ಬೈದಿರುವುದನ್ನ ಮಾತ್ರ ಲೆಕ್ಕಕ್ಕೆ ಇಟ್ಟಿದ್ದೀರಾ. ನೀವು ನಮಗೆ ಬೈದಿರುವುದು ನಾವು ಲೆಕ್ಕಕ್ಕೆ ಇಟ್ಟಿಲ್ಲ: ಮಲ್ಲಿಕಾರ್ಜುನ್‌ ಖರ್ಗೆ

ಶಿವಮೊಗ್ಗ,ಏಪ್ರಿಲ್30:‌ ಕಾಂಗ್ರೆಸ್‌ ಬೈದಿರುವುದನ್ನ ಮಾತ್ರ ಲೆಕ್ಕಕ್ಕೆ ಇಟ್ಟಿದ್ದೀರಾ. ನೀವು ನಮಗೆ ಬೈದಿರುವುದು ನಾವು ಲೆಕ್ಕಕ್ಕೆ ಇಟ್ಟಿಲ್ಲ. ಈ‌ ಕುರಿತು ಅವರ ಬಳಿಯೇ ಅಂಕಿ ಅಂಶಗಳು ಇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಹೇಳಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಮತಯಾಚಿಸಿ ಮಾತನಾಡಿದ ಅವರು, ಈ ಸರ್ಕಾರ ಭಷ್ಟಾಚಾರದಲ್ಲಿ ಮುಳುಗಿದೆ. ಇನ್ಸ್‌ಪೆಕ್ಟರ್ ನೇಮಕಾತಿ, ಎಂಜಿನಿಯರ್ ನೇಮಕಾತಿ, ದಿನಗೂಲಿ ನೌಕರರ ನೇಮಕಾತಿ, ನೇರ ನೇಮಕಾತಿ ಇರಬಹುದು ಅನೇಕ ಶಿಕ್ಷಕ ಹುದ್ದೆಗಳಲ್ಲಿ ಈ ಸರ್ಕಾರ ಮತ್ತು ಅಧಿಕಾರಿಗಳ ಲಂಚದ ಕಳಂಕ ಹತ್ತಿದ್ದು. ಜನರ ನಿದ್ದೆ ಗೆಡಿಸಿದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.
40% ಕಮಿಷನ್ ಎಲ್ಲರಿಗೂ ಗೊತ್ತಿದೆ. ಕಂಟ್ರಾಕ್ಟರ್ ಒಬ್ಬರು ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರಿಗೆ ಅರ್ಜಿ ಕೊಟ್ಟಿದ್ದಾರೆ ಅದು ಯಾವುದೇ ಪ್ರಯೋಜನವಾಗಿಲ್ಲ. ಮೋದಿಯವರು ಪ್ರತಿಬಾರಿ ನಾವು ಭಷ್ಟ್ರಾಚಾರ ಮಾಡುವುದಿಲ್ಲವೆಂದು ಬಾಷಣದಲ್ಲಿ ಹೇಳುತ್ತಾರೆ. ನಾನು ತಿನ್ನುವುದಿಲ್ಲ ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಆದರೆ, ನಿಮ್ಮ ಪಕ್ಕದಲ್ಲಿ ಇರುವವರು ತಿನ್ನುತ್ತಾರೆ ಅದು ನಿಮಗೆ ಗೊತ್ತಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Karnataka Election 2023 : Modis Contribution To Karnataka Is Nil says Mallikarjun Kharge

