Karnataka Farmers Protest: 217 ತಾಲೂಕುಗಳಲ್ಲಿ ಬರ, ರೈತರ ಸಾಲ ಸಂಪೂರ್ಣ ಮನ್ನಾಕ್ಕೆ ಆಗ್ರಹ; ಸಚಿವರಿಂದ ಮಹತ್ವದ ಭರವಸೆ!
Karnataka Farmers Protest: ಕರ್ನಾಟಕದ 217 ತಾಲ್ಲೂಕುಗಳಲ್ಲಿ ಭೀಕರ ಬರಗಾಲಕ್ಕೆ ತುತ್ತಾಗಿ ಸುಮಾರು 20 ಲಕ್ಷ ಎಕ್ಟೇರ್ ಪ್ರದೇಶದಲ್ಲಿ ರೈತರ ಬೆಳೆ ನಾಶವಾಗಿದೆ. ಹೀಗಾಗಿ, ರೈತರ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಒತ್ತಾಯಿಸಲಾಗಿದೆ.
ಕರ್ನಾಟಕದಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯನವನದಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಯುತ್ತಿದ್ದು, ಸ್ಥಳಕ್ಕೆ ಸಚಿವ ಸತೀಶ ಜಾರಕಿಹೊಳಿ ಅವರು ಭೇಟಿ ಮಾಡಿ ರೈತರೊಂದಿಗೆ ಮಾತನಾಡಿದ್ದಾರೆ. ಒಂದು ವಾರದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ರೈತ ಮುಖಂಡರ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಅವರು ಹೇಳಿದ್ದಾರೆ.

ಕರ್ನಾಟಕದ 217 ತಾಲ್ಲೂಕು ಭೀಕರ ಬರಗಾಲಕ್ಕೆ ತುತ್ತಾಗಿ ಸುಮಾರು 20 ಲಕ್ಷ ಎಕ್ಟೇರ್ ಪ್ರದೇಶದಲ್ಲಿ ರೈತರ ಬೆಳೆ ನಾಶವಾಗಿದೆ. ಈ ರೀತಿ ಸಂಕಷ್ಟಕ್ಕೆ ಒಳಗಾದ ರೈತರಿಗೆ ಸರ್ಕಾರದ ಭಿಕ್ಷೆ ಬೇಡವೆಂದು ಬೇಸತ್ತ ಧರಣಿ ನಿರತ ರೈತರು ತಲಾ ಒಂದು ರೂ., ಐದು ರೂ. ನಾಣ್ಯ ಭಿಕ್ಷೆ ಮೂಲಕ ಸಂಗ್ರಹಿಸಿ ಸರ್ಕಾರಕ್ಕೆ 1770 ರೂ ಚೆಕ್ ಮೂಲಕ ನೀಡಲು ಸಂಗ್ರಹಿಸಿದರು. ಈ ವಿಚಾರವನ್ನು ಸಚಿವ ಸತೀಶ್ ಜಾರಕಿಹೊಳಿ ಗಮನಕ್ಕೆ ತಂದರು.
ಕರ್ನಾಟಕದಲ್ಲಿ ತೀವ್ರ ಬರಗಾಲದಿಂದ ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದ್ದು, ಲಕ್ಷಾಂತರ ರೈತ ಕುಟುಂಬಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಮಳೆಯ ಕೊರತೆ, ಬೆಳೆ ನಾಶ, ಕೃಷಿ ಉತ್ಪಾದನಾ ವೆಚ್ಚದ ಏರಿಕೆ, ವಿದ್ಯುತ್ ಸಮಸ್ಯೆ ಹಾಗೂ ಸಾಲದ ಹೊರೆಗಳಿಂದ ರೈತರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಧಾವಿಸಬೇಕಾದ ಸರ್ಕಾರಗಳು ಕೇವಲ ತಾತ್ಕಾಲಿಕ ಪರಿಹಾರಕ್ಕೆ ಸೀಮಿತವಾಗದೆ, ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘವು ವಿಧಾನಸೌಧ ಎದುರು, ಬೆಂಗಳೂರಿನ ಫ್ರೀಡಂ ಪಾರ್ಕಲ್ಲಿ ಅಕ್ಟೋಬರ್ 12ರಂದು ಬೃಹತ್ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.
ರಾಜ್ಯದಲ್ಲಿ 217 ತಾಲೂಕುಗಳಲ್ಲಿ ಮಳೆಯ ಅಭಾವದಿಂದ ಬೆಳೆ ಕೈಕೊಟ್ಟಿರುವ ಸಂದರ್ಭದಲ್ಲಿ ರೈತರು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಕೂಲಿ, ಕೃಷಿ ಯಂತ್ರೋಪಕರಣ ಮತ್ತು ನೀರಾವರಿಗಾಗಿ ಮಾಡಿದ ವೆಚ್ಚವನ್ನು ಮರಳಿ ಗಳಿಸಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಒಂದು ಕಡೆ ಬೆಳೆ ನಷ್ಟವಾದರೆ, ಮತ್ತೊಂದು ಕಡೆ ಕುಟುಂಬದ ಜೀವನ ನಡೆಸುವುದು ಕಷ್ಟವಾಗಿದೆ. ಸಾಲ ವಶೂಲಾತಿ ಕಿರುಕುಳ ಹೆಚ್ಚಾಗುತ್ತಿದೆ.
ಅಂದಾಜು 20,000 ಕೋಟಿ ರೂ.ಗಳಿಗೂ ಅಧಿಕ ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದಲ್ಲಿ ಎರಡು ಲಕ್ಷ ರೂ. ತನಕ ರೈತರ ಸಾಲ ಮನ್ನಾ ಮಾಡಿದ್ದಾರೆ. ತಮಿಳುನಾಡಿನಲ್ಲಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ಅಲ್ಲಿ ರೈತರಿಗೆ ಇಷ್ಟೊಂದು ಭೀಕರವಾದ ಕಷ್ಟ ಇರಲಿಲ್ಲ ಆದ್ದರಿಂದ ಕೂಡಲೇ ಕರ್ನಾಟಕದಲ್ಲಿ ಸಾಲ ಮನ್ನಾ ಮಾಡಬೇಕೆಂದು ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ್ ಅವರು ಆಗ್ರಹಿಸಿದ್ದಾರೆ.
ಗ್ರಾಮೀಣ ಪ್ರದೇಶದ ರೈತ ಮಹಿಳೆಯರು ಖಾಸಗಿ ಫೈನಾನ್ಸ್‌ಗಳಿಂದ ವಾರ ಹಾಗೂ ತಿಂಗಳ ಆಧಾರದ ಮೇಲೆ ಪಡೆದಿರುವ ಸಾಲಗಳ ಮರುಪಾವತಿಸಲು ಕಷ್ಟವಾಗುತ್ತಿದೆ ಇಂತಹ ಸಾಲದ ವಸೂಲಾತಿಯನ್ನು ಮುಂದಿನ ಎರಡು ವರ್ಷಗಳವರೆಗೆ ಸ್ಥಗಿತಗೊಳಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಜನಸೇವಕರು ಎಂದು ಕರೆಸಿಕೊಳ್ಳುವ ಶಾಸಕರು, ಸಚಿವರು ರೈತರ ಬರದ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಒಂದು ವರ್ಷದ ಸಂಬಳ ಸಾರಿಗೆಯನ್ನು ತೆಗೆದುಕೊಳ್ಳದೆ ಸೇವೆ ಮಾಡಿ. ಇದರಿಂದ ಉಳಿತಾಯವಾಗುವ ಹಣವನ್ನು ರೈತರ ಸಂಕಷ್ಟಕ್ಕೆ ನೆರವು ನೀಡಬೇಕು. ಸಂಕಷ್ಟದಲ್ಲಿರುವ ಬರಗಾಲ ಪೀಡಿತ ರೈತರಿಗೆ ಎಕರೆಗೆ ಕನಿಷ್ಠ 25,000 ರೂ.ಗಳ ಪರಿಹಾರಧನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ರೈತರ ಸಂಕಷ್ಟ ಕಾಲದಲ್ಲೂ ಮೋಜಿಗಾಗಿ ದಸರಾ ಹೆಸರಿನಲ್ಲಿ ಮೂರು ಕೋಟಿ ಯೂನಿಟ್ ವಿದ್ಯುತ್ ಬಳಸಿ ದೀಪ ಅಲಂಕಾರ ಮಾಡುವುದನ್ನು ನಿಲ್ಲಿಸಿ. ದೇಶದ ಜನರಿಗೆ ಆಹಾರ ಉತ್ಪಾದಿಸುವ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಿಂದ ಒಣಗುತ್ತಿರುವ ಬೆಳೆಗಳನ್ನು ರಕ್ಷಿಸಿ ಎಂದು ಆಗ್ರಹಿಸಿದ್ದಾರೆ.
Karnataka Farmers Protest: ಕಬ್ಬಿನ ಬೆಲೆ ಏರಿಕೆ
ಕಬ್ಬಿನಿಂದ ಉತ್ಪಾದಿಸುವ ಸಕ್ಕರೆ ಬೆಲೆಯನ್ನು ವಾಣಿಜ್ಯ ಬಳಕೆ ಪ್ರತ್ಯೇಕವಾದ ದರ ಗ್ರಾಹಕ ಬಳಕೆದಾರರಿಗೆ ಸಾಮಾನ್ಯ ದರ ನಿಗದಿ ಮಾಡಿ. ಇದರಲ್ಲಿ ಹೆಚ್ಚುವರಿ ಲಾಭವನ್ನು ಕಬ್ಬು ಬೆಳೆಗಾರರ ಕಬ್ಬಿನ ಉತ್ಪಾದನಾ ವೆಚ್ಚವು ಗಣನೀಯವಾಗಿ ಏರಿಕೆ ಯಾಗಿರುವುದರಿಂದ, ಕೇಂದ್ರ ಸರ್ಕಾರವು ಕಬ್ಬಿನ ಎಫ್‌ಆರ್‌ಪಿ (FRP) ದರವನ್ನು ಕನಿಷ್ಠ 10.25 ಇಳುವರಿಗೆ 4500 ರೂ.ಗೆ ಹೆಚ್ಚಿಸಬೇಕು.
ಸಕ್ಕರೆ ನಿಯಂತ್ರಣ ಕಾಯ್ದೆ1966 ಪ್ರಕಾರ ಕಬ್ಬಿನ ಉಪ ಉತ್ಪನಗಳ ಲಾಭ ಹಂಚಿಕೆ ಹಾಗೂ ರಾಜ್ಯ ಸರ್ಕಾರಕ್ಕೆ ಸಿಗುವ ತೆರಿಗೆ ಹಣದಿಂದ ರಾಜ್ಯ ಸರ್ಕಾರವು ತಮಿಳುನಾಡು ಮಾದರಿಯಲ್ಲಿ ಕಬ್ಬಿನ ಎಸ್‌ಎಪಿ (SAP) ದರವನ್ನು ಎಫ್ ಆರ್ ಪಿ ದರಕ್ಕೆ ಹೆಚ್ಚುವರಿ ಆಗಿ ಪ್ರತಿ ಟನ್‌ಗೆ 800 ರೂ.ಗಳು ಏರಿಕೆ ಮಾಡಬೇಕು. ಅಡಿಕೆ ಬೆಳೆಗಾರರು ಗುಟ್ಕಾ ನಿಷೇಧ ಪ್ರಕರಣದಿಂದ ಬೆಲೆ ಕುಸಿತಗೊಂಡು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಇಂತಹ ರೈತರಿಗೆ ಪ್ರೋತ್ಸಾಹದಾಯಕ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.


Click it and Unblock the Notifications
