Karnataka Elections 2023: ಕಳೆದ 4 ವರ್ಷಗಳಲ್ಲಿ ಬಿಜೆಪಿ 1,50,000 ಕೋಟಿ ಲೂಟಿ ಮಾಡಿದೆ: ಕಾಂಗ್ರೆಸ್ ಆರೋಪ

ಬೆಂಗಳೂರು,ಮೇ5: ಕರ್ನಾಟಕ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿ ವಿರುದ್ಧ ಜಾಹೀರಾತು ನೀಡಿ "ಭ್ರಷ್ಟಾಚಾರ ದರ ಕಾರ್ಡ್" ಬಿಡುಗಡೆ ಮಾಡಿ ದಾಳಿ ಮಾಡಿದೆ. ಮುಖ್ಯಮಂತ್ರಿ ಸ್ಥಾನಕ್ಕೆ 2,500 ಕೋಟಿ ವೆಚ್ಚವಾದರೆ, ಸಚಿವ ಸ್ಥಾನಕ್ಕೆ 500 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಭ್ರಷ್ಟಾಚಾರ ದರ ಕಾರ್ಡ್ ನಲ್ಲಿ ಹೇಳಲಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಕನ್ನಡ ಹಾಗೂ ಇಂಗ್ಲಿಷ್‌ ದಿನ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದು, ಕಮಿಷನ್ ವೆಚ್ಚಗಳ ವಿವರಗಳನ್ನು ಸಹ ಹೊಂದಿದ್ದು, ಇದು ವಿವಿಧ ಡೀಲ್‌ಗಳಿಗೆ 40% ಸರ್ಕಾರಕ್ಕೆ ಬೇಡಿಕೆ ಎಂಬುದಿದೆ. ಇದು ಮಠದ ಅನುದಾನಗಳಿಗೆ 30% ಕಮಿಷನ್‌ನೊಂದಿಗೆ ಪ್ರಾರಂಭವಾಗುತ್ತದೆ, ರಸ್ತೆ ಒಪ್ಪಂದಗಳಿಗೆ 40% ಮತ್ತು ಕೋವಿಡ್ 19 ಪೂರೈಕೆಗಳಿಗೆ 75% ವರೆಗೆ ಹೋಗುತ್ತದೆ ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

karnataka Elections 2023: BJP Government Of Looting 1,50,000 Crore congress accuses

ಕಾಂಗ್ರೆಸ್ ಬಿಡುಗಡೆ ಮಾಡಿರುವ ಒಂದು ಭ್ರಷ್ಟಾಚಾರ ಕಾರ್ಡ್‌ನಲ್ಲಿ ಕಳೆದ 4 ವರ್ಷಗಳಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲಾ ಭ್ರಷ್ಟಾಚಾರ ಆರೋಪಗಳನ್ನು ಪ್ರದರ್ಶಿಸಲಾಗಿದೆ. ಇದು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಬಿಜೆಪಿಗೆ ತೀವ್ರ ಪೆಟ್ಟು ನೀಡಲಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಕಾಲದ ಭ್ರಷ್ಟಾಚಾರದ ರೇಟ್‌ ಕಾರ್ಡ್ ಗಳು ಅವು: ಗೋವಿಂದ ಕಾರಜೋಳ ಕಿಡಿ

ಕಾಂಗ್ರೆಸ್ ನವರು ಅಪಪ್ರಚಾರ ಹಾಗೂ ಸುಳ್ಳು ಹೇಳುವುದನ್ನ ನೋಡಿದ್ರೆ ಹತಾಶೆ ಗೆ ಒಳಗಾಗಿದ್ದಾರೆ. ಇವತ್ತು ಕಾಂಗ್ರೆಸ್ ನವ್ರು ಪತ್ರಿಕೆಯ ಮುಖಪುಟದಲ್ಲಿ ಭ್ರಷ್ಟಾಚಾರ ದ ರೇಟ್ ಕಾರ್ಡ್ ಅಂತ ಹಾಕಿದ್ದಾರೆ. ಅದು ಅವರ ಕಾಲದಲ್ಲಿದ್ದ ಭ್ರಷ್ಟಾಚಾರದ ರೇಟ್ ಕಾರ್ಡ್ ಗಳನ್ನ ಇವತ್ತು ನಮ್ಮ ಮೇಲೆ ಹಾಕಿ ಆರೋಪ ಮಾಡುತ್ತಿದ್ದಾರೆ ಎಂದು ಸಚಿವರಾದ ಗೋವಿಂದ ಕಾರಜೋಳ್‌ ಹೇಳಿದರು.