ಮೋದಿ ಸರ್ಕಾರದಲ್ಲಿ ಕರ್ನಾಟಕದಲ್ಲಿ ಯಾವ ದೊಡ್ಡ ಪ್ರಾಜೆಕ್ಟ್ ಆಗಿಲ್ಲ. ಈಗಾಗಲೇ ಅವರಿಗೆ ಸಾಕಷ್ಟು ಬಾರಿ ಉತ್ತರಕೊಟ್ಟಿದ್ದೇನೆ. ತಿರುಚಿ ಮಾತನಾಡುವುದು ಬಿಜೆಪಿಗೆ ಸರಿಯಲ್ಲ. ಮೋದಿಯವರು ಕಾಂಗ್ರೆಸ್ ನವರು 91 ಬೈಗುಳವನ್ನು ಬೈದಿದ್ದಾರೆ, ಹಾಗೂ ಅಂಬೇಡ್ಕರ್ ರವರಿಗೂ ಬೈದಿದ್ದಾರೆ ಎಂದು ಹೇಳಿದ್ದಾರೆ. ಹಿಂದುಳಿದ ವರ್ಗಗಳ ಮತಗಳ ಎಲ್ಲಿ ಹೆಚ್ಚಾಗಿವೆ ಅಲ್ಲಿ ಈ ರೀತಿ ಮಾತನಾಡುತ್ತಾರೆ. ಮೋದಿಯವರು ಸಾಕಷ್ಟು ಭಾರಿ ನಮ್ಮ‌ ನಾಯಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಬೈದಿದ್ದಾರೆ. ಜನರ ಅನುಕಂಪ ಪಡೆಯಲು ಮೋದಿಯವರು ಪದೇ ಪದೇ ಆ ರೀತಿ ಹೇಳುತ್ತಿದ್ದಾರೆ.

25 ನವೆಂಬರ್ 1949 ಅಂಬೇಡ್ಕರ್ ರವರಗೆ ಕಾಂಗ್ರೆಸ್ ಪಕ್ಷಕ್ಕೆ ಹೊಗಳಿದ್ದಾರೆ. ನಾನು ಗೆಲ್ಲದೆ ನನ್ನನ್ನು ಮೆಂಬರ್ ಮಾಡಿ , ಕರುಡು ಸಮಿತಿಗೆ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಪಕ್ಷ ನೇಮಕ ಜನರ ಸೇವೆಗೆ ಅವಕಾಶ ಮಾಡಿದೆ ಎಂದು ಹೊಗಳಿದ್ದರು. ಆ ಭಾಷಣವನ್ನು ಮೋದಿಯವರು ಕೇಳಿಸಿಕೊಂಡಿಲ್ಲ ಅನ್ಸುತ್ತೆ. ಸಂವಿಧಾನಕ್ಕೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ನೈಜವಾಗಿ ಅವಮಾನ ಮಾಡಿದ್ದೇ ಬಿಜೆಪಿಯವರು. ಕಾಂಗ್ರೆಸ್ ನವರು ಮಾಡಿಲ್ಲ ಮೋದಿಯವರು ಇದರ ಬಗ್ಗೆ ತಿಳಿದಿಲ್ಲವಾ? ಎಂದು ಮಲ್ಲಿಕಾರ್ಜುನ್‌ ಖರ್ಗೆ ಕುಟುಕಿದರು.

ಅವಮಾನ ಮಾಡಿರುವ ಬಿಜೆಪಿ ಆರ್ ಎಸ್ ಎಸ್ ಹಾಗೂ ಅದನ್ನು ಫಾಲೋ ಮಾಡಿರುವ ನಾಯಕರು ಅಂಬೇಡ್ಕರ್ ರವರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ ಎಂದು ಹೇಳುತ್ತಾರೆ. ಹಿಂದುಳಿದ ವರ್ಗಗಳ ಜನರ ಎಲ್ಲಿ ಹೆಚ್ಚಾಗಿರುತ್ತಾರೆ ಅಲ್ಲಿ ಹೇಳಿಕೆಗಳನ್ನ ತಿರುಚಿ ಹೇಳುತ್ತಿದ್ದಾರೆ. ಬೇರೆ ಜನರಿಗೆ ಹುಚ್ಚು ಮಾಡುವುದಕ್ಕೆ ಹೋಗಬೇಡಿ