Ration: 'ರಾಜ್ಯದಲ್ಲಿ ಅಕ್ಕಿ, ಹಣ, ಇಂದಿರಾ ಕಿಟ್ ಕೂಡ ಇಲ್ಲ'
Ration: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಇದರಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದಾಗಿದೆ. ಇದರಡಿಯಲ್ಲಿ ಉಚಿತ ಪಡಿತರ ವಿತರಣೆ ಮಾಡಲಾಗುತ್ತಿದೆ. ಈ ಕುರಿತು ಗಂಭೀರ ಆರೋಪವೊಂದು ಕೇಳಿಬಂದಿದ್ದು, ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಎಪಿಎಲ್‌ಗೆ ವರ್ಗಾಹಿಸುವ ಕಾರ್ಯ ಮುಂದುವರೆದಿದೆ. ಸಾಮಾನ್ಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುತ್ತದೆ. ಆದರೆ, ಇದನ್ನು ಅನರ್ಹರು ಸಹ ಪಡೆದುಕೊಂಡು ಬಡರಿವರಿಗೆ ಸಿಗಬೇಕಾದ ಅಕ್ಕಿ ಹಾಗೂ ಸೌಲಭ್ಯಗಳನ್ನು ಕೊತ್ತುಕೊಳ್ಳುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಕೆಲಸವನ್ನು ಆಹಾರ ಇಲಾಖೆ ಮುಂದವರೆಸಿದೆ.

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡಲಾಗುತ್ತಿರವ ಪಡಿತರ ಕುರಿತು ಗಂಭೀರ ಆರೋಪಗಳು ಕೇಳಿಬರುತ್ತಲಿವೆ. ಇನ್ನೂ ಇದೀಗ ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದೆ. "10 ಕೆ.ಜಿ. ಅಕ್ಕಿ ಬೇಕೋ ಬೇಡ್ವೋ ಎಂದು ಕೇಳಿಕೊಂಡು ಬುರುಡೆ @siddaramaiah ಅವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರ ನೀಡಿದ ಅಕ್ಕಿಗೆ ತಮ್ಮ ಸರ್ಕಾರದ ಲೇಬಲ್ ಅಂಟಿಸಿ ವಿತರಿಸಿತು," ಎಂದು ಆಕ್ರೋಶ ವ್ಯಕ್ತಪಡಿಸಿದೆ.
"ತಾವು ಘೋಷಣೆ ಮಾಡಿದ್ದ ಹೆಚ್ಚುವರಿ 10 ಕೆ.ಜಿ. ಅಕ್ಕಿ ವಿತರಣೆ ಮಾಡುವ ಸಾಮರ್ಥ್ಯ ಇಲ್ಲದೇ, ಬಳಿಕ 5 ಕೆ.ಜಿ. ಅಕ್ಕಿಯ ಬದಲು ಹಣ ವಿತರಣೆ ಮಾಡುವುದಾಗಿ ಹೇಳಿ ಅದನ್ನು ಅರ್ಧದಲ್ಲಿ ಕೈ ಬಿಟ್ಟು, ಇಂದಿರಾ ಕಿಟ್ ಘೋಷಿಸಿತು. ಇದೀಗ ಕಿಟ್ ವಿತರಣೆಗೂ ಕುಂಟು ನೆಪ ಹುಡುಕುತ್ತಿದೆ. ಅವೈಜ್ಞಾನಿಕ ಗ್ಯಾರಂಟಿಗಳನ್ನು ಘೋಷಿಸಿ ಅವುಗಳನ್ನು ನೀಡಲು ಯೋಗ್ಯತೆ ಇಲ್ಲದ @INCKarnataka ಸರ್ಕಾರ ದಿನಕ್ಕೊಂದು ಕಳ್ಳ ನೆಪವೊಡ್ಡಿ ತಪ್ಪಿಸಿಕೊಳ್ಳಲು ವಾಮ ಮಾರ್ಗ ಹಿಡಿದಿದೆ," ಎಂದು ಬರೆದುಕೊಂಡಿದೆ.
ಈ ಆರೋಪ ಬಂದಿದ್ದೇ ರಾಜ್ಯ ಸರ್ಕಾರ ಸದ್ಯ ಇಂದಿರಾ ಕಿಟ್ ವಿತರಣೆ ಇಲ್ಲ. ಹೊಸ ವರ್ಷದ ಬಳಿಕ ಎಂದು ಹೇಳಿದ ಮೇಲೆ. ಈ ಹೇಳಿಕೆ ಕೇಳಿಬರುತ್ತಿದ್ದಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿವೆ.
"ಉಚಿತ, ಉಚಿತ ಎನ್ನುತ್ತಾ ಅಧಿಕಾರಕ್ಕೆ ಬಂದ @INCKarnataka ಸರ್ಕಾರಕ್ಕೆ, ಇಲ್ಲಿಯವರೆಗೂ ನುಡಿದಂತೆ 10 ಕೆ.ಜಿ. ಅಕ್ಕಿಯನ್ನು ಕೊಡಲು ಸಾಧ್ಯ ಆಗಿಲ್ಲ. ಐದು ಕೆ.ಜಿ ಅಕ್ಕಿಯ ಬದಲು ಹಣ ನೀಡುತ್ತೇವೆ ಎಂದು ಹೇಳಿ ಯಾಮಾರಿಸಿಯೂ ಆಯಿತು. ಈಗ ಇಂದಿರಾ ಕಿಟ್ ಹೆಸರಿನಲ್ಲಿ ಹೊಸ ಸ್ಕ್ಯಾಮ್ ಒಂದು ತಯಾರಿಯಲ್ಲಿದೆ," ಎಂದು ಆರೋಪ ಮಾಡಿದೆ.
"ಇಂದಿರಾ ಕಿಟ್ ಯೋಜನೆಯಡಿ ವಿವಿಧ ಮೂಲಗಳಿಂದ ಆಹಾರ ಪದಾರ್ಥ ಸಂಗ್ರಹಿಸುವುದರಿಂದ ಪದಾರ್ಥಗಳ ಪ್ರಮಾಣ ಮತ್ತು ಗುಣಮಟ್ಟದಲ್ಲಿ ಲೋಪ ಆಗಬಹುದು ಎಂದು ಆರ್ಥಿಕ ಇಲಾಖೆಯ ಎಚ್ಚರಿಕೆಯ ಹೊರತಾಗಿಯೂ ಲೂಟಿ ಹೊಡೆಯಲು ಹೊಸ ಯೋಜನೆ ರೂಪಿಸಿದಂತಿದೆ. ಮಾನ್ಯ @siddaramaiah ಅವರೇ, ಇಂದಿರಾ ಕಿಟ್ ಹೆಸರಿನಲ್ಲಿ ಬಡ ಜನರ ಜೀವದ ಜೊತೆ ಚೆಲ್ಲಾಟ ಆಡಬೇಡಿ," ಎಂದು ಟ್ವಿಟರ್‌ನಲ್ಲಿ ಬರೆದುಕೊಳ್ಳುವ ಮೂಲಕ ವಾಗ್ದಾಳಿ ನಡೆಸಿದೆ.
ಮತ್ತೊಂದೆಡೆ ಸದ್ಯ ರಾಜ್ಯದಲ್ಲಿ ಇದೀಗ ರಾಜ್ಯ ಸರ್ಕಾರ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಅಂತಹವರನ್ನು ಎಪಿಎಲ್‌ಗೆ ವರ್ಗಾಹಿಸುತ್ತಿದೆ. ಅಲ್ಲದೆ, ಕೆಲವರ ವಿರುದ್ಧ ದಂಡಾಸ್ತ್ರದ ಹೊರೆ ಹೊರೆಸಲು ಮುಂದಾಗಿದೆ ಎನ್ನುವ ಮಾತುಗಳು ಕೂಡ ಜೋರಾಗಿ ಕೇಳಿಬರುತ್ತಿದೆ.












Click it and Unblock the Notifications