
ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸದನದಲ್ಲಿ ಏನೆಲ್ಲ ನಡೆಯಲಿದೆ?
ಬೆಂಗಳೂರು, ಮೇ 18: ಒಂದು ಕಡೆ ಬಿಜೆಪಿ ಸರ್ಕಾರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಯತ್ನಿಸುತ್ತಿದ್ದರೆ, ಬಹುಮತವಿಲ್ಲದ ಸರ್ಕಾರ ಬೀಳಿಸಲು ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟ ಸಜ್ಜಾಗಿದೆ. ಮೇ 19ರಂದು ಸಂಜೆ ವಿಶ್ವಾಸಮತ ಯಾಚನೆ ನಡೆಯಲಿದೆ.
ನಾಳೆ ದಿನ ವಿಧಾನಸಭೆಯಲ್ಲಿ ಏನೆಲ್ಲ ಘಟನಾವಳಿಗಳು ನಡೆಯಲಿವೆ. ವಿಶ್ವಾಸಯತ ಯಾಚನೆ ಪ್ರಕ್ರಿಯೆ ಹೇಗೆ ನಡೆಯಲಿದೆ?
ಶನಿವಾರ ಸದನದಲ್ಲಿ ಸಂಭವಿಸಬಹುದಾದ ಮೂರು ಸಾಧ್ಯತೆಗಳು
ಈ ಹಿಂದೆ ವಿಶ್ವಾಸಮತ ಪ್ರಕ್ರಿಯೆ ನಡೆಸುವಲ್ಲಿ ಸ್ವಜನಪಕ್ಷಪಾತ ನಡೆಸಿದ್ದ ಆರೋಪ ಹೊತ್ತಿದ್ದ ವಿರಾಜಪೇಟೆ ಶಾಸಕ ಕೆಜ್ ಬೋಪಯ್ಯ ಅವರು ಮತ್ತೊಮ್ಮೆ ಸ್ಪೀಕರ್ ಆಗಿ ನಾಳಿನ ಪ್ರಕ್ರಿಯೆಯನ್ನು ನೋಡಿಕೊಳ್ಳಲಿದ್ದಾರೆ.
ಸದನದಲ್ಲಿ ಮ್ಯಾಜಿಕ್ ನಂಬರ್ ಗಳಿಸಲು ಬಿಜೆಪಿ ಏನ್ಮಾಡ್ಬೇಕು?
ಪಕ್ಷಗಳ ಬಲಾಬಲ :
ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾಬಲ 221/224
ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ 111.
ಬಿಜೆಪಿಯ ಬಳಿ ಇರುವ ಶಾಸಕರು: 104
ಕಾಂಗ್ರೆಸ್ 78
ಜೆಡಿಎಸ್ ಪ್ಲಸ್:38
ಇತರೆ: 2
ಪ್ರತಿಪಕ್ಷದ ಸಂಖ್ಯಾಬಲ 116.
ಕರ್ನಾಟಕ ರಣಾಂಗಣ : ವಿಶ್ವಾಸಮತವನ್ನು ಹೇಗೆ ನಡೆಸಲಾಗುತ್ತದೆ?
ಗಮನಿಸಿ: ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದು, ಒಂದು ಕ್ಷೇತ್ರವನ್ನು ಪರಿಗಣಿಸಲಾಗುತ್ತದೆ.
* ಜಯನಗರ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಚುನಾವಣೆ ನಡೆದಿಲ್ಲ.
ಕೆಜೆ ಬೋಪಯ್ಯ ಅವರ ಅಧಿಕಾರ ವ್ಯಾಪ್ತಿಯ ಪ್ರಕ್ರಿಯೆ:
* ರಾಜ್ಯಪಾಲರ ನಿರ್ದೇಶನದಂತೆ ವಿಧಾನಸಭೆಯ ವಿಶೇಷ ಸದನ ಕರೆಯಲಾಗುತ್ತದೆ. ಸುಪ್ರೀಂಕೋರ್ಟ್ ಆದೇಶದಂತೆ ನಾಳೆ ಬೆಳಗ್ಗೆ ನೂತನ ಶಾಸಕರ ಪ್ರಮಾಣ ವಚನ ಹಾಗೂ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚನೆ ನಡೆಯಲಿದೆ.
