ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಆಸೆಗೆ ಎಳ್ಳುನೀರು ಬಿಡಲಿದೆಯೇ ಸಿದ್ದರಾಮಯ್ಯ ವಾದ?

|
Google Oneindia Kannada News

Recommended Video

ಸದನದಲ್ಲಿ ಸಿದ್ದರಾಮಯ್ಯ ಮಂಡಿಸಿದ ವಾದದಿಂದ ಬಿ ಎಸ್ ಯಡಿಯೂರಪ್ಪ ಆಸೆ ನಿರಾಸೆ?

ಬೆಂಗಳೂರು, ಜುಲೈ 18: ಕಲಾಪವು ಭೋಜನ ವಿರಾಮಕ್ಕೆ ತೆರಳುವ ಮುನ್ನ ಸಿದ್ದರಾಮಯ್ಯ ಅವರ ಪ್ರಬಲವಾದ ಒತ್ತಾಯವೊಂದನ್ನು ಸ್ಪೀಕರ್ ರಮೇಶ್ ಕುಮಾರ್ ಅವರ ಮುಂದಿಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಕಲಾಪದಲ್ಲಿ ಮಂಡಿಸಿದ ವಾದ ಯಡಿಯೂರಪ್ಪ ಅವರ ಸಿಎಂ ಆಗುವ ಆಸೆಗೆ ಎಳ್ಳು-ನೀರು ಬಿಡಲಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಅತೃಪ್ತ ಶಾಸಕರ ಪ್ರಕರಣ ಇತ್ಯರ್ಥವಾಗುವವರೆಗೂ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಸಿದ್ದರಾಮಯ್ಯ ಅವರು ಪಕ್ಷಾಂತರ ಕಾಯ್ದೆಯ ಕೆಲವು ನಿಯಮಗಳನ್ನು ಉಲ್ಲೇಖಿಸಿ ಸಶಕ್ತವಾಗಿಯೇ ವಾದ ಮಂಡಿಸಿದರು.

ವಿಶ್ವಾಸಮತ ಯಾಚನೆ LIVE: ಈಗ ವಿಶ್ವಾಸಮತ ಪಡೆದುಕೊಳ್ಳುವುದು ಸರಿಯಲ್ಲ: ಸಿದ್ದರಾಮಯ್ಯ ವಿಶ್ವಾಸಮತ ಯಾಚನೆ LIVE: ಈಗ ವಿಶ್ವಾಸಮತ ಪಡೆದುಕೊಳ್ಳುವುದು ಸರಿಯಲ್ಲ: ಸಿದ್ದರಾಮಯ್ಯ

'ಶಾಸಕಾಂಗ ಪಕ್ಷದ ನಾಯಕನಾಗಿ ಶಾಸಕರಿಗೆ ವ್ಹಿಪ್ ನೀಡುವುದು ಸಂವಿಧಾನ ನನಗೆ (ಶಾಸಕಾಂಗ ಪಕ್ಷದ ನಾಯಕ) ಹಾಗೂ ಎಲ್ಲ ರಾಜಕೀಯ ಪಕ್ಷಕ್ಕೆ ನೀಡಿರುವ ಹಕ್ಕು' ಎಂದ ಸಿದ್ದರಾಮಯ್ಯ. ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ಶಾಸಕರನ್ನು ಸದನಕ್ಕೆ ಬರುವಂತೆ ಅಥವಾ ಬಾರದಂತೆ ಒತ್ತಾಯ ಹೇರುವಂತಿಲ್ಲ ಎಂದಾಗಿದೆ. ಹೀಗಿದ್ದಾಗ ನಾವು ನೀಡಿನ ವ್ಹಿಪ್ ಅನ್ನು ಸ್ವೀಕರಿಸದಿರಲು ಶಾಸಕರ ಮೇಲೆ ಸುಪ್ರೀಂ ತೀರ್ಪು ಪ್ರಭಾವ ಬೀರುತ್ತಿದೆ ಎಂದು ಸಿದ್ದರಾಮಯ್ಯ ವಾದಿಸಿದರು.

'ಶಾಸಕರ ಪ್ರಕರಣ ಇತ್ಯರ್ಥದ ನಂತರ ವಿಶ್ವಾಸಮತ ಪ್ರಕ್ರಿಯೆ'

'ಶಾಸಕರ ಪ್ರಕರಣ ಇತ್ಯರ್ಥದ ನಂತರ ವಿಶ್ವಾಸಮತ ಪ್ರಕ್ರಿಯೆ'

ಶಾಸಕರ ಪ್ರಕರಣ ಮೊದಲಿಗೆ ಇತ್ಯರ್ಥವಾಗಲಿ ಅಥವಾ ಅವರು ಸದನಕ್ಕೆ ಹಾಜರಾಗಿ ತಮ್ಮ ನಿರ್ಣಯ ಪ್ರಕಟಿಸಲಿ ಆ ನಂತರ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಕೈಗೆತ್ತಿಕೊಳ್ಳೋಣ. ಕಾನೂನು ಬದ್ಧವಾಗಿ ಸ್ಥಾಪಿತವಾದ ಸರ್ಕಾರವನ್ನು ವಿಧಾನಸಭೆಯ ಸದಸ್ಯರ ಅನುಪಸ್ಥಿತಿಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸುವುದು ಅಸಾಂವಿಧಾನಿಕ ಎಂದು ಸಿದ್ದರಾಮಯ್ಯ ವಾದ ಮಂಡಿಸಿದರು.

ಕ್ರಿಯಾಲೋಪ ಎತ್ತಿದ ಸಿದ್ದರಾಮಯ್ಯ: ಬಿಜೆಪಿಯಿಂದ ಗದ್ದಲ ಕ್ರಿಯಾಲೋಪ ಎತ್ತಿದ ಸಿದ್ದರಾಮಯ್ಯ: ಬಿಜೆಪಿಯಿಂದ ಗದ್ದಲ

ಅತೃಪ್ತ ಶಾಸಕರು ಯಾರ ಪರವಾದರೂ ಮತ ಚಲಾಯಿಸಲಿ

ಅತೃಪ್ತ ಶಾಸಕರು ಯಾರ ಪರವಾದರೂ ಮತ ಚಲಾಯಿಸಲಿ

ಅತೃಪ್ತ ಶಾಸಕರು ವ್ಹಿಪ್ ಸ್ವೀಕರಿಸಿ ಸದನಕ್ಕೆ ಹಾಜರಾಗಿ ಸರ್ಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿ ಪರವಾಗಿ ಅಥವಾ ವಿರುದ್ಧವಾಗಿಯಾದರೂ ಮತ ಚಲಾಯಿಸಲಿ ಎಂಬುದು ಸಿದ್ದರಾಮಯ್ಯ ಅವರ ವಾದದ ಸಾರ. ಸಿದ್ದರಾಮಯ್ಯ ಅವರು ಸುದೀರ್ಘವಾಗಿ ತಮ್ಮ ವಾದವನ್ನು ಸ್ಪೀಕರ್ ಮುಂದೆ ಮಂಡಿಸಿದರು. ಸಿದ್ದರಾಮಯ್ಯ ಅವರು ಮಾತನಾಡುವಾಗ ಹಲವು ಬಾರಿ ಬಿಜೆಪಿ ಸದಸ್ಯರು ಅಡ್ಡಿಪಡಿಸಿದ ಘಟನೆ ಸಹ ನಡೆಯಿತು.

'ಪಕ್ಷಕ್ಕೆ ನೀಡಲಾಗಿರುವ ಹಕ್ಕಿನ ಉಲ್ಲಂಘನೆ ಆಗಿದೆ'

'ಪಕ್ಷಕ್ಕೆ ನೀಡಲಾಗಿರುವ ಹಕ್ಕಿನ ಉಲ್ಲಂಘನೆ ಆಗಿದೆ'

ಶಾಸಕರು ಒಟ್ಟಾಗಿ ರಾಜೀನಾಮೆ ನೀಡಿದ್ದಾರೆ, ಒಂದೇ ವಾಹನದಲ್ಲಿ ಪ್ರಯಾಣಿಸಿದ್ದಾರೆ ಇವರ ಈ ವರ್ತನೆ ಕಾನೂನು ಬದ್ಧವಾಗಿ ಸ್ಥಾಪಿತವಾದ ಸರ್ಕಾರವನ್ನು ಕೆಡವುವ ಕುಟಿಲತೆಯನ್ನು ಸಾಬೀತುಪಡಿಸುತ್ತಿದೆ. ಇದೆಲ್ಲವೂ ಪಕ್ಷದ ವಿರುದ್ಧ ಚಟುವಟಿಕೆ ಇದನ್ನು ನಿಯಂತ್ರಿಸಲೆಂದೇ ಸಂವಿಧಾನವು 10 ನೇ ಷೆಡ್ಯೂಲ್‌ನಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಇದೆ. ಇಂದಿನ ಪರಿಸ್ಥಿತಿಯಲ್ಲಿ ಅದನ್ನು ನಾವು ಪ್ರಯೋಗಿಸುವ ಅವಕಾಶ ಇಲ್ಲದಾಗಿದೆ. ಇದು ಪಕ್ಷದ ಹಕ್ಕು ಉಲ್ಲಂಘನೆ ಎಂದು ಸಿದ್ದರಾಮಯ್ಯ ವಾದಿಸಿದರು.

ಹೋಟೆಲಿಗೆ ಹಾಜರ್, ಸದನಕ್ಕೆ ಚಕ್ಕರ್, ಇದು ವಿಶ್ವಾಸಮತ ಹಾಜರಿ ಪುಸ್ತಕ!ಹೋಟೆಲಿಗೆ ಹಾಜರ್, ಸದನಕ್ಕೆ ಚಕ್ಕರ್, ಇದು ವಿಶ್ವಾಸಮತ ಹಾಜರಿ ಪುಸ್ತಕ!

'ನಮ್ಮ ಕಡೆಯ ವಾದ ಸುಪ್ರೀಂನಲ್ಲಿ ಮಂಡನೆ ಆಗಿಲ್ಲ'

'ನಮ್ಮ ಕಡೆಯ ವಾದ ಸುಪ್ರೀಂನಲ್ಲಿ ಮಂಡನೆ ಆಗಿಲ್ಲ'

ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ಬಗ್ಗೆಯೂ ಸದನದ ಗಮನ ಸೆಳೆದ ಸಿದ್ದರಾಮಯ್ಯ, ಹತ್ತು ಅತೃಪ್ತ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಹಾಕಿಕೊಂಡಿದ್ದ ಅರ್ಜಿಯ ವಿಚಾರಣೆಯಲ್ಲಿ ಮುಖ್ಯಮಂತ್ರಿ ಅವರನ್ನು ಹಾಗೂ ಸ್ಪೀಕರ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಯಿತು. ಆದರೆ ಶಾಸಕಾಂಗ ಪಕ್ಷದ ನಾಯಕ ಅಥವಾ ಪಕ್ಷಕ್ಕೆ ಪ್ರತಿವಾದಿ ಸ್ಥಾನ ನೀಡಿಲ್ಲ. ಹಾಗಾಗಿ ನಮ್ಮ ವಾದವನ್ನು ಅಥವಾ ನಮ್ಮ ಕಡೆಯ ನ್ಯಾಯ ನಮಗೆ ದೊರೆತಿಲ್ಲವಾದ್ದರಿಂದ ಈ ಪ್ರಕರಣ ಇತ್ಯರ್ಥವಾಗಿಲ್ಲವೆಂದು ಈಗ ಭಾವಿಸುವಂತಿಲ್ಲವೆಂಬ ಅರ್ಥದಲ್ಲಿ ಸಿದ್ದರಾಮಯ್ಯ ಮಾತನಾಡಿದರು.

English summary
Till we get clarification on Supreme Court's previous order, it is not appropriate to take floor test in this session which is against the Constitution said Siddaramaiah in assembly floor test session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X