Viral: ರೈಲಿನ ಫಸ್ಟ್ ಕ್ಲಾಸ್ ಎಸಿ ಬೋಗಿ ಈಗ ಹನಿಮೂನ್ ರೂಮ್; ಬೆಡ್ ಅಲಂಕಾರ ನೋಡಿ ನೆಟ್ಟಿಗರು ಶಾಕ್
ನವದೆಹಲಿ: ಭಾರತೀಯ ರೈಲ್ವೆಯಲ್ಲಿ (Indian Railways) ಪ್ರತಿದಿನ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಕೆಲವರು ಆರಾಮದಾಯಕ ಜರ್ನಿಗಾಗಿ ಫಸ್ಟ್ ಕ್ಲಾಸ್ ಎಸಿ (1st AC) ಕೋಚ್ ಬುಕ್ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ, ಇಲ್ಲೊಬ್ಬ ಮಹಾಶಯ ತನ್ನ ಹೆಂಡತಿಯೊಂದಿಗೆ ರೋಮ್ಯಾಂಟಿಕ್ ಜರ್ನಿ ಮಾಡಲು ಇಡೀ ಫಸ್ಟ್ ಕ್ಲಾಸ್ ಎಸಿ ಕಂಪಾರ್ಟ್‌ಮೆಂಟ್ ಅನ್ನೇ ಹನಿಮೂನ್ ಸೂಟ್ ಆಗಿ ಬದಲಾಯಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ರೈಲಿನಲ್ಲಿ ಮೊದಲ ರಾತ್ರಿಯ ಸೆಟಪ್
ಎಕ್ಸ್ ಖಾತೆಯಲ್ಲಿ '@Madan_Chikna' ಎಂಬ ಬಳಕೆದಾರರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಮೊದಲ ದರ್ಜೆಯ ಎಸಿ ಬೋಗಿಯ ಖಾಸಗಿ ಕ್ಯಾಬಿನ್ ಅನ್ನು ನವವಿವಾಹಿತರ ಕೋಣೆಯಂತೆ ಸಿಂಗಾರ ಮಾಡಲಾಗಿದೆ. ರೈಲಿನ ಬೆಡ್ ಮೇಲೆ ಕೆಂಗುಲಾಬಿಯ ದಳಗಳನ್ನು (Rose Petals) ಹರಡಲಾಗಿದ್ದು, ಸೀಲಿಂಗ್ ಮತ್ತು ಗೋಡೆಗಳ ಮೇಲೆ ಕೆಂಪು ಮತ್ತು ಬಿಳಿ ಬಣ್ಣದ ಬಲೂನ್‌ಗಳನ್ನು ಅಲಂಕರಿಸಲಾಗಿದೆ. ಅಷ್ಟಕ್ಕೇ ನಿಲ್ಲದೆ ಕಂಪಾರ್ಟ್‌ಮೆಂಟ್ ಸುತ್ತಲೂ ಹೂವಿನ ಹಾರಗಳು ಮತ್ತು ಸಣ್ಣ ಸಣ್ಣ ಲೈಟ್ಸ್‌ಗಳನ್ನು ಹಾಕಲಾಗಿದ್ದು, ಗೋಡೆಯ ಮೇಲೆ "I Love You" ಎಂದು ಬರೆಯಲಾದ ಎಲ್‌ಇಡಿ ಲೈಟ್ಸ್ ಮಿನುಗುತ್ತಿವೆ. ಸಾಮಾನ್ಯವಾಗಿ ಮೊದಲ ರಾತ್ರಿಗೆ ಕೋಣೆ ಅಲಂಕರಿಸಿದಂತೆ ರೈಲಿನ ಬೋಗಿಯನ್ನು ರೆಡಿ ಮಾಡಲಾಗಿದೆ.

