ಕರ್ನಾಟಕ ಚುನಾವಣೆ : ಎಎಪಿ ಅಭ್ಯರ್ಥಿಗಳ 2 ನೇ ಪಟ್ಟಿ

Posted By: Gururaj
Subscribe to Oneindia Kannada

ಬೆಂಗಳೂರು, ಏಪ್ರಿಲ್ 17 : ಆಮ್ ಆದ್ಮಿ ಪಕ್ಷ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಕ್ಷ ವಿಧಾನಸಭೆ ಚುನಾವಣೆಗೆ 28 ಅಭ್ಯರ್ಥಿಗಳನ್ನು ಇದುವರೆಗೂ ಘೋಷಣೆ ಮಾಡಿದೆ.

ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ವಕ್ತಾರ ಶಿವಕುಮಾರ್ ಚೆಂಗಲರಾಯ ಅವರು ಅಭ್ಯರ್ಥಿಗಳ 2 ನೇ ಪಟ್ಟಿಯನ್ನು ಬಿಡುಗಡೆ ಮಾಡಿದರು. 2ನೇ ಪಟ್ಟಿಯಲ್ಲಿ ಪಕ್ಷ 10ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪಟ್ಟಿ

ಮಾರ್ಚ್ 20ರಂದು ಆಮ್ ಆದ್ಮಿ ಪಕ್ಷ ಕರ್ನಾಟಕದ ಚುನಾವಣೆಗೆ 18 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.

ಎಲ್ಲ ಪಕ್ಷಗಳಿಗೆ ಮರ್ಮಾಘಾತ : ಕರ್ನಾಟಕ ಆಪ್ ಶಪಥ

Karnataka elections : Aam Aadmi Party candidates 2nd list

2ನೇ ಪಟ್ಟಿಯಲ್ಲಿನ ಅಭ್ಯರ್ಥಿಗಳು

1. ಆಸಿಫ್ ಹೇರ್ಕಲ್ - ದೇವರಹಿಪ್ಪರಗಿ

2. ಅಜಿತ್ ಬಾಬು - ರಾಮನಗರ

3. ಬಿ ಆರ್ ಭಾಸ್ಕರ್ ಪ್ರಸಾದ್ - ಮಹಾದೇವಪುರ

4. ಎ ಇಳಂಗೋವನ್ - ಗಾಂಧಿನಗರ

5. ಫಾರೂಕ್‌ಸಾಬ್ ನದಾಫ್ - ಬೆಳಗಾವಿ ಉತ್ತರ

6. ಸದಾನಂದ ಮೇತ್ರಿ - ಬೆಳಗಾವಿ ದಕ್ಷಿಣ

7. ಸಂಜೀವ್ ಕುಮಾರ್ ಕಾರಿಕಲ್ -ಗುಲ್ಬರ್ಗ ಉತ್ತರ

8. ಡಾ. ಸುಂದರ ಗೌಡ - ಚಿಕ್ಕಮಗಳೂರು

9. ಬಿ ಪ್ರಭುಸ್ವಾಮಿ - ಗುಬ್ಬಿ

10. ಎಸ್ ಎಫ್ ಪಾಟೀಲ್ - ಧಾರವಾಡ ಗ್ರಾಮೀಣ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Aam Aadmi Party announced list of 10 candidates for upcoming Karnataka Assembly elections 2018. Party announced 28 candidates for out of 224 assembly constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