Karnataka Election: ಬೊಮ್ಮಾಯಿಯವರನ್ನು ಮನೆಯಲ್ಲಿ ಕೂರಿಸಲು ಬಿಜೆಪಿ ಸಂಚು: ಕಾಂಗ್ರೆಸ್ ಆರೋಪ
ಲಿಂಗಾಯತ ವಿಚಾರದಲ್ಲಿ ಬಿಜೆಪಿ ಯಾಕೆ ಅಂತರ ಕಾಯ್ದುಕೊಳ್ಳುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಪ್ರಲ್ಹಾದ್ ಜೋಶಿ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಚುನಾವಣೆ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕೂಡ ಮನೆಯಲ್ಲಿ ಕೂರಿಸಲು ಸಂಚು ಮಾಡಿದೆ, ಎಂದು ಆರೋಪಿಸಿದೆ.
ಮಾಧ್ಯಮದವರ ಜೊತೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಪ್ರಲ್ಹಾದ್ ಜೋಶಿ ಸಿಎಂ ಅಭ್ಯರ್ಥಿ ಬಗ್ಗೆ ಮಾತನಾಡಿದ್ದರು. "ಚುನಾವಣೆಯ ನಂತರ ರಾಜ್ಯದ ಮುಖ್ಯಮಂತ್ರಿ ಯಾರು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಲಿಂಗಾಯತರನ್ನೇ ಸಿಎಂ ಮಾಡ್ತೀವಿ ಎಂದು ಎಲ್ಲೂ ಹೇಳಿಲ್ಲ. ಈಗಾಗಲೇ ಮೂರು ಜನ ಲಿಂಗಾಯತರನ್ನು ಬಿಜೆಪಿ ಸಿಎಂ ಮಾಡಿದೆ" ಎಂದು ಜೋಶಿ ಹೇಳಿದ್ದರು.

ಜೋಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕಾಂಗ್ರೆಸ್ ಈ ಟ್ವೀಟ್ ಮಾಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹಲವು ಹಿರಿಯ ನಾಯಕರಿಗೆ ಟಿಕೆಟ್ ನೀಡಿಲ್ಲ. ಇದನ್ನೆ ದಾಳವಾಗಿಟ್ಟುಕೊಂಡು ಕಾಂಗ್ರೆಸ್ ರಾಜಕೀಯ ಮಾಡಲು ಮುಂದಾಗಿದೆ. ಬಿಜೆಪಿ ಇತರೆ ಪಕ್ಷಗಳಿಗೆ ಸಿಎಂ ಅಭ್ಯರ್ಥಿ ಯಾರು ಎಂದು ಪ್ರಶ್ನೆ ಮಾಡುತ್ತಿದೆ. ಆದರೆ ಸ್ವತಃ ಬಿಜೆಪಿ ಕೂಡ ತಮ್ಮ ಸಿಎಂ ಅಭ್ಯರ್ಥಿ ಯಾರು ಎಂದು ಘೋಷಿಸಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದೆ.
ಬಿಜೆಪಿ ಲಿಂಗಾಯತರ ವಿಚಾರದಲ್ಲಿ ಏಕೆ ಅಂತರ ಕಾಯ್ದುಕೊಳ್ಳುತ್ತಿದೆ?@JoshiPralhad ಅವರ ಮಾತಿನ ಧೋರಣೆಯಲ್ಲಿ ಚುನಾವಣೆಯ ನಂತರ ಬೊಮ್ಮಾಯಿಯವರನ್ನೂ ಮನೆಯಲ್ಲಿ ಕೂರಿಸುವ ಸಂಚು ಕಾಣುತ್ತಿದೆ.
— Karnataka Congress (@INCKarnataka) April 25, 2023
ಇತರ ಪಕ್ಷಗಳಿಗೆ ಸಿಎಂ ಅಭ್ಯರ್ಥಿ ಯಾರು ಎಂದು ಪ್ರಶ್ನಿಸುವ ಬಿಜೆಪಿ ತಾವು ಘೋಷಿಸಲು ಹಿಂದೇಟು ಹಾಕುತ್ತಿರುವುದೇಕೆ? pic.twitter.com/mkbo4aek6A
ಕೈಕಟ್ಟಿ, ನಡುಬಗ್ಗಿಸಿ ನಿಲ್ಲಬೇಕಿಲ್ಲ ಎಂದ ಕಾಂಗ್ರೆಸ್
ಅಮಿತ್ ಶಾ ಮುಂದೆ ರಾಮ್‌ದಾಸ್ ನಡುಬಗ್ಗಿಸಿ ನಿಂತ ಫೋಟೊ ವೈರಲ್ ಆದ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮಾಡಿದ್ದು. ಕಾಂಗ್ರೆಸ್ ಎಲ್ಲರನ್ನೂ ಗೌರವವಾಗಿ ನಡೆಸಿಕೊಳ್ಳುತ್ತದೆ ಎಂದು ಟ್ವೀಟ್ ಮಾಡಿದೆ. "ಅವಮಾನಿತರಾದ ಹಿರಿಯ ನಾಯಕನನ್ನು ಆದರಪೂರ್ವಕವಾಗಿ ನಡೆಸಿಕೊಳ್ಳುವುದೇ ಕಾಂಗ್ರೆಸ್ ಸಂಸ್ಕೃತಿ. ಜಗದೀಶ್ ಶೆಟ್ಟರ್ ಅವರು ದುಡಿದು ಕಟ್ಟಿದ ಬಿಜೆಪಿಯಲ್ಲಿ ಕನಿಷ್ಠ ಕಾರ್ಯಕ್ರಮಕ್ಕೆ ಆಹ್ವಾನಿಸುವ ಸೌಜನ್ಯವನ್ನೂ ತೋರಲಿಲ್ಲ. ಆದರೆ ಕಾಂಗ್ರೆಸ್ ಅವರಿಗೆ ಸಲ್ಲಬೇಕಾದ ಗೌರವ ನೀಡುತ್ತಿದೆ, ಇಲ್ಲಿ ಕೈಕಟ್ಟಿ, ನಡುಬಗ್ಗಿಸಿ ನಿಲ್ಲಬೇಕಾದ ಯಾವ "ಬಾದ್‌ಶಾ"ನೂ ಇಲ್ಲ." ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದೆ.












Click it and Unblock the Notifications