿರೋಧ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+