ಬೆಳಗಾವಿಯಲ್ಲಿ ಬಿಜೆಪಿ Vs ಬಿಜೆಪಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಗೆ ಬುದ್ದಿ ಇಲ್ಲ ಎಂದ ರಮೇಶ್ ಜಾರಕಿಹೊಳಿ
ಬೆಳಗಾವಿಯ ರಾಜಹಂಸಗಡದಲ್ಲಿ ನಿರ್ಮಾಣವಾಗಿರುವ ಶಿವಾಜಿ ಪ್ರತಿಮೆ ರಾಜಕೀಯ ನಾಯಕರ ನಡುವಿನ ವಾಗ್ವಾದಕ್ಕೆ ವೇದಿಕೆ ಕಲ್ಪಿಸಿದೆ. ಈ ವಿಚಾರವಾಗಿ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ನಡುವೆ ಸಂಘರ್ಷ ಏರ್ಪಟ್ಟಿದೆ.
ಬೆಳಗಾವಿ, ಮಾರ್ಚ್ 09: ರಾಜ್ಯ ರಾಜಕಾರಣದಲ್ಲಿ ವಿವಾದದ ಕೇಂದ್ರಬಿಂದುವಾಗಿ ಬೆಳಗಾವಿ ಹೊರಹೊಮ್ಮಿದೆ. ಅಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಂಘರ್ಷವಿದೆ. ಈಗ ನೋಡಿದರೆ, ಬಿಜೆಪಿ ಹಾಗೂ ಬಿಜೆಪಿಯ ನಡುವೆಯೇ ಸಂಘರ್ಷ ಏರ್ಪಟ್ಟಿದೆ. ಬೆಳಗಾವಿಯ ರಾಜಹಂಸಗಡದಲ್ಲಿ ನಿರ್ಮಾಣವಾಗಿರುವ ಶಿವಾಜಿ ಪ್ರತಿಮೆ ರಾಜಕೀಯ ನಾಯಕರ ನಡುವಿನ ವಾಗ್ವಾದಕ್ಕೆ ವೇದಿಕೆ ಕಲ್ಪಿಸಿದೆ. ಈ ವಿಚಾರವಾಗಿ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ನಡುವೆ ಆರೋಪ ಪ್ರತ್ಯಾರೋಪಗಳು ಏರ್ಪಟ್ಟಿವೆ.
'@BJP4Karnataka ನಡೆಸುತ್ತಿರುವುದು ಸೋಲಿನ ಸಂಕಲ್ಪ ಯಾತ್ರೆಯೋ, ಕಲಹ ಸಂಕಲ್ಪ ಯಾತ್ರೆಯೋ?
— Karnataka Congress (@INCKarnataka) March 9, 2023
ಯಾರು ಯಾರನ್ನು ದ್ವೇಷಿಸುತ್ತಿದ್ದಾರೆ ಎಂದು ತಿಳಿಯದೆ ಕಂಗಾಲಾದ ಬಿಜೆಪಿ ಪಕ್ಷ ಕಲಹದ ಮನೆಯಾಗಿದೆ!
ಈಗ ಸಂಸದ ಈರಣ್ಣ ಕಡಾಡಿ vs ರಮೇಶ್ ಜಾರಕಿಹೊಳಿ ಕಿತ್ತಾಟದ ಪ್ರದರ್ಶನ ಶುರುವಾಗಿದೆ, ಮುಂದೆ ಕ್ಲೈಮ್ಯಾಕ್ಸ್ ಇನ್ನಷ್ಟು ರೋಚಕವಾಗಿರಲಿದೆ!#BJPvsBJP pic.twitter.com/sJehsbvUn5
ರಮೇಶ್ ವಿರುದ್ಧ ಕಡಾಡಿ ಟ್ವೀಟ್
ಈ ವಿಚಾರದ ಕುರಿತು ಟ್ವೀಟ್ ಮಾಡಿರುವ ರಮೇಶ್ ಜಾರಕಿಹೊಳಿ, '969 ಕೋಟಿ ರೂಪಾಯಿಗಳ ಸರ್ಕಾರಿ ಯೋಜನೆಯೊಂದನ್ನು ಪತ್ರಿಕೆಗಳಿಗೆ ಲಕ್ಷಾಂತರ ರೂಪಾಯಿಗಳ ಜಾಹಿರಾತು ನೀಡಿ ಶಾಸಕರೊಬ್ಬರು ಖಾಸಗಿ ಪೂಜೆ ಮಾಡಬಹುದೆಂಬ ಸತ್ಯ ಅತೀ ಬುದ್ದಿವಂತರಿಂದ ನನಗೆ ಇಂದೇ ತಿಳಿಯಿತು. ಬುದ್ದಿ ಇಲ್ಲದವರೆಲ್ಲರೂ ಇದನ್ನು ಅರ್ಥಮಾಡಿಕೊಳ್ಳಬೇಕು. ಜಟ್ಟಿ ಜಾರಿ ಬಿದ್ದರು ಮೀಸೆ ಮಣ್ಣಾಗಲಿಲ್ಲ' ಎಂದು ಆರೋಪಿಸಿದ್ದಾರೆ.

