ಕನ್ನಡಿಗರಿಗೆ ಮಹದಾಯಿ ವಿಚಾರದಲ್ಲಿ ಕೊನೆಗೂ ಸಿಗುತ್ತಾ ನ್ಯಾಯ?
ಕನ್ನಡಿಗರಿಗೆ ನದಿ ನೀರು ಹಂಚಿಕೆ ವಿಚಾರದಲ್ಲಿ ಪದೇ ಪದೆ ಅನ್ಯಾಯ ಆಗುತ್ತಿದ್ದು ಒಂದು ಕಡೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲೂ ಭಾರಿ ಅನ್ಯಾಯ ಆಗಿದೆ. ಅದರಲ್ಲೂ, ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಯೋಜನೆಗಳಿಗೆ ಕರ್ನಾಟಕ ನೀರಿನ ಕೊರತೆಯನ್ನ ಅನುಭವಿಸುತ್ತಿದೆ. ಆದರೆ ಇದೀಗ ಮಹದಾಯಿ ವಿಚಾರದಲ್ಲಿ ಮಹತ್ವದ ಮಾಹಿತಿ ಹೊರಗೆ ಬಿದ್ದಿದೆ!
ಹೌದು, ಉತ್ತರ ಕರ್ನಾಟಕ ಭಾಗಕ್ಕೆ ಮಹದಾಯಿ ಯೋಜನೆ ಜೀವದಾನ ಮಾಡಿದಂತೆ. ಈ ಹಿನ್ನೆಲೆ ಮಹದಾಯಿ ಯೋಜನೆ ಆರಂಭಿಸಲು ಒತ್ತಾಯಿಸಿ ಬೃಹತ್ ಹೋರಾಟ ನಡೆದವು. ಕರ್ನಾಟಕ ಸರ್ಕಾರ ಕೂಡ ಯೋಜನೆ ಜಾರಿಗೆ ಸಾಕಷ್ಟು ಕ್ರಮ ಕೈಗೊಂಡಿತ್ತು. ಇದೆಲ್ಲದರ ಪರಿಣಾಮ ಈಗ ಮಹದಾಯಿ ಯೋಜನೆ ವಿಚಾರದಲ್ಲಿ ದೊಡ್ಡ ಅಪ್‌ಡೇಟ್ ಹೊರಬಿದ್ದಿದ್ದು, ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

'ಮಹದಾಯಿ' ಬಗ್ಗೆ ಬ್ರೇಕಿಂಗ್ ನ್ಯೂಸ್!
ಅಂದಹಾಗೆ ಮಹದಾಯಿ ಯೋಜನೆಯ ಕಾಮಗಾರಿ ಆರಂಭಕ್ಕೆ ಕೇಂದ್ರ ಸರ್ಕಾರದಿಂದ ಕೆಲವು ಅನುಮತಿ ಬರಬೇಕಿದೆ. ಕೇಂದ್ರ ಅನುಮತಿ ನೀಡಿದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಅಂತ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರೀಗ ಮಹತ್ವದ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ಎನ್.ಎಚ್. ಕೋನರಡ್ಡಿ, ಎಚ್.ವೈ. ಮೇಟಿ, ವಿನಯ ಕುಲಕರ್ಣಿ ಮತ್ತಿತರರು ನಿಯಮ 69 ರ ಅಡಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದರು. ಇನ್ನೂ, ಹಲವು ಜಿಲ್ಲೆಗಳಿಗೆ ಅನುಕೂಲವಾಗುವ ಈ ಯೋಜನೆಯ ಕಾಮಗಾರಿ ತ್ವರಿತವಾಗಿ ಆರಂಭಿಸಲು ಆಗ್ರಹಿಸಿದರು.
ನಾಲಾ ತಿರುವು ಕಾಮಗಾರಿಯ...
ಜಲ ಸಂಪನ್ಮೂಲ ಸಚಿವರ ಪರ ಉತ್ತರ ನೀಡಿದ ಎಚ್.ಕೆ. ಪಾಟೀಲ್ ಅವರು 'ಮಹದಾಯಿ ಯೋಜನೆ ಅಡಿ ಕಳಸಾ ಬಂಡೂರಿ ನಾಲಾ ತಿರುವು ಕಾಮಗಾರಿಯ ಕೈಗೊಳ್ಳಬೇಕಿದೆ. ಈಗಾಗಲೇ ಅಂದಾಜು ಪಟ್ಟಿ ಮತ್ತು ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಲಾಗಿದೆ. 49.73 ಹೆಕ್ಟೇರ್ ಅರಣ್ಯ ಜಮೀನನ್ನ ಈ ಮಹತ್ವದ ಯೋಜನೆಗಾಗಿ ಬಳಸಿಕೊಳ್ಳಲು ಕೇಂದ್ರ ಅರಣ್ಯ & ಪರಿಸರ ಸಚಿವಾಲಯದ ಅನುಮತಿ ಕೋರಲಾಗಿದೆ' ಅಂತಾ ಮಾಹಿತಿ ಕೂಡ ನೀಡಿದ್ದಾರೆ.
ಹುಲಿ ಸಂರಕ್ಷಣಾ ಪ್ರಾಧಿಕಾರದ ಅನುಮತಿ
ಹಾಗೇ, ಕೇಂದ್ರ ಹುಲಿ ಸಂರಕ್ಷಣಾ ಪ್ರಾಧಿಕಾರದ ಅನುಮತಿ ಕೂಡ ಬೇಕಿದೆ. ರಾಜ್ಯ ವನ್ಯಜೀವಿ ಮಂಡಳಿ ತನ್ನ ಶಿಫಾರಸಿನ ಜೊತೆ ಕೇಂದ್ರ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಎಲ್ಲ ಅನುಮತಿ ತ್ವರಿತವಾಗಿ ಕೊಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕಿದೆ. ಅನುಮತಿ ದೊರೆತ ತಕ್ಷಣವೇ ಕಾಮಗಾರಿಯ ಆರಂಭಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಒಟ್ನಲ್ಲಿ ಉತ್ತರ ಕರ್ನಾಟಕ ಭಾಗದ ಭವಿಷ್ಯಕ್ಕೆ ಅಗತ್ಯ ಇರುವ ಯೋಜನೆ ಜಾರಿಗೆ ನೂತನ ಸರ್ಕಾರವು ಸಿದ್ಧವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯೋಜನೆಗೆ ಅಗತ್ಯ ಇರುವ ಎಲ್ಲಾ ರೀತಿ ಸಿದ್ಧತೆ ಆರಂಭಿಸಿದೆ ಎನ್ನುವ ಮಾಹಿತಿ ಸಿಕ್ಕಿದ್ದು. ಈ ಯೋಜನೆಗೆ ಸಂಪೂರ್ಣ ಅನುಮತಿ ದೊರೆತ ನಂತರ ಯೋಜನೆ ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications