Karnataka Assembly Election 2023 LIVE News Updates: 'ಚುನಾವಣೆಯಲ್ಲಿ ಗೆದ್ದರೂ ಕೈ ಶಾಸಕರ ಖರೀದಿ ಮಾಡ್ತಾರೆ' ಖರ್ಗೆ ಕಿಡಿ
ಬೆಂಗಳೂರು, ಏಪ್ರಿಲ್ 25: ಕಾಂಗ್ರೆಸ್ 120 ಸ್ಥಾನ ಗೆದ್ದರೂ ಸಲಾದು, ಯಾಕೆಂದರೆ ಬಿಜೆಪಿ ಕೈ ಶಾಸಕರನ್ನು ಖರೀದಿ ಮಾಡುತ್ತದೆ ಎಂದು ಮಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡುವಂತೆ ಮತದಾರರಿಗೆ ಮನವಿ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯದಲ್ಲಿ ಸರ್ಕಾರ ರಚಿಸಲು ನಮಗೆ 113 ಸ್ಥಾನಗಳ ಅಗತ್ಯವಿದ್ದರೂ, ಕಾಂಗ್ರೆಸ್ 120 ಸ್ಥಾನಗಳನ್ನು ಗೆದ್ದರೂ ಸಾಕಾಗುವುದಿಲ್ಲ. ಏಕೆಂದರೆ ಅವರು ನಮ್ಮ ಶಾಸಕರನ್ನು ಖರೀದಿಸುವ ಅಪಾಯ ಇದೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.
ನಮ್ಮ ಶಾಸಕರನ್ನು ಕದ್ದುಕೊಂಡು ರಾಜ್ಯದಲ್ಲಿ ಸರ್ಕಾರ ರಚಿಸಿದ್ದಾರೆ. ಅದೇ ರೀತಿ ಗೋವಾದಲ್ಲೂ ಶಾಸಕರ ಕಳ್ಳತನ ಮಾಡಲಾಗಿದೆ. ಕಳ್ಳರ ಕಾಟ ಇರುವುದರಿಂದ ಎಚ್ಚರಿಕೆ ವಹಿಸಬೇಕು. ನಾನು ಯಾರ ಬಗ್ಗೆಯೂ ಮಾತನಾಡುತ್ತಿಲ್ಲ. ನಾವು ಬಹಳ ಜಾಗರೂಕರಾಗಿರಬೇಕು. ಹೀಗಾಗಿ 150 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಸ್ಥಿರ ಸರ್ಕಾರ ದೇಶ ಮತ್ತು ನಾಗರಿಕರಿಗೆ ಒಳ್ಳೆಯ ಆಡಳಿತ ನೀಡುತ್ತದೆ ಎಂದು ಖರ್ಗೆ ಹೇಳಿದ್ದಾರೆ.

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮುಗಿದಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ಕೂಡ ಮಾಡಲಾಗಿದೆ. ಇಂದು ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
'ಒನ್ ಇಂಡಿಯಾ ಕನ್ನಡ' ಜಾಲತಾಣವು ಓದುಗರಿಗೆ ಚುನಾವಣಾ ಬೆಳವಣಿಗೆಯ ಮಾಹಿತಿ ನೀಡಲು ನಿತ್ಯವು ಹೊಸ ಲೈವ್ ಬ್ಲಾಗ್ ಆರಂಭಿಸಲಿದೆ. ನೀವು ಇಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಪ್ರಚಾರ, ಭರವಸೆ, ಸಾರ್ವಜನಿಕ ಸಭೆಗಳು, ಹೇಳಿಕೆಗಳು, ಚರ್ಚೆಗಳು, ಪ್ರಚಾರದ ಸದ್ದು-ಗದ್ದಲಗಳ ಕ್ಷಣ ಕ್ಷಣದ ಮಾಹಿತಿ ತಿಳಿದುಕೊಳ್ಳಬಹುದು.
ಸ್ವಯಂಕೃತ ಅಪರಾಧದಿಂದ ಪಕ್ಷ ಬಿಟ್ಟವರಿಗೆ ನಷ್ಟ
ಜನವಿರೋಧಿ ಸರ್ಕಾರ ಬದಲಾಯಿಸಿ: ಖರ್ಗೆ
ಎಐಸಿಸಿ ಅಧ್ಯಕ್ಷರಾದ @kharge ಅವರು ಸುಳ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಬಿಜೆಪಿ ಕರ್ನಾಟಕದ ಅಸ್ಮಿತೆಯ ಮೇಲೆ ನಿರಂತರ ದಾಳಿ ನಡೆಸುತ್ತಿದೆ. 40% ಭ್ರಷ್ಟಾಚಾರದ ಮೂಲಕ ರಾಜ್ಯವನ್ನು ಲೂಟಿ ಹೊಡೆಯುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಇಂತಹ ಜನವಿರೋಧಿ ಸರ್ಕಾರವನ್ನು ಬದಲಾಯಿಸಿ ಜನಪರ ಸರ್ಕಾರನ್ನು ತರುವ ಅಗತ್ಯವಿದೆ ಎಂದರು. pic.twitter.com/qnEMopfuIf
— Karnataka Congress (@INCKarnataka) April 25, 2023
ನಾಳೆ ವಿವಿಧೆಡೆ ಬಿಜೆಪಿ ಪರ ಕಿಚ್ಚ ಸುದೀಪ್ ಪ್ರಚಾರ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಸಿಎಂ
ಸಿಟಿ ರವಿ ಮುಂದಿನ ಸಿಎಂ: ಈಶ್ವರಪ್ಪ
ತೇರದಾಳ: ಬಿಜೆಪಿ ಅಭ್ಯರ್ಥಿಗಳ ಪರ ಅಮಿತ್ ಶಾ ಭರ್ಜರಿ ಮತ ಬೇಟೆ
ಏ.29ಕ್ಕೆ ಪ್ರಧಾನಿ ಮೋದಿ ಆಗಮನ: 21 ಕಡೆ ರ್‍ಯಾಲಿ