* ಹಂಗಾಮಿ ವಿಧಾನಸಭೆ ಸಭಾಪತಿ ನೇಮಕವಾಗಲಿದೆ. ಬಿಜೆಪಿಯಿಂದ ಕೆಜೆ ಬೋಪಯ್ಯ ನೇಮಕವಾಗಿದ್ದಾರೆ.
* ವಿಶೇಷ ಸದನ ಕರೆಯುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಂದ ಕೂಡಾ ಮನವಿ.
* ಹಂಗಾಮಿ ಸ್ಪೀಕರ್ ಬೋಪಯ್ಯ ಅವರು ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
* ಈಗಿನ ಪರಿಸ್ಥಿತಿಯಲ್ಲಿ ಬೋಪಯ್ಯ ಅವರು ಸುಪ್ರೀಂಕೋರ್ಟ್ ನಿರ್ದೇಶನದಂತೆ ಪ್ರಕ್ರಿಯೆ ನಡೆಸಲಿದ್ದಾರೆ.
* ಸಿಎಂ ಯಡಿಯೂರಪ್ಪ ಅವರ ಭಾಷಣ, ನಂತರ ವಿಪಕ್ಷ ನಾಯಕ ಜಿ ಪರಮೇಶ್ವರ ಅವರ ಭಾಷಣ, ಚರ್ಚೆ.
* ಉಭಯ ಪಕ್ಷಗಳ ಹಿರಿಯ ನಾಯಕರಿಗೂ ಭಾಷಣದ ಅವಕಾಶವಿರುತ್ತದೆ.
* ವಿಶ್ವಾಸಮತ ಯಾಚನೆಗೆ ಸ್ಪೀಕರ್ ನಿಂದ ಕರೆ.
* ವಿಶ್ವಾಸಮತ ಹೇಗೆ ನಡೆಸಬೇಕು ಎಂಬುದನ್ನು ಸ್ಪೀಕರ್ ನಿರ್ಧರಿಸಲಿದ್ದಾರೆ. ಹಾಜರಿರುವ ಸದಸ್ಯರು ಕೈ ಎತ್ತಿ ಧ್ವನಿಮತ ಕೂಗಬಹುದು.
* ಮತದಾನ ಪ್ರಕ್ರಿಯೆ ಬಳಿಕ, ಸ್ಪೀಕರ್ ಅವರು ಫಲಿತಾಂಶ ಘೋಷಿಸಲಿದ್ದಾರೆ.
* ಯಡುಯೂರಪ್ಪ ಅವರು ವಿಶ್ವಾಸಮತ ಗಳಿಸಿದರೆ, ಸರ್ಕಾರ ಉಳಿಯಲಿದೆ. ಇಲ್ಲದಿದ್ದರೆ, ವಿಪಕ್ಷಗಳು(ಮೈತ್ರಿಕೂಟ) ಮತ್ತೊಮ್ಮೆ ರಾಜ್ಯಪಾಲರ ಮೊರೆ ಹೊಕ್ಕು, ಸರ್ಕಾರ ರಚನೆ, ವಿಶ್ವಾಸಮತ ಯಾಚನೆಗೆ ಅವಕಾಶ ಕೋರಬಹುದು.
* ರಾಜ್ಯಪಾಲರು ಸೂಚಿಸಿದ ದಿನದಂದು ವಿಶ್ವಾಸಮತ ಯಾಚನೆ ಮತ್ತೊಮ್ಮೆ ನಡೆಯಲಿದೆ.
* ವಿಶ್ವಾಸಮತ ಯಾಚನೆ ದಿನದಂದು ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ನೌಕರರು ಹಾಗೂ ಇತರೆ ಸಿಬ್ಬಂದಿ ವರ್ಗದವರಿಗೆ ಅರ್ಧ ದಿನ ರಜೆ
* ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವಿರುತ್ತದೆ. ಆದರೆ, ಒಬ್ಬ ವರದಿಗಾರ ಒಬ್ಬ ಕ್ಯಾಮರಾ ಮನ್ ಗೆ ಸೀಮಿತ.
* ವಿಧಾನಸಭಾಂಗಣದಲ್ಲಿ ಸುಮಾರು 150ಕ್ಕೂ ಅಧಿಕ ಮಾರ್ಷಲ್ಲುಗಳಿರುತ್ತಾರೆ.
* ಗನ್ ಮ್ಯಾನ್, ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ಪ್ರವೇಶವಿರುವುದಿಲ್ಲ.