South First survey; ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ

ಬೆಂಗಳೂರು, ಮೇ 07; ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನಕ್ಕೆ 3 ದಿನ ಬಾಕಿ ಉಳಿದಿದೆ. ಮೇ 10ರ ಬುಧವಾರ ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. South First ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶ ಭಾನುವಾರ ಪ್ರಕಟವಾಗಿದೆ.

ಬೆಂಗಳೂರು ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ರೋಡ್ ಶೋ, ರಾಷ್ಟ್ರೀಯ ನಾಯಕರ ಪ್ರಚಾರದ ನಡುವೆಯೂ South First ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಸಮೀಕ್ಷೆಯ ಅಂತಿಮ ವರದಿ ಪ್ರಕಾರ ರಾಜ್ಯದ ಆಡಳಿತ ಪಕ್ಷ ಬಿಜೆಪಿಗೆ 81 ರಿಂದ 93 ಸೀಟುಗಳು ಲಭ್ಯವಾಗಲಿದೆ.

Karnataka Elections 2023 South First Pre Poll Survey Results

ಸಮೀಕ್ಷೆಯ ಅಂತಿಮ ಫಲಿತಾಂಶದ ಪ್ರಕಾರ ಕಾಂಗ್ರೆಸ್ ಪಕ್ಷ 105 ರಿಂದ 117 ಸ್ಥಾನಗಳಲ್ಲಿ ಜಯಗಳಿಸಲಿದೆ. ಈ ಮೂಲಕ ಸ್ಪಷ್ಟ ಬಹುಮತ ಪಡೆದು ಪಕ್ಷ ರಾಜ್ಯದಲ್ಲಿ ಅಧಿಕಾರ ಪಡೆಯಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 113.

ಮೇ 1 ರಿಂದ 5ರ ತನಕ ನಡೆಸಿದ ಈ ಸಮೀಕ್ಷೆಯಲ್ಲಿ ಜೆಡಿಎಸ್ ಪಕ್ಷ 24 ರಿಂದ 29 ಸೀಟುಗಳಲ್ಲಿ ಜಯಗಳಿಸಲಿದೆ ಎಂಬ ಫಲಿತಾಂಶ ಬಂದಿದೆ. ಜೆಡಿಎಸ್‌ನ ಮತಗಳಿಕೆ ಪ್ರಮಾಣ ಸಹ ಕಡಿಮೆ ಆಗಲಿದ್ದು, ಪಕ್ಷ ಶೇ 16ರಷ್ಟು ಮತ ಪಡೆಯಲಿದೆ. ಚುನಾವಣೆಯಲ್ಲಿ ಇತರರು 1 ರಿಂದ 3 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.

ಮೂರು ಸಮೀಕ್ಷೆಗಳು; South First ಕರ್ನಾಟಕದ ಚುನಾವಣೆ ಬಗ್ಗೆ ಮೂರು ಸಮೀಕ್ಷೆಗಳನ್ನು ಮಾಡಿದೆ. ಜನವರಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ 101, ಬಿಜೆಪಿ 91 ಸೀಟು ಗೆಲ್ಲಲಿದೆ ಎಂಬ ವರದಿ ಬಂದಿತ್ತು.

modi-road-show

ಏಪ್ರಿಲ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ 98 ಸೀಟುಗಳಲ್ಲಿ ಜಯಗಳಿಸಬಹುದು ಪಕ್ಷ 95 ರಿಂದ 105 ಸೀಟು ಪಡೆದು ಬಹುದೊಡ್ಡ ಪಕ್ಷವಾಗಲಿದೆ ಎಂಬ ವರದಿ ಬಂದಿತ್ತು. ಜೆಡಿಎಸ್ 29 ಸೀಟುಗಳಲ್ಲಿ ಗೆಲುವು ಸಾಧಿಸಬಹುದು ಎಂದು ಅಂದಾಜಿಸಲಾಗಿತ್ತು.

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ, ಸಾಮೂಹಿಕ ನಾಯಕತ್ವ, ಚುನಾವಣಾ ಪ್ರಚಾರ ಮುಂತಾದವುಗಳ ಆಧಾರದ ಮೇಲೆ ನಡೆಸಿದ ಅಂತಿಮ ಸಮೀಕ್ಷೆಯ ವರದಿ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದೆ. ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಬೆಸ್ಟ್‌ ಎಂದು ಶೇ 42ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ಮೇ 1 ರಿಂದ 5 ರ ತನಕ ಪೀಪಲ್‌ ಪಲ್ಸ್ ರಿಸರ್ಚ್ ಆರ್ಗನೈಜೇಷನ್ South First ಗಾಗಿ ಈ ಸಮೀಕ್ಷೆ ನಡೆಸಿದೆ. ಪಿಪಿಎಸ್ ಮಾದರಿಯಲ್ಲಿ 56 ವಿಧಾನಸಭಾ ಕ್ಷೇತ್ರಗಳಲ್ಲಿ 3 ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಂಡು 20 ಮಾದರಿಗಳನ್ನು ಸಂಗ್ರಹ ಮಾಡಲಾಗಿದೆ.

ಸೂಚನೆ; https://thesouthfirst.com/ ವೆಬ್ ಸೈಟ್‌ನಲ್ಲಿ ಪ್ರಕಟವಾದ ಸುದ್ದಿ ಆಧಾರದ ಮೇಲೆ ಈ ವರದಿ ಬರೆಯಲಾಗಿದೆ.

ಸಮೀಕ್ಷೆಗಳಿಗೆ ನಿಷೇಧ; ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮೇ 10ರಂದು ನಡೆಯಲಿದೆ. ಚುನಾವಣಾ ಆಯೋಗ ನಿಯಮಗಳ ಅನ್ವಯ ಚುನಾವಣಾ ಸಮೀಕ್ಷೆ, ಚರ್ಚೆಗಳಿಗೆ ತಡೆ ಹಾಕಿದೆ. ಮತದಾನದ 48 ಗಂಟೆಗಳ ಮೊದಲು ಅಂದರೆ ಮೇ 8ರ ಸಂಜೆ 6 ಗಂಟೆಯ ಬಳಿಕ ಮಾಧ್ಯಮಗಳಲ್ಲಿ ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 120ರ ಪ್ರಕಾರ ನಿಷೇಧಿಸಲಾಗಿದೆ.

48 ಗಂಟೆಗಳ ಮೊದಲ ಅವಧಿಯಲ್ಲಿ ಒಪಿನಿಯನ್ ಪೋಲ್ ಫಲಿತಾಂಶ ಪ್ರಕಟಿಸುವುದು, ಚರ್ಚೆ ಅಥವಾ ವಿಶ್ಲೇಷಣೆ ಏರ್ಪಡಿಸುವುದು, ಅದೇ ರೀತಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಪ್ರಸಾರ ಮಾಡುವುದು ಕೂಡ ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 120ರ ವ್ಯಾಪ್ತಿಯಲ್ಲಿ ಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+