ಕಡಾಡಿಗೆ ಬುದ್ದಿ ಇಲ್ಲ ಎಂದ ರಮೇಶ್ ಜಾರಕಿಹೊಳಿ
ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಿರುದ್ಧ ಹರಿಹಾಯ್ದಿರುವ ರಮೇಶ್ ಜಾರಕಿಹೊಳಿ, ನಾನು ಪ್ರತಿಮೆ ಉದ್ಘಾಟನೆ ಮಾಡಿದ್ದು ವೈಯಕ್ತಿಕ ವಿಚಾರ. ಮುಖ್ಯಮಂತ್ರಿಗಳ ಒಪ್ಪಿಗೆಯನ್ನು ತೆಗೆದುಕೊಂಡೆ ಪ್ರತಿಮೆ ಉದ್ಘಾಟನೆ ಮಾಡಿದ್ದೇನೆ. ಇಷ್ಟು ತಿಳಿಯದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಗೆ ಬುದ್ದಿ ಇಲ್ಲ ಎಂದು ಏಕ ವಚನದಲ್ಲೇ ಮಾತನಾಡಿದ್ದಾರೆ.
ರಮೇಶ್ ಜಾರಕಿಹೊಳಿಯಿಂದ ಪಕ್ಷಕ್ಕೆ ಡ್ಯಾಮೇಜ್
ರಮೇಶ್ ಜಾರಕಿಹೊಳಿಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ರಾಜಕೀಯದಲ್ಲಿರುವವರು ಸೀತೆಯಷ್ಟೇ ಪವಿತ್ರವಾಗಿ ಇರಬೇಕಾಗುತ್ತದೆ. ಇನ್ನೊಬ್ಬರ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದಕ್ಕೂ ಮುನ್ನ ರಮೇಶ್ ಜಾರಕಿಹೊಳಿ ತಾವು ಪವಿತ್ರರೇ ಎಂಬುದನ್ನು ತಿಳಿದುಕೊಳ್ಳಲಿ. ಅವರ ನಡವಳಿಗೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ತಿಳಿಸಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಈ ಸತ್ಯವನ್ನು ಹೇಳುತ್ತಿದ್ದೇನೆ. ನಾವೆಲ್ಲರೂ ಒಟ್ಟಾಗಿ ಹೋದರೆ ಪಕ್ಷಕ್ಕೆ ಒಳ್ಳೆಯದು ಎಂದು ಕಡಾಡಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ವಿಡಿಯೊ ಹಂಚಿಕೊಂಡ ಕಾಂಗ್ರೆಸ್
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿ ನಡೆಸುತ್ತಿರುವುದು ಸೋಲಿನ ಸಂಕಲ್ಪ ಯಾತ್ರೆಯೋ, ಕಲಹ ಸಂಕಲ್ಪ ಯಾತ್ರೆಯೋ? ಯಾರು ಯಾರನ್ನು ದ್ವೇಷಿಸುತ್ತಿದ್ದಾರೆ ಎಂದು ತಿಳಿಯದೆ ಕಂಗಾಲಾದ ಬಿಜೆಪಿ ಪಕ್ಷ ಕಲಹದ ಮನೆಯಾಗಿದೆ. ಈಗ ಸಂಸದ ಈರಣ್ಣ ಕಡಾಡಿ vs ರಮೇಶ್ ಜಾರಕಿಹೊಳಿ ಕಿತ್ತಾಟದ ಪ್ರದರ್ಶನ ಶುರುವಾಗಿದೆ. ಮುಂದೆ ಕ್ಲೈಮ್ಯಾಕ್ಸ್ ಇನ್ನಷ್ಟು ರೋಚಕವಾಗಿರಲಿದೆ' ಎಂದು ಕಾಂಗ್ರೆಸ್ ಹೇಳಿದೆ.

ಹೆಬ್ಬಾಳ್ಕರ್ ವಿರುದ್ಧ ಯುದ್ಧ ಸಾರಿದ ರಮೇಶ್
ಜನವರಿ 22 ರಂದು, ರಮೇಶ್ ಅವರು ರಾಜ್ಯ ವಿಧಾನಸಭಾ ಚುನಾವಣೆಗೆ ಮೊದಲು 'ಪ್ರತಿ ಮತದಾರರಿಗೆ ₹ 6,000 ನೀಡುವುದಾಗಿ' ಹೇಳಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಬಾವಿ ಗ್ರಾಮದಲ್ಲಿ ತಮ್ಮ ಬೆಂಬಲಿಗರು ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಜಾರಕಿಹೊಳಿ ಮಾತನಾಡಿದ್ದರು. ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದರು.












Click it and Unblock the Notifications