TV9 C-Voter Pre Poll Survey: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರು ಸಿಎಂ ಆಗಬೇಕು?

ಬೆಂಗಳೂರು, ಏಪ್ರಿಲ್ 25: ಸಿವೋಟರ್ ಮತ್ತು ಟಿವಿ9 ಜಂಟಿಯಾಗಿ ನಡೆಸಲಾದ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. 224 ಕ್ಷೇತ್ರಗಳಲ್ಲಿ 448 ಜನರ ತಂಡ ಈ ಸಮೀಕ್ಷೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಪ್ರತಿಯೊಂದು ಕ್ಷೇತ್ರದಲ್ಲಿ ಇಬ್ಬರು ಸಮೀಕ್ಷೆಯ ತಂಡದಲ್ಲಿದ್ದರು. 21,895 ಜನರ ಅಭಿಪ್ರಾಯವನ್ನು ಕ್ರೋಢೀಕರಿಸಿ ಈ ಸಮೀಕ್ಷೆಯಲ್ಲಿ ಸಿದ್ದಪಡಿಸಲಾಗಿದೆ ಎಂದು ಸಿವೋಟರ್- ಟಿವಿ 9 ಹೇಳಿದೆ.

ರಾಜ್ಯದ ಸಮಗ್ರ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಭ್ರಷ್ಟಾಚಾರ ಮುಕ್ತ ಸರ್ಕಾರ, ಕೆಲವು ಮಂದಿ ಹೇಳಲು ಆಗಲ್ಲ ಎಂದಿದ್ದಾರೆ. ಸರ್ಕಾರಿ ಸೇವೆಗಳು ಸರಿಯಾಗಿ ಜನರಿಗೆ ಸಿಗ್ತಿಲ್ಲ ಎಂದು ಸಾರ್ವಜನಿಕರು ಹೇಳಿಕೊಂಡಿದ್ದಾರೆ. ಮೂಲಭೂತ ಸೌಕರ್ಯಗಳು ನಿವಾರಣೆಯಾಗಬೇಕು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಉತ್ತಮ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಮುಂದಿನ ಸರ್ಕಾರದಿಂದ ನಿರೀಕ್ಷೆ ಮಾಡುತ್ತಿರುವುದಾಗಿ ಮತದಾರರು ತಿಳಿಸಿದ್ದಾರೆ.

 TV9 C-Voter Opinion Poll Survey

ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ಮತ್ತು ಜನರ ಅಭಿಪ್ರಾಯ ಈ ರೀತಿಯಿದೆ:

1. ಒಬ್ಬ ಮತದಾರನಾಗಿ ನಿಮಗೆ ಮುಖ್ಯ ವಿಷಯ ಯಾವುದು?

ಅಭಿವೃದ್ದಿ - 44%
ಉದ್ಯೋಗ - 25.1%
ಭ್ರಷ್ಟಾಚಾರ ನಿರ್ಮೂಲನೆ - 13.9%

2. ದಿನನಿತ್ಯದ ಜೀವನದಲ್ಲಿ ಅಗತ್ಯವಾಗಿ ಬದಲಿಸಬೇಕದ ವಿಚಾರ ಯಾವುದು?

ಸರಕಾರೀ ಸೇವೆ - 19.8%
ಸರಕಾರೀ ಸೇವೆ - 19.8%
ಮೂಲಭೂತ ಸೌಕರ್ಯ - 46.5%
ಗುತ್ತಿಗೆ ವ್ಯವಹಾರ - 10.8%
ಉತ್ತಮ ಶಿಕ್ಷಣ, ಆರೋಗ್ಯ - 30%

3. ಮೀಸಲಾತಿ ವಿಚಾರ ಚುನಾವಣೆಯಲ್ಲಿ ಪರಿಣಾಮ ಬೀರುತ್ತಾ?

ಇಲ್ಲ - 33.8%
ಹೌದು - 4.4%
ಹೇಳಲು ಆಗಲ್ಲ - 20.8%

4.ಡಬಲ್ ಇಂಜಿನ್ ಸರ್ಕಾರ ಕರ್ನಾಟಕಕ್ಕೆ ಸಹಕಾರಿಯಾಗಿದೆಯಾ?

