ಬೆಂಗಳೂರು ಬಿಟ್ಟು ಮನಾಲಿಗೆ ಹೋದ ಕಾರ್ಪೊರೇಟ್ ದಂಪತಿ: ತಿಂಗಳಿಗೆ ₹30,000 ಉಳಿತಾಯದ ಹಿಂದಿನ ರಹಸ್ಯವೇನು ?

ಬೆಂಗಳೂರಿನ ಕಾರ್ಪೊರೇಟ್ ಜೀವನಕ್ಕೆ ಗುಡ್‌ಬೈ ಹೇಳಿದ ದಂಪತಿಯೊಂದು ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹೊಸ ಜೀವನ ಆರಂಭಿಸಿದ್ದು, ಇವರ ಜೀವನ ಶೈಲಿಯು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೀಗ ಈ ದಂಪತಿಯ ಪೋಸ್ಟ್‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಣ ಉಳಿಸುವ ಉದ್ದೇಶದಿಂದ ಬೆಂಗಳೂರು ತೊರೆದಿಲ್ಲ. ಉತ್ತಮ ಜೀವನಶೈಲಿಗಾಗಿ ದಂಪತಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಆದರೆ, ಸ್ಥಳಾಂತರದ ಬಳಿಕ ಪ್ರತಿ ತಿಂಗಳು ₹30,000ಕ್ಕೂ ಹೆಚ್ಚು ಉಳಿತಾಯವಾಗುತ್ತಿರುವ ಅನುಭವವನ್ನು ಅವರು ಹಂಚಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಬೆಂಗಳೂರಿನಿಂದ ಹಿಮಾಚಲ ಪ್ರದೇಶದ ಮನಾಲಿಗೆ ಸ್ಥಳಾಂತರಗೊಂಡು ಮಾಸಿಕ ₹30,000 ಉಳಿಸಲು ಪ್ರಾರಂಭಿಸಿದ ಬಗ್ಗೆ ಕಾರ್ಪೊರೇಟ್ ದಂಪತಿಗಳು ಗಮನ ಸೆಳೆದಿದ್ದಾರೆ.

ಪರ್ವತಗಳಲ್ಲಿನ ಜೀವನವನ್ನು ನಡೆಸುತ್ತಿರುವ ಈ ಜೋಡಿ, ಸಂತೋಷದ, ಪ್ರಯಾಣದ ಜೀವನವನ್ನು ಅನುಭವಿಸಲು ಹಾಗೂ ಉಳಿತಾಯ ಮಾಡಲು ಹಿಮಾಲಯನ್ ರೆಸಾರ್ಟ್ ಪಟ್ಟಣಕ್ಕೆ ತೆರಳಲಿಲ್ಲ ಎಂದು ಹೇಳಿಕೊಂಡಿದ್ದಾರೆ. ತಮ್ಮ ಕಾರ್ಪೊರೇಟ್ ಕೆಲಸದ ಜೊತೆಗೆ ಜೀವನಶೈಲಿಯಲ್ಲಿ ಬದಲಾವಣೆಯನ್ನು ಬಯಸಿದ್ದ ಅಂಜಲಿ ಮತ್ತು ನಮನ್ ಎಂಬ ದಂಪತಿ ಈ ಗೇಟ್‌ವೇ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ನಗರಗಳಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ನಿರ್ವಹಣೆ, ಹೆಚ್ಚಿನ ಒತ್ತಡದ ಜೀವನಶೈಲಿಯ ನಡುವೆ, ವಿಶ್ರಾಂತಿ ಪಡೆಯುವ ಅಗತ್ಯ ಆದ್ಯತೆಯಾಗಿದೆ.

Bengaluru

Bengaluru: 'ಉಳಿತಾಯವು ಕೇವಲ ಬೋನಸ್ ಆಗಿತ್ತು'