ಈ ವಿಚಿತ್ರ ಅಲಂಕಾರವನ್ನು ನೋಡಿ ಸೋಷಿಯಲ್ ಮೀಡಿಯಾ ಮಂದಿ ಇದನ್ನು, ರೈಲಿನಲ್ಲಿ ಮೊದಲ ರಾತ್ರಿಯ ಸೆಟಪ್ ಎಂದು ಕರೆಯುತ್ತಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಲೆಳೆಯಲು ಶುರು ಮಾಡಿದ್ದಾರೆ. ಒಬ್ಬ ಬಳಕೆದಾರ, "ಟ್ರೈನ್ ಸ್ಟೇಷನ್‌ನಲ್ಲಿ ಬಂದು ನಿಂತರೂ ಈ ಬೋಗಿ ಮಾತ್ರ ಅಲ್ಲಾಡುತ್ತಲೇ ಇರುತ್ತದೆ ಎಂದು ಜೋಕ್ ಮಾಡಿದ್ದಾರೆ. ಮತ್ತೊಬ್ಬ "ಈ ಅವಕಾಶ ಪಡೆದ ಜೋಡಿ ಆದ್ರೂ ಯಾರು" ಎಂದು ಕಾಮೆಂಟ್ ಮಾಡಿದ್ದಾರೆ.
What’s happening here 🥺😭🥺😭🥺😭 pic.twitter.com/PGW1TqmyWc
— Godman Chikna (@Madan_Chikna) July 7, 2026
ರೈಲ್ವೆ ನಿಯಮಗಳು ಏನು ಹೇಳುತ್ತವೆ?
ಸಾಮಾನ್ಯವಾಗಿ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರ ಖಾಸಗಿತನಕ್ಕೆ ಅವಕಾಶವಿದೆ. ಆದರೆ ರೈಲಿನ ಒಳಗೆ ಇಂತಹ ಪ್ರಕಾಶಮಾನವಾದ ಲೈಟ್‌ಗಳು, ಬಲೂನ್‌ಗಳು ಅಥವಾ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಬೋಗಿಯ ವಿನ್ಯಾಸವನ್ನೇ ಬದಲಾಯಿಸುವುದು ರೈಲ್ವೆ ಸುರಕ್ಷತಾ ನಿಯಮಗಳ ಅಡಿಯಲ್ಲಿ ಅಪರಾಧವಾಗುತ್ತದೆ. ಈ ರೊಮ್ಯಾಂಟಿಕ್ ಡೆಕೋರೇಶನ್ ಮಾಡಲು ರೈಲ್ವೆ ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಸಾರ್ವಜನಿಕ ಸಾರಿಗೆಯನ್ನು ಇಷ್ಟೊಂದು ಬೋಲ್ಡ್ ಆಗಿ ಹನಿಮೂನ್ ರೂಮ್ ಮಾಡಿಕೊಂಡಿರುವ ಈ ಜೋಡಿಯ ಐಡಿಯಾ ಮಾತ್ರ ಸದ್ಯ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ.
ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್‌ನಲ್ಲಿ ಜನರ ಗಮನ ಸೆಳೆಯಲು ಜನರು ಇಂತಹ ಸಾಹಸಗಳಿಗೆ ಕೈಹಾಕುತ್ತಿದ್ದಾರೆ. ಈ ಹಿಂದೆ ಮೆಟ್ರೋ ರೈಲಿನ ಒಳಗೆ ಬರ್ತ್‌ಡೇ ಸೆಲೆಬ್ರೇಷನ್ ಮಾಡುವುದು, ಡ್ಯಾನ್ಸ್ ಮಾಡುವುದನ್ನು ನೋಡಿದ್ದೆವು. ಆದರೆ ಈಗ ಭಾರತೀಯ ರೈಲ್ವೆಯಲ್ಲೇ 'ಹನಿಮೂನ್ ಸೆಟಪ್' ಮಾಡಿರುವುದನ್ನು ನೋಡಿ ಜವಾಬ್ದಾರಿಯುತ ನಾಗರಿಕರು "ಹಣ ಕೊಟ್ಟು ಫಸ್ಟ್ ಎಸಿ ಟಿಕೆಟ್ ಬುಕ್ ಮಾಡಿದ ತಕ್ಷಣ ಇಡೀ ರೈಲು ಇವರ ಸ್ವಂತ ಆಸ್ತಿಯಾಗುವುದಿಲ್ಲ, ರೈಲ್ವೆ ಇಲಾಖೆ ಇವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು" ಎಂದೂ ಆಗ್ರಹಿಸುತ್ತಿದ್ದಾರೆ.













Click it and Unblock the Notifications