ಗ್ರಾಹಕರಿಗೆ ಕರೆಂಟ್ ಶಾಕ್, ಪ್ರತಿ ಯೂನಿಟ್ ಗೆ 48 ಪೈಸೆ ಹೆಚ್ಚಳ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 11 : ರಾಜ್ಯದಲ್ಲಿ ಪ್ರತಿ ಯೂನಿಟ್ ಗೆ 48 ಪೈಸೆ ವಿದ್ಯುತ್ ದರ ಹೆಚ್ಚಿಸಿ ಮಂಗಳವಾರ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ ಸಿ) ಆದೇಶ ಹೊರಡಿಸಿದೆ. ಏಪ್ರಿಲ್ 01ರಿಂದಲೇ ಈ ಪರಿಷ್ಕರಣೆ ದರ ಅನ್ವಯವಾಗಲಿದೆ.

ಮೊದಲೇ ರಾಜ್ಯದಲ್ಲಿ ಬರ ಆವರಿಸಿದ್ದರಿಂದ ಕೆಲಸವಿಲ್ಲದೆ ಬರಿಗೈಯಲ್ಲಿ ಕುಳಿತ ಜನರಿಗೆ ಇದೀಗ ವಿದ್ಯತ್ ದರ ಹೆಚ್ಚಳದಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಎಲ್ಲಾ ಎಸ್ಕಾಂಗಳು (ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ಕಂಪನಿ) ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪ್ರತಿ ಯೂನಿಟ್ ಗೆ 1.40ಪೈಸೆ ಹೆಚ್ಚಳಕ್ಕೆ ಆಗ್ರಹಿಸಲಾಗಿತ್ತು. ಆದರೆ, ಕೆಇಆರ್ ಸಿ ಪ್ರತಿ ಯೂನಿಟ್ ಗೆ 48 ಪೈಸೆ ಹೆಚ್ಚಳ ಮಾಡಿದೆ.

Karnataka Electricity Regulatory Commission hikes power tariff in karnataka

ರಾಜ್ಯದ ಎಲ್ಲಾ ಎಸ್ಕಾಂಗಳಲ್ಲಿ 48ಪೈಸೆ ಹೆಚ್ಚಳ ಮಾಡಲಾಗಿದೆ ಎಂದು ಕೆಇಆರ್ ಸಿ ಅಧ್ಯಕ್ಷ ಎಂ. ಕೆ ಶಂಕರಲಿಂಗೇಗೌಡ ಅವರು ದರ ಹೆಚ್ಚಳ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 1ರಿಂದಲೇ ವಿದ್ಯುತ್ ದರ ಪರಿಷ್ಕರಣೆ ಮಾಡಬೇಕಿತ್ತು. ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದಿದ್ದರಿಂದ ಏಪ್ರಿಲ್ 11ರಂದು ಕೆಇಆರ್ ಸಿ ವಿದ್ಯುತ್ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

ನಗರ ಪ್ರದೇಶಗಳಲ್ಲಿನ ಗೃಹ ಬಳಕೆ ಗ್ರಾಹಕರು ಬಳಸುವ ಮಾಹೆಯಾನ 30 ಯೂನಿಟ್‍ಗಳವರೆಗಿನ ವಿದ್ಯುಚ್ಛಕ್ತಿಗೆ ಪ್ರತಿ ಯೂನಿಟ್‍ಗೆ ಈಗಿರುವ ದರವಾದ 3ರು,ದಿಂದ 3.25ಕ್ಕೆ ಏರಿಸಲಾಗಿದೆ ಮತ್ತು 31ರಿಂದ 100 ಯೂನಿಟ್‍ಗಳವರೆಗಿನ ಬಳಕೆಗೆ ಈಗಿರುವ ಪ್ರತಿ ಯೂನಿಟ್‍ ದರ 4.40ಅನ್ನು 4.70ಕ್ಕೆ ಏರಿಸಲಾಗಿದೆ.

101ರಿಂದ 200 ಯೂನಿಟ್‍ಗಳವರೆಗಿನ ಬಳಕೆಗೆ ಈಗಿರುವ ಪ್ರತಿ ಯೂನಿಟ್‍ ದರವನ್ನು 5.90ದಿಂದ 6.25ಕ್ಕೆ ದರ ಏರಿಸಲಾಗಿದೆ. 200 ಯೂನಿಟ್‍ ಗಳನ್ನು ಮೇಲ್ಪಟ್ಟ ಬಳಕೆಗೆ ಈಗಿರುವ ಪ್ರತಿ ಯೂನಿಟ್‍ 6.90 ದರವನ್ನು 7.30ಕ್ಕೆ ದರ ಏರಿಸಲಾಗಿದೆ.

ಕಳೆದ ಬಾರಿ ನಗರದ ಗೃಹಬಳಕೆ ಗ್ರಾಹಕರಿಗೆ ಮೊದಲ 30 ಯೂನಿಟ್‍ಗೆ 30 ಪೈಸೆ, 31ರಿಂದ 100 ಯೂನಿಟ್‍ಗೆ 40 ಪೈಸೆ ಹೆಚ್ಚಿಸಲಾಗಿತ್ತು.

100 ಯೂನಿಟ್‍ಗೆ ಮೇಲ್ಪಟ್ಟ ಬಳಕೆಗೆ ಪ್ರತಿ ಹಂತದಲ್ಲಿ ತಲಾ 50 ಪೈಸೆ ಏರಿಸಲಾಗಿತ್ತು. ಗ್ರಾಮೀಣ ಗೃಹಬಳಕೆದಾರರಿಗೂ ಇಷ್ಟೇ ದರ ಹೆಚ್ಚಳವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka Electricity Regulatory Commission (KERC) hiked 48 paise per unit power tariff On April 11th.
Please Wait while comments are loading...