ಯತ್ನಾಳ್ ಸಿಎಂ ಆಗಲಿ: ಅಭಿಮಾನಿಯ ದೀಡ ನಮಸ್ಕಾರ್
ನಿಪ್ಪಾಣಿ: ಮಹಿಳಾ ಮತಗಳ ಮೇಲೆ ಕೇಂದ್ರ ಸಚಿವೆ ಕಣ್ಣು
ಕೇಂದ್ರ ಸಚಿವರಾದ ಶ್ರೀಮತಿ @smritiirani ಅವರ ಕಾರ್ಯಕ್ರಮದ ವಿವರ 25-04-2023.#BJPYeBharavase pic.twitter.com/q4qwxekzc8
— BJP Karnataka (@BJP4Karnataka) April 25, 2023
In @BJP4India, power is not passed from mother to son, father to children or husbands to wives.
— BJP Karnataka (@BJP4Karnataka) April 24, 2023
Instead, our priority is to maintain a strong connection with our karyakartas & people. In light of this, we're launching #BJPMahaPracharaAbhiyana on the 25th & 26th of April.
1/6 pic.twitter.com/dbAYw6vnpD
ಬಿಜೆಪಿ 1.5 ಲಕ್ಷ ಕೋಟಿ ರೂ.ಲೂಟಿ: ಪ್ರಿಯಾಂಕಾ ಗಾಂಧಿ

ಬಿಜೆಪಿಯವರು ಎಂತಹ ನೀಚರು: ಸಿದ್ದು ಗರಂ
'ಸಿದ್ದರಾಮಯ್ಯಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು?' ಸಾ.ರಾ. ಮಹೇಶ್ ಪ್ರಶ್ನೆ

ಧಾರವಾಡದಲ್ಲಿ ಅಮೃತ ದೇಸಾಯಿ ಪರ ಬೊಮ್ಮಾಯಿ ಪ್ರಚಾರ

ಚಿಕ್ಕಪೇಟೆ ಕಾಂಗ್ರೆಸ್ ಬಂಡಾಯ ಶಮನ!

ಮುಸ್ಲಿಮರ 2ಬಿ ಮೀಸಲಾತಿ ವಿಚಾರ: ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?
ದಕ್ಷಿಣ ಕರ್ನಾಟಕದಲ್ಲಿ ಪ್ರಿಯಾಂಕಾ ಉತ್ತರದಲ್ಲಿ ಅಮಿತ್ ಶಾ

ಶೆಟ್ಟರ್ ವಿರುದ್ಧ 35 ಸಾವಿರ ಅಂತರದಲ್ಲಿ ಗೆಲ್ಲಬೇಕು: ಅಮಿತ್ ಶಾ ಸೂಚನೆ
ಕರ್ನಾಟಕ ಚುನಾವಣೆ ಕಾಂಗ್ರೆಸ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮಹತ್ವದ್ದಾಗಿದೆ -ಕೆ ಸಿ ವೇಣುಗೋಪಾಲ್

ಬಿಜೆಪಿ ಅಭ್ಯರ್ಥಿಗೆ ಮೇಕೆ ಮರಿ ಗಿಫ್ಟ್ ಕೊಟ್ಟ ಕಾರ್ಯಕರ್ತರು

ಚಾಮುಂಡಿ ದೇವಿಯ ದರ್ಶನ ಪಡೆದ ಹೆಚ್‌ಡಿ ಕುಮಾರಸ್ವಾಮಿ

ನನ್ನ ಆತ್ಮಕ್ಕೆ ಶಾಂತಿ ಸಿಗುತ್ತೆ ನನ್ನನ್ನು ಸೋಲಿಸಿದವರಿಗೆ ಕಣ್ಣೀರು ಹಾಕಿಸಿ: ದೇವೇಗೌಡ
ಮಾಜಿ ಸಚಿವ ಡಿ.ಬಿ.ಇನಾಂದಾರ್ ನಿಧನ
ಡಿಕೆ ಶಿವಕುಮಾರ್ ಪರವಾಗಿ ಮತಬೇಟೆಗಿಳಿದ ಪತ್ನಿ ಉಷಾ

ಬಿಜೆಪಿಗೆ ಸ್ಪಷ್ಟ ಬಹುಮತದಿಂದ ಜಯ ಖಚಿತ- ಬಿಎಸ್‌ವೈ

ಮಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತು
ಧಾರವಾಡಕ್ಕಿಂದು ಸ್ಮೃತಿ ಇರಾನಿ- ಇಂದಿನ ಕಾರ್ಯಕ್ರಮಗಳೇನು?













Click it and Unblock the Notifications