ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜಾಪ್ರಭುತ್ವವನ್ನು ಕೊಂದಿದ್ದು ನಾವಲ್ಲ, ಕಾಂಗ್ರೆಸ್ಸು: ಶಾ ಕಿಡಿ

|
Google Oneindia Kannada News

ಬೆಂಗಳೂರು, ಮೇ 17: "ಪ್ರಜಾಪ್ರಭುತ್ವವನ್ನು ಕೊಂದಿದ್ದು ಬಿಜೆಪಿಯಲ್ಲ, ಕಾಂಗ್ರೆಸ್" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಈ ಪರಿ ರಾಜಕೀಯ ತಲ್ಲಣ ನಡೆಯುತ್ತಲೇ ಇದ್ದರೂ ಮೌನವಾಗಿಯೇ ಇದ್ದ ಅಮಿತ್ ಶಾ ಇದೀಗ ಮೌನ ಮುರಿದಿದ್ದಾರೆ. ಟ್ಬಿಟ್ಟರ್ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಅವರು, ಕರ್ನಾಟಕದ ಜನಾದೇಶಕ್ಕೆ ತಕ್ಕಂತೆ ಬಿಜೆಪಿ ಸರ್ಕಾರ ರಚಿಸಿದೆ ಎಂದಿದ್ದಾರೆ.

24ನೇ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿರುವ ಸವಾಲುಗಳು24ನೇ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿರುವ ಸವಾಲುಗಳು

ಮೇ 15 ರಂದು ಹೊರಬಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ, ಕಾಂಗ್ರೆಸ್ 78 ಸ್ಥಾನ, ಜೆಡಿಎಸ್ 38 ಸ್ಥಾನ ಮತ್ತು ಇತರರು 2 ಸ್ಥಾನ ಗೆದ್ದಿದ್ದರು. ರಾಜ್ಯದ 24 ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಜೆಪಿ ಈ ನಡೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ಸಿಗರಿಗೆ ಅಮಿತ್ ಶಾ ಪ್ರತಿಕ್ರಿಯೆ ಹೀಗಿದೆ.

ಪ್ರಜಾಪ್ರಭುತ್ವ ಕೊಂದಿದ್ದು

ನಿಜವಾಗಿಯೂ ಪ್ರಜಾಪ್ರಭುತ್ವವನ್ನು ಕೊಂದಿದ್ದು ಬಿಜೆಪಿಯಲ್ಲ. ಕಾಂಗ್ರೆಸ್. ಯಾವಾಗ ಜನಾದೇಶ ಹೊರಬಿತ್ತೋ ಆಗಲೇ ಜೆಡಿಎಸ್ ಗೆ ಅವಕಾಶವಾದಿಯಂತೇ ಬೆಂಬಲ ಘೋಷಿಸಿದ ಕಾಂಗ್ರೆಸ್ ಆ ಕ್ಷಣದಲ್ಲೇ ಪ್ರಜಾಪ್ರಭುತ್ವವನ್ನು ಕೊಂದಿದೆ. ಈ ನಿರ್ಧಾರ ತೆಗೆದುಕೊಂಡಿದ್ದು ಕರ್ನಾತಕದ ಒಳಿತಿಗಲ್ಲ, ರಾಜಕೀಯ ಹಿತಾಸಕ್ತಿಗೆ. ನಾಚಿಕೆಗೇಡು! ಎಂದಿದ್ದಾರೆ ಅಮಿತ್ ಶಾ.

ಜನಾದೇಶ ಯಾರಿಗೆ?

ಕರ್ನಾಟಕದಲ್ಲಿ ಜನಾದೇಶ ಸಿಕ್ಕಿದ್ದು ಯಾರಿಗೆ? 104 ಸ್ಥಾನ ಗೆದ್ದಿದ್ದು ಬಿಜೆಪಿ. 78 ಸ್ಥಾನಕ್ಕಿಳಿದು, ಮುಖ್ಯಮಂತ್ರಿಯೇ ಸೋತಿರುವ ಕಾಂಗ್ರೆಸ್ ಅಧಿಕಾರ ವಹಿಸಬೇಕೆ? ಕೇವಲ 38 ಸ್ಥಾನ ಗೆದ್ದ ಜೆಡಿಎಸ್ ಸರ್ಕಾರ ರಚಿಸಬೇಕೆ? ಜನರು ಇದನ್ನು ಸಾಕಷ್ಟು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರು- ಅಮಿತ್ ಶಾ

ಕಾಂಗ್ರೆಸ್ಸಿಗೆ ಆ ಪಕ್ಷದ ಇತಿಹಾಸ ಗೊತ್ತಿರಲಿ

"ಕಾಂಗ್ರೆಸ್ ಅಧ್ಯಕ್ಷರಿಗೆ ತಮ್ಮ ಪಕ್ಷದ ಇತಿಹಾಸ ಗೊತ್ತಿರಲಿ. ಭೀಕರ ತುರ್ತು ಪರಿಸ್ಥಿತಿ ಹೇರಿಕೆ, 365 ನೇ ವಿಧಿಯ ದುರುಪಯೋಗ, ಕೋರ್ಟು, ಮಾಧ್ಯಮ ಮತ್ತು ನಾಗರಿಕ ಸಮಾಜವನ್ನು ಸರ್ವಾಧಿಕಾರದ ಅಡಿಯಲ್ಲಿ ತಂದಿದ್ದು ಇವೆಲ್ಲವೂ ಕಾಮಗ್ರೆಸ್ ಸರ್ಕಾರದ ಸಾಧನೆಗಳು"- ಅಮಿತ್ ಶಾ

ಕರ್ನಾಟಕದ ಜನರು ಕಾಂಗ್ರೆಸ್ಸಿಗೆ ಪಾಠ ಕಲಿಸಿದ್ದಾರೆ

ಬಿಜೆಪಿಗೆ ಅತೀ ದೊಡ್ಡ ಪಕ್ಷದ ಸ್ಥಾನವನ್ನು ನೀಡಿದ ಕರ್ನಾಟಕದ ಜನತೆಗೆ ನಾನು ಆಭಾರಿಯಾಗಿದ್ದೇನೆ. ಇದು ಜನಾದೇಶವನ್ನು ಪ್ರತಿಬಿಂಬಿಸುತ್ತದೆ. ಕಟತಕದ ಜನರು ಕಾಂಗ್ರೆಸ್ಸಿನ ಭ್ರಷ್ಟ ಆಡಳಿತ, ಕುಟುಂಬ ರಾಜಕಾರಣ ಮತ್ತು ಜಾತಿ ವಿಭಜನೆಯ ರಾಜಕೀಯಕ್ಕೆ ಬೇಸತ್ತಿದ್ದರು ಎಂಬುದಕ್ಕೆ ಈ ತಿರಸ್ಕಾರವೇ ಸಾಕ್ಷಿ- ಅಮಿತ್ ಶಾ

English summary
Karnataka Election results 2018: BJP state president Amit shah tweets, "The ‘Murder of Democracy’ happens the minute a desperate Congress made an ‘opportunist’ offer to the JD(S), not for Karnataka’s welfare but for their petty political gains. Shameful!"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X