ಅಬ್ಬರದ ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ಬೆಂಗಳೂರು, ಏ.15 : ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ ಎರಡು ದಿನಗಳು ಬಾಕಿ ಉಳಿದಿವೆ. ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದ್ದು, ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ಕಾರ್ಯ ಕೈಗೊಳ್ಳಬಹುದು.

ಸೋಮವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ, ಏಪ್ರಿಲ್ 15 ರಂದು ಸಂಜೆ 6 ಗಂಟೆಯ ನಂತರ ಚುನಾವಣಾ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ ಎಂದು ಹೇಳಿದರು. [ಚುನಾವಣಾ ಆಯೋಗದ ವೆಬ್ ಸೈಟ್]

ಏಪ್ರಿಲ್ 17ರ ಗುರುವಾರ ಮತದಾನ ನಡೆಯಲಿದ್ದು, ಅಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾರರು ಮತದಾನ ಕೇಂದ್ರ, ತಮ್ಮ ಹೆಸರು, ಕ್ರಮ ಸಂಖ್ಯೆ ಇತ್ಯಾದಿಗಳನ್ನು ತಿಳಿಯಲು ಚುನಾವಣಾ ಆಯೋಗದ ವೆಬ್ ಸೈಟ್ ಗೆ ಭೇಟಿ ನೀಡಬಹುದು ಎಂದು ಅನಿಲ್ ಕುಮಾರ್ ಝಾ ಹೇಳಿದರು.

ಬಹಿರಂಗ ಪ್ರಚಾರ ಅಂತ್ಯ

ಬಹಿರಂಗ ಪ್ರಚಾರ ಅಂತ್ಯ

ಮಂಗಳವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡಲು ಬಂದ ನಾಯಕರು ಕ್ಷೇತ್ರವನ್ನು ತೊರೆಯಬೇಕು ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ನೀಡಿದೆ. ಇಂದು ಸಂಜೆಯಿಂದ ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ಕೈಗೊಳ್ಳಬಹುದು.

ಮೊಬೈಲ್ ಬಳಕೆ ನಿಷೇಧ

ಮೊಬೈಲ್ ಬಳಕೆ ನಿಷೇಧ

ಮತದಾನದ ದಿನದಂದು ಅಭ್ಯರ್ಥಿಗಳು ಮತದಾನ ಕೇಂದ್ರಕ್ಕಿಂತ 200 ಮೀ ದೂರದಲ್ಲಿ ವಾಸ್ತವ್ಯ ಹೂಡಬಹುದು. ಈ ಸ್ಥಳದಲ್ಲಿ ಅವರು 1 ಕುರ್ಚಿ, ಟೇಬಲ್ ಹಾಗೂ ನಾಲ್ಕೂವರೆ ಅಡಿ ಉದ್ದದ ಮೂರು ಅಡಿ ಅಗಲದ ಬ್ಯಾನರನ್ನು ಮಾತ್ರ ಇಟ್ಟುಕೊಳ್ಳಲು ಅವಕಾಶ ನೀಡಲಾಗಿದೆ. ಮತದಾರರ ಅನುಕೂಲಕ್ಕೆ ಬಿಳಿ ಚೀಟಿಯಲ್ಲಿ ಮತದಾರರ ಕ್ರಮ ಸಂಖ್ಯೆ ಮತ್ತು ಹೆಸರು ಮಾತ್ರ ಇರುವ ಚೀಟಿಗಳನ್ನು ನೀಡಬಹುದು. ಮತದಾನ ಕೇಂದ್ರದ ಒಳಗೆ ಮೊಬೈಲ್ ಫೋನ್‍ಗಳನ್ನು ನಿಷೇಧಿಸಲಾಗಿದೆ.

ಚುನಾವಣಾ ಸಮೀಕ್ಷೆಗಳ ಪ್ರಸಾರವಿಲ್ಲ

ಚುನಾವಣಾ ಸಮೀಕ್ಷೆಗಳ ಪ್ರಸಾರವಿಲ್ಲ

ಮಂಗಳವಾರ ಸಂಜೆ 6 ಗಂಟೆಯ ನಂತರ ವಿದುನ್ಮಾನ ಮಾಧ್ಯಮಗಳಲ್ಲಿ ಚುನಾವಣಾ ಸಮೀಕ್ಷೆಗಳು ಪ್ರಸಾರವಾಗುವಂತಿಲ್ಲ. ಮತದಾರರ ಮೆಲೆ ಪ್ರಭಾವ ಬೀರುವಂತಹ ಚರ್ಚೆ ಸಂವಾದಗಳನ್ನು ಸಹ ನಿರ್ಬಂಧಿಸಲಾಗಿದೆ.

ಚುನಾವಣಾ ಸಿಬ್ಬಂದಿ

ಚುನಾವಣಾ ಸಿಬ್ಬಂದಿ

ಚುನಾವಣಾ ಪ್ರಕ್ರಿಯೆಗಾಗಿ 2,95,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರಲ್ಲಿ 1,76,968 ಪುರುಷರು ಹಾಗೂ 1,18,043 ಮಹಿಳೆಯರಿದ್ದಾರೆ. ಚುನಾವಣಾ ಭದ್ರತೆಗಾಗಿ 60,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುಮಾರು 15,183 ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ.

ಮತಗಟ್ಟೆಗಳು

ಮತಗಟ್ಟೆಗಳು

ರಾಜ್ಯದ 28 ಕ್ಷೇತ್ರಗಳಲ್ಲಿ 54,264 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 11,424 ಅತಿಸೂಕ್ಷ್ಮ ಮತಗಟ್ಟೆಗಳಾಗಿವೆ. 14,968 ಸೂಕ್ಷ್ಮ ಮತಗಟ್ಟೆಗಳು.

ಮತಗಟ್ಟೆ ಮಾಹಿತಿ ಎಸ್ಎಂಎಸ್ ಮೂಲಕ

ಮತಗಟ್ಟೆ ಮಾಹಿತಿ ಎಸ್ಎಂಎಸ್ ಮೂಲಕ

ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು ಎಂದು ತಿಳಿಯಲು ನಿಮ್ಮ ಮೊಬೈಲ್ ನಿಂದ 9243355223 ಎಸ್ಎಂಎಸ್ ಮಾಡಿ ನಿಮ್ಮ ಮತಗಟ್ಟೆ ಮಾಹಿತಿ ಪಡೆಯಬಹುದು. ಮೊದಲು KAEPIC ಎಂದು ಟೈಪ್ ಮಾಡಿ ನಂತರ ಸ್ಪೇಸ್ ಬಿಟ್ಟು ನಿಮ್ಮ ಚುನಾವಣಾ ಗುರುತಿನ ಚೀಟಿಯ ಸಂಖ್ಯೆಯನ್ನು ನಂಬರ್ ಗೆ 9243355223 ಎಸ್ಎಸ್ಎಂ ಮಾಡಬೇಕು. [ಮತಗಟ್ಟೆ ಮಾಹಿತಿ ಎಸ್ಎಂಎಸ್ ಮೂಲಕ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+