ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ
ಬೆಂಗಳೂರು, ಏಪ್ರಿಲ್ 1: ಇಂದಿನಿಂದ ಪೆಟ್ರೋಲ್, ಡೀಸೆಲ್ ಹಾಗೂ ಮದ್ಯದ ಮೇಲಿನ ತೆರಿಗೆ ಹೆಚ್ಚಳವಾಗಿದೆ.
ಮಂಗಳವಾರ ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ ತೆರಿಗೆ ಹೆಚ್ಚಳವಾಗಿದೆ. ತೆರಿಗೆ ಹೆಚ್ಚಳ ಮಾಡುವುದಾಗಿ ಬಜೆಟ್ ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಪೆಟ್ರೋಲ್ ದರ 1.14 ರು. ಹೆಚ್ಚಳ, ಡೀಸೆಲ್ ದರ 1.12 ರೂ ಹೆಚ್ಚಳವಾಗಿದೆ.
ಪೆಟ್ರೋಲ್ ಮೇಲಿನ ತೆರಿಗೆಯನ್ನ ಶೇಕಡಾ 30% ರಿಂದ 32% ಕ್ಕೆ ಹೆಚ್ಚಳ ಮಾಡಲಾಗಿತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 19%ರಿಂದ ಶೇಕಡಾ 24)1% ಏರಿಕೆ ಮಾಡಲಾಗಿತ್ತು.

ಅದೇ ರೀತಿ ಅಬಕಾರಿ ತೆರಿಕೆ ಹೆಚ್ಚಳವಾಗಲಿದ್ದು ಮದ್ಯದ ಮೇಲಿನ ತೆರಿಗೆ ಶೇ 4% ಹೆಚ್ಚಳವಾಗಲಿದ್ದು, ಮಂಗಳವಾರ ರಾತ್ರಿಯಿಂದಲೇ ಇದು ಜಾರಿಗೆ ಬಂದಿದೆ.
ಈ ಹೊಸ ಮಾರಾಟ ತೆರಿಗೆಯು ಏಪ್ರಿಲ್ 1ರಿಂದ ಜಾರಿಗೆ ಬರಬೇಕಾಗಿದೆ. ಹೊಸ ತೆರಿಗೆ ವಿಧಾನಗಳಿಂದ ಪೆಟ್ರೋಲ್ ದರವು ಲೀಟರ್‌ಗೆ 1.14 ರುಪಾಯಿ ಏರಿಕೆಯಾಗಲಿದೆ. ಡೀಸೆಲ್ ದರವು 1.12 ರುಪಾಯಿ ಹೆಚ್ಚಾಗಲಿದೆ.
ಆದರೆ ಸದ್ಯ ಕೊರೊನಾವೈರಸ್ ಸೋಂಕಿನಿಂದ ದೇಶದ ಹಾಗೂ ರಾಜ್ಯದ ಜನತೆಯು ತತ್ತರಿಸಿದ್ದು, ಈ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಏರಿಕೆ ಮಾಡಿದರೆ ಜನತೆಯ ಕೆಂಗಣ್ಣಿಗೆ ಗುರಿಯಾಗಬೇಕಾದೀತು ಎನ್ನುವ ಚಿಂತೆಯು ಸರ್ಕಾರವನ್ನು ಕಾಡುತ್ತಿದೆ.












Click it and Unblock the Notifications