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹೇಳಿಕೊಂಡಿರುವಂತೆ ಈ ಬದಲಾವಣೆಯು ಅವರ ಜೀವನಶೈಲಿಯನ್ನು ಮಾತ್ರವಲ್ಲ, ಮಾಸಿಕ ಖರ್ಚನ್ನೂ ಗಮನಾರ್ಹವಾಗಿ ಕಡಿಮೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ನಮನ್ ಜೊತೆ @anjali.aur.naman ಎಂಬ ಜಂಟಿ ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ ಅಂಜಲಿ ಎನ್ನುವವರು "ನಾವು ಯಾವುದೇ ವಿಶೇಷ ಪ್ರಯತ್ನವಿಲ್ಲದೇ ಪ್ರತಿ ತಿಂಗಳು ₹30,000ಕ್ಕೂ ಹೆಚ್ಚು ಉಳಿಸಲು ಆರಂಭಿಸಿದ್ದೇವೆ. ನಾವು ಅಂಜಲಿ ಮತ್ತು ನಮನ್. ಮನಾಲಿಯಲ್ಲಿ ವಾಸಿಸುವ ರಿಮೋಟ್ ಕಾರ್ಪೊರೇಟ್ ದಂಪತಿ. ಹಣ ಉಳಿಸಲು ನಾವು ಇಲ್ಲಿಗೆ ಬಂದಿಲ್ಲ. ನಮ್ಮ ಕಾರ್ಪೊರೇಟ್ ಉದ್ಯೋಗಗಳನ್ನು ಮುಂದುವರಿಸಿಕೊಂಡೇ ನಿಧಾನಗತಿಯ ಜೀವನವನ್ನು ಅನುಭವಿಸಲು ಇಲ್ಲಿಗೆ ಸ್ಥಳಾಂತರಗೊಂಡಿದ್ದೇವೆ" ಎಂದು ಹೇಳಿದ್ದಾರೆ.

ಈ ವೈರಲ್ ವಿಡಿಯೋ 1 ಲಕ್ಷಕ್ಕೂ ಹೆಚ್ಚು ವೀವ್ಸ್‌ ಕಂಡಿದೆ. ನಗರ ಜೀವನದಿಂದ ದೂರ ಸರಿದ ಬಳಿಕ ದೈನಂದಿನ ಖರ್ಚು ಹೇಗೆ ಸ್ವಾಭಾವಿಕವಾಗಿ ಕಡಿಮೆಯಾಯಿತು ಎಂಬುದನ್ನು ಅವರು ವಿವರಿಸಿದ್ದಾರೆ. ನಗರಗಳಲ್ಲಿ ವಾಸಿಸುವ ಬದಲು ಬೇರೆ ಸ್ಥಳವನ್ನು ಆಯ್ಕೆ ಮಾಡಿಕೊಂಡರೆ ಖರ್ಚನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನೂ ವಿವರಿಸಲಾಗಿದೆ. ಹಣ ಉಳಿಸುವುದು ತಮ್ಮ ಯೋಜನೆಯ ಭಾಗವೇ ಇರಲಿಲ್ಲ ಎಂದು ಹೇಳಿದ ಅಂಜಲಿ, ಮನಾಲಿಗೆ ಬರುವ ಮೊದಲು ₹45,000 ಬಾಡಿಗೆ ನೀಡುತ್ತಿದ್ದರೆ, ಈಗ ₹28,000 ಮಾತ್ರ ಪಾವತಿಸುತ್ತಿರುವುದರಿಂದ ಪ್ರತಿ ತಿಂಗಳು ₹17,000 ಉಳಿತಾಯವಾಗುತ್ತಿದೆ ಎಂದು ತಿಳಿಸಿದರು. ರಿಮೋಟ್ ಕೆಲಸ ಮಾಡುವುದರಿಂದ ಕಚೇರಿಗೆ ಪ್ರಯಾಣಿಸುವ ಅಗತ್ಯವಿಲ್ಲದ ಕಾರಣ ಮತ್ತೊಂದು ₹3,000 ಉಳಿಯುತ್ತಿದೆ ಎಂದರು.

ಕಚೇರಿಯ ಊಟ ಮತ್ತು ಕಾಫಿಗೆ ತಿಂಗಳಿಗೆ ಸುಮಾರು ₹5,000 ಖರ್ಚಾಗುತ್ತಿತ್ತು. ಈಗಿನ ಜೀವನಶೈಲಿಯಿಂದ ಆ ವೆಚ್ಚವೇ ಇಲ್ಲದಂತಾಗಿದೆ. ಕಾಫಿ ಹಾಗೂ ತಿಂಡಿಗಳ ಖರ್ಚು ಕಡಿಮೆಯಾದ ಕಾರಣ ಪ್ರತಿ ತಿಂಗಳು ₹2,500 ಉಳಿತಾಯವಾಗುತ್ತಿದೆ. ವಾರಾಂತ್ಯದ ಖರ್ಚು ಕೂಡ ₹5,000-₹6,000ರಿಂದ ಗಮನಾರ್ಹವಾಗಿ ಇಳಿದಿದೆ ಎಂದು ಅಂಜಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+