Government Employees: ಸರ್ಕಾರಿ ಕಚೇರಿ ಸಮಯ ಬದಲಾವಣೆ: ಸರ್ಕಾರಿ ನೌಕರರಿಗೆ ಕೊಟ್ಟ ಸೂಚನೆಗಳೇನು?
ಬೆಂಗಳೂರು, ಏಪ್ರಿಲ್ 14: ಕರ್ನಾಟಕದಲ್ಲಿ ಪೂರ್ವ ಮುಂಗಾರು ಆರಂಭವಾಗಿದೆ. ಕಳೆದ 15 ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸೇರಿದಂತೆ ಭಾರೀ ಮಳೆಯಾಗುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಸರ್ಕಾರಿ ನೌಕರರ ಕಚೇರಿಗಳ ಕೆಲಸದಲ್ಲಿ ಸಮಯವನ್ನ ತಾತ್ಕಾಲಿಕವಾಗಿ ಬದಲಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರವು ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನ ಬದಲಾಯಿಸಿದೆ. ಈ ನಿರ್ಣಯವು ಕಲಬುರಗಿ ವಿಭಾಗದ 7 ಜಿಲ್ಲೆಗಳಾದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಯಾದಗಿರಿ ಹಾಗೂ ಬೆಳಗಾವಿ ವಿಭಾಗದ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಅನ್ವಯಿಸುತ್ತದೆ.

ಸರ್ಕಾರಿ ನೌಕರರ ಕಚೇರಿ ಸಮಯ ಬದಲಾವಣೆ ಮಾಡಿದ್ದು, ಬೆಳಿಗ್ಗೆ 8 ಗಂಟೆಯಿಂದ ಮಧ್ಯಾನ್ಹ 1:30 ವರೆಗೆ ಸಮಯವನ್ನ ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ. ಇನ್ನೂ, ಈ ಬದಲಾವಣೆಯು ಏಪ್ರಿಲ್ ನಿಂದ ಮೇ 31 ವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಸರ್ಕಾರವು ತಿಳಿಸಿದೆ.
ರಾಜ್ಯದಲ್ಲಿ ಈ ಬಾರಿ ಬೇಸಿಗೆಯ ಆರಂಭಕ್ಕೂ ಮುನ್ನವೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿಕೊಂಡಿತ್ತು. ಹೀಗಾಗಿ ಸರ್ಕಾರಿ ನೌಕರರ ಮನವಿಯನ್ನ ಪರಿಗಣಿಸಿ, ಉತ್ತರ ಕರ್ನಾಟಕ ಭಾಗದ ಬಿಸಿಲು, ಹೆಚ್ಚಿನ ಉಷ್ಟಾಂಶ ಹಾಗೂ ಸರ್ಕಾರಿ ನೌಕರರ ಆರೋಗ್ಯದ ಸುರಕ್ಷತೆಗಾಗಿ ಈ ಕ್ರಮವನ್ನ ತೆಗೆದುಕೊಳ್ಳಲಾಗಿದೆ. ಅಲ್ಲದೇ ಈ ಸುಡು ಬಿಸಿಲಿನ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಹ ಸರ್ಕಾರಿ ನೌಕರರ ಸಮಯ ಬದಲಾವಣೆ ಮಾಡಿರುವುದು ಅನುಕೂಲವಾಗುವಂತೆ ಕಚೇರಿಯ ಸಮಯವನ್ನ ಬದಲಾಯಿಸಲಾಗಿದೆ.
ಇನ್ನೂ ಸರ್ಕಾರಿ ಕಚೇರಿ ಸಮಯ ಬದಲಾವಣೆಯೂ ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ವಿಜಯಪುರ, ಯಾದಗಿರಿ, ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಮಾತ್ರ ಅನ್ವಯಿಸುತ್ತದೆ. ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಇತರೆ ಜಿಲ್ಲೆಗಳಿಲ್ಲಿ ಸರ್ಕಾರಿ ಕಚೇರಿಗಳ ಸಮಯವೂ ಹಿಂದಿನಂತೆಯೇ ಇರಲಿದೆ. ಬೆಂಗಳೂರಿನಲ್ಲಿರುವ ಸರ್ಕಾರಿ ಕಚೇರಿಯ ಸಮಯ ಬದಲಾವಣೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಸರ್ಕಾರಿ ನೌಕರರಿಗೆ ಕೊಟ್ಟ ಸೂಚನೆಗಳೇನು?
ರಾಜ್ಯ ಸರ್ಕಾರ ಬಿಸಿಲಿನ ತಾಪಮಾನದಿಂದ ಈಗಾಗಲೇ ಕೆಲವು ಜಿಲ್ಲೆಗಳ ಸರ್ಕಾರಿ ಕಚೇರಿಗಳ ಸಮಯವನ್ನ ಬದಲಾವಣೆ ಮಾಡಲಾಗಿದೆ. ಬದಲಾದ ಸಮಯದಲ್ಲಿ ಯಾವುದೇ ವಿಳಂಬವಿಲ್ಲದ ಕೆಲಸ ಮಾಡಬೇಕು ಎಂದು ಸರ್ಕಾರಿ ಅಧಿಕಾರಿಗಳಿಗೆ ಸೂಚನೆಯನ್ನ ನೀಡಿದೆ. ಇನ್ನು, ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳು ಹೆಚ್ಚುವರಿ ಕೆಲಸಗಳಿಗೆ ನಿರ್ದೇಶಿಸಿದರೆ, ಸಮಯ ಮಿತಿಯಿಲ್ಲದೆ ಕಾರ್ಯನಿರ್ವಹಿಸಬೇಕು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಎಚ್ಚರಿಕೆವಹಿಸಬೇಕು ಎಂದು ಸರ್ಕಾರ ಸೂಚನೆಯನ್ನ ನೀಡಿದೆ.
ಇನ್ನೂ ರಾಜ್ಯ ಸರ್ಕಾರವು ಕಳೆದ ಎರಡು ವರ್ಷಳಿಂದ ಚುನಾವಣೆ ಮತ್ತ ಉತರ ಆಡಳಿತಾತ್ಮು ಕಾರಣಗಳಿದಾಗಿ ಸರ್ಕಾರಿ ಕಚೇರಿ ಸಮಯದ್ಕಲ್ಲಿ ಯಾವುದು ಬದಲಾವಣೆ ಮಾಡಿರಲಿಲ್ಲ. ಆದರೆ, ಈ ವರ್ಷ ತೀವ್ರ ಶಾಖವು ಹೆಚ್ಚಾಗಿರುವುದ್ದರಿಂದ ಈ ಕ್ರಮ ಕೈಗೊಳಲಾಗಿದೆ.












Click it and Unblock the Notifications