karnataka Elections 2023: BJP Government Of Looting 1,50,000 Crore congress accuses

ಈ ಕುರಿತು ಶುಕ್ರವಾರ ಇಳಕಲ್‌ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ 60 ವರ್ಷ ಆಡಳಿತ ಮಾಡಿರುವ ಕಾಂಗ್ರೆಸ್ 70 ಲಕ್ಷ ಕೋಟಿ ಹಗರಣ ಮಾಡಿ ಅನೇಕ ರಾಷ್ಟ್ರೀಯ ನಾಯಕರು ಜೈಲಿಗೆ ಹೋಗಿ ಬೇಲ್ ಮೇಲೆ ಇದ್ದಾರೆ. ಈಗ ಬಿಜೆಪಿ ಮಸಿ ಹಚ್ಚುವ ಕೆಲಸವನ್ನ ಮಾಡುತ್ತಿದ್ದಾರೆ. ಈ ದೇಶದ ಮತ್ತು ರಾಜ್ಯದ ಜನರಿಗೆ ಯಾರು ಭ್ರಷ್ಟರು ಅಂತ ಗೊತ್ತಿದೆ.

ಈ ಬಾರೀ ಬಿಜೆಪಿ ಸ್ಪಷ್ಟವಾಗಿ 130 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ, ಯಾವುದೇ ಅನುಮಾನ ಬೇಡ. ಯಡಿಯೂರಪ್ಪ, ಬೊಮ್ಮಾಯಿ ಅಭಿವೃದ್ದಿಯ ಜೊತೆಗೆ ಸಾಮಾಜಿಕ ನ್ಯಾಯವನ್ನ ನೀಡಿದ್ದಾರೆ. ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸಿ ಮೀಸಲಾತಿಯನ್ನು ಹೆಚ್ಚಿಗೆ ಮಾಡಿದೆ. ನಮ್ಮ ಪಕ್ಷ ಬಹಳ ಸ್ಪಷ್ಟ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಜರಂಗದಳ ಬ್ಯಾನ್‌ ಕಾಂಗ್ರೆಸ್‌ ಭರವಸೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ನವರಿಗೆ ತಲೆ ಸರಿ ಇಲ್ಲ. ಉತ್ತರ ಕರ್ನಾಟಕದ ಕಡೆ ಒಂದು ಮಾತು ಹೇಳುತ್ತಾರೆ. ಧಾರವಾಡದಲ್ಲಿ ಹುಚ್ಚರ ಆಸ್ಪತ್ರೆ ಯಿಂದ ತಪ್ಪಿಸಿಕೊಂಡು ಬಂದ ರೋಗಿಗಳ ತರ ವರ್ತನೆ ಮಾಡುತ್ತಿದ್ದಾರೆ. ಬಜರಂಗದಳದವರು ಶ್ರೀರಾಮ, ಆಂಜನೇಯ ನ ಭಕ್ತರು. ಪ್ರಾಚೀನ ಕಾಲದಿಂದಲೂ ಹನುಮಂತನ ಭಕ್ತರು. ಹನುಮನ ಭಕ್ತರು ಎಲ್ಲಾರು ಬಜರಂಗಿಗಳು . ಕಾಂಗ್ರೆಸ್ ನವ್ರ ಈ ಭರವಸೆಯನ್ನ ನಾನು ಖಂಡಿಸುತ್ತೇನೆ ಎಂದರು.

ನಾವು ಹನುಮನ ಭಕ್ತರು ಎಂದು ಡಿ ಕೆ ಶಿವಕುಮಾರ್‌ ಹೇಳಿಕೆ ಕುರಿತು ಮಾತನಾಡಿ, ಕಾಂಗ್ರೆಸ್ ನವ್ರಿಗೆ ಈಗ ತಪ್ಪಿನ ಅರಿವಾಗಿದೆ. ಹೀಗಾಗಿ ಹಾಗೇ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+