ಇಲ್ಲ- 40.6%
ಹೌದು - 38.7%
ಹೇಳಕ್ಕಾಗಲ್ಲ - 20.7%

5.ಬಿಜೆಪಿ ಸರ್ಕಾರದ ಆಡಳಿತ ನಿಮಗೆ ಹೇಗನ್ನಿಸುತ್ತೆ.?

ಉತ್ತಮ -29.4%
ಸಾಧಾರಣ- 16.4%
ಚನಾಗಿಲ್ಲ-46.1%
ಹೇಳಕ್ಕಾಗಲ್ಲ-8.2%

6.ಕಾಂಗ್ರೆಸ್ ಘೋಷಿಸಿರುವ ಉಚಿತ ಯೋಜನೆಗಳು ಪಕ್ಷಕ್ಕೆ ಮತ ಸೆಳೆಯುವಷ್ಟು ಸಮರ್ಥವಾಗಿದೆಯಾ?

ಇಲ್ಲ - 38.2%
ಹೌದು - 41.4%
ಹೇಳಕ್ಕಾಗಲ್ಲ -20.5%

7. 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಿಎಂ ಸ್ಥಾನಕ್ಕೆ ನಿಮ್ಮ ಆಯ್ಕೆ ಯಾರು?

ಬಸವರಾಜ ಬೊಮ್ಮಾಯಿ - 39.0%
ಬಿಎಸ್ ಯಡಿಯೂರಪ್ಪ - 20.4%
ಇತರರು - 40.6%

8.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರು ಸಿಎಂ ಆಗ್ಬೇಕು ಅಂತ ಬಯಸ್ತೀರಾ?

ಸಿದ್ದರಾಮಯ್ಯ - 50.6%
ಡಿಕೆ ಶಿವಕುಮಾರ್ - 18.4%
ಇತರರು - 31.0%

9. ಮೋದಿ ಅಥವಾ ಕ್ಷೇತ್ರದ ಅಭ್ಯರ್ಥಿ, ನಿಮ್ಮ ಪ್ರಕಾರ ಇಬ್ಬರಲ್ಲಿ ಯಾರ ವರ್ಚಸ್ಸು ಹೆಚ್ಚು?

ಪ್ರಧಾನಿ ನರೇಂದ್ರ ಮೋದಿ - 46.4
ಕ್ಷೇತ್ರದ ಬಿಜೆಪಿ ಅಭ್ಯರ್ಥಿ - 20.7
ಹೇಳಲು ಆಗಲ್ಲ - 32.9

10. ನಿಮ್ಮ ಪ್ರಕಾರ ಮೇ 2023ಕ್ಕೆ ಸರ್ಕಾರ ರಚಿಸುವುದು ಯಾವುದು?

ಕಾಂಗ್ರೆಸ್ - 37.8 %
ಬಿಜೆಪಿ - 36.0 %
ಜೆಡಿಎಸ್ - 13.0 %
ಬಿಜೆಪಿ + ಜೆಡಿಎಸ್ ಮೈತ್ರಿ - 6.2%
ಕಾಂಗ್ರೆಸ್ + ಜೆಡಿಎಸ್ ಮೈತ್ರಿ - 7.1%

11. ಬಿಜೆಪಿ ಮತ್ತು ಜೆಡಿಎಸ್ ಏನಾದ್ರೂ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ರೆ ಯಾರು ಸಿಎಂ ಆಗ್ಬೇಕು ಎಂದು ಬಯಸ್ತೀರಾ?

ಹೆಚ್‌.ಡಿ.ಕುಮಾರಸ್ವಾಮಿ - 49.2%
ಬಿಜೆಪಿ ಸಿಎಂ - 33.5 %
ಹೇಳೋಕಾಗಲ್ಲ - 17.2%

12. ಕಾಂಗ್ರೆಸ್ ಮತ್ತು ಜೆಡಿಎಸ್ ಏನಾದ್ರೂ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ರೆ ಯಾರು ಸಿಎಂ ಆಗ್ಬೇಕು ಎಂದು ಬಯಸ್ತೀರಾ?

ಹೆಚ್‌.ಡಿ.ಕುಮಾರಸ್ವಾಮಿ - 50.2%
ಕಾಂಗ್ರೆಸ್ ಸಿಎಂ - 31.4 %
ಹೇಳೊಕಾಗಲ್ಲ - 18.4%

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+