ಕರ್ನಾಟಕದ ಮೊದಲ ಚರ್ಮ ಬ್ಯಾಂಕ್‌ ಉದ್ಘಾಟನೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮಾರ್ಚ್ 30 : ಕರ್ನಾಟಕದ ಮೊದಲ ಚರ್ಮ ಬ್ಯಾಂಕ್ ಉದ್ಘಾಟನೆಗೊಂಡಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಅವರಣದಲ್ಲಿ ಸುಮಾರು 60 ಲಕ್ಷ ರೂ.ಗಳ ವೆಚ್ಚದಲ್ಲಿ ಚರ್ಮ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ.

ಬುಧವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು, ಚರ್ಮ ಬ್ಯಾಂಕ್ ಉದ್ಘಾಟನೆ ಮಾಡಿದರು. ಬೆಂಗಳೂರು ವೈದ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ)ಯು ರೋಟರಿ ಕ್ಲಬ್ ಮತ್ತು ಆರ್ಶೀವಾದ್ ಸ್ಪೈಸ್ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಚರ್ಮ ಬ್ಯಾಂಕ್ ಆರಂಭಿಸಿದೆ. [ಚರ್ಮದಾನ ಅಭಿಯಾನಕ್ಕೆ ನಟ ಪ್ರೇಮ್ ರಿಂದ ಚಾಲನೆ]

skin bank

ಇದು ರಾಜ್ಯದ ಮೊದಲ ಮತ್ತು ದೇಶದ ಮೂರನೇ ಚರ್ಮ ಬ್ಯಾಂಕ್ ಆಗಿದೆ. ಶೇ 25 ರಿಂದ 30ರಷ್ಟು ಸುಟ್ಟ ಗಾಯಗಳಾದಾಗ ರೋಗಿಯ ದೇಹದ ಇತರ ಭಾಗದಿಂದ ಚರ್ಮವನ್ನು ತೆಗೆದು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಆದರೆ, ಶೇ 30ಕ್ಕಿಂತ ಹೆಚ್ಚು ಸುಟ್ಟಗಾಯಗಳಾಗಿದ್ದರೆ ಚರ್ಮ ಬ್ಯಾಂಕ್‌ಗಳಲ್ಲಿ ಸಂಗ್ರಹಿಸಿದ ಚರ್ಮವನ್ನು ಬಳಸಬಹುದಾಗಿದೆ. [ಬೆಂಗಳೂರಲ್ಲಿ ಹೃದಯ ಸಂಬಂಧಿ 3 ವಿಶೇಷ ಘಟಕ ಸ್ಥಾಪನೆ]

ಏನಿದು ಚರ್ಮ ಬ್ಯಾಂಕ್? : ಮೃತಪಟ್ಟ ವ್ಯಕ್ತಿಯ ಚರ್ಮವನ್ನು 6 ಗಂಟೆಗಳಲ್ಲಿ ಪಡೆದು ಬ್ಯಾಂಕ್‌ಗಳಲ್ಲಿ ಸಂರಕ್ಷಿಸಿ ಇಡಬೇಕು. ಚರ್ಮವನ್ನು ದಾನ ಪಡೆಯುವ ಮೊದಲು ಎಚ್‌ಐವಿ, ಅಲರ್ಜಿ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಚರ್ಮ ರೋಗ ಕಂಡುಬಂದರೆ ಅವರ ಚರ್ಮವನ್ನು ದಾನ ಪಡೆಯಲಾಗುವುದಿಲ್ಲ.

-
-
-
-
-

ದಾನವಾಗಿ ಪಡೆದ ಚರ್ಮವನ್ನು ರಕ್ತ ಸಂಗ್ರಹಣೆ ಮಾಡುವಂತೆ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಂಗ್ರಹಣೆ ಮಾಡಲಾಗುತ್ತದೆ. ನಾನಾ ಅವಘಡಗಳಿಂದ ದೇಹವನ್ನು ಸುಟ್ಟುಕೊಂಡ ರೋಗಿಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡುವಾಗ ಇವುಗಳನ್ನು ಬಳಸಿಕೊಳ್ಳಲಾಗುತ್ತದೆ.

sharan prakash patil

ಯಾರು ಚರ್ಮದಾನ ಮಾಡಬಹುದು? : ಬೆಂಗಳೂರು ನಗರದಲ್ಲಿ ಈಗಾಗಲೇ ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಗಳ ಅಂಗಾಂಗಗಳನ್ನು ದಾನ ಮಾಡಲಾಗುತ್ತಿದೆ. ಹೀಗೆ ಅಂಗಾಂಗ ದಾನ ಮಾಡುವಂತೆ ಚರ್ಮ ದಾನಕ್ಕೂ ಮೊದಲು ಹೆಸರು ನೋಂದಣಿ ಮಾಡಬೇಕು. [ಕುಡ್ಲದಲ್ಲಿ ಮಿಡಿದ ಜೀವಂತ ಹೃದಯ ಬೆಂಗಳೂರಿಗೆ]

ಕುಟುಂಬದವರು ಒಪ್ಪಿಗೆ ಕೊಟ್ಟರೆ ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯಿಂದ ಚರ್ಮವನ್ನು ದಾನವಾಗಿ ಪಡೆಯಲಾಗುತ್ತದೆ. ಜೀವಂತ ಇರುವ ವ್ಯಕ್ತಿಯು ತಮ್ಮ ಸಂಬಂಧಿಗಳಿಗೆ ತೊಡೆ ಭಾಗದ ಚರ್ಮವನ್ನು ದಾನ ಮಾಡಬಹುದು. ಆ ಜಾಗದಲ್ಲಿ 3 ರಿಂದ 4ವಾರಗಳಲ್ಲಿ ಚರ್ಮ ಪುನಃ ಬೆಳೆಯುತ್ತದೆ. ಚರ್ಮದ ಕಸಿ ಮಾಡಲು ರಕ್ತ ಸೇರಿದಂತೆ ಯಾವುದೇ ಹೊಂದಾಣಿಕೆಯ ಅಗತ್ಯವಿಲ್ಲ.

ದೇಶದ 3ನೇ ಬ್ಯಾಂಕ್ : ಮುಂಬೈನ ರಾಷ್ಟ್ರೀಯ ಸುಟ್ಟಗಾಯಗಳ ಕೇಂದ್ರ ಮತ್ತು ಚೆನ್ನೈನ ರೈಟ್ಸ್ ಆಸ್ಪತ್ರೆಯಲ್ಲಿ ದೇಶದ ಎರಡು ಚರ್ಮ ಬ್ಯಾಂಕ್‌ಗಳಿವೆ. ಬೆಂಗಳೂರಿನಲ್ಲಿ ಸ್ಥಾಪನೆಯಾದ ಬ್ಯಾಂಕ್ ರಾಜ್ಯಕ್ಕೆ ಪ್ರಥಮ ಮತ್ತು ದೇಶದಲ್ಲಿ 3ನೇಯದಾಗಿದೆ. ಈ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸಲು ಇಬ್ಬರು ವೈದ್ಯರು ಮುಂಬೈನಲ್ಲಿ ತರಬೇತಿ ಪಡೆದು ಬಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka got its first skin bank on Wednesday, March 30, 2016. Sharan Prakash Patil Minister for Medical education inaugurated the skin bank at Victoria Hospital Bengaluru. In a skin bank, skin harvested from morgues is preserved for use for plastic surgeries and treatment of accident victims.
Please Wait while comments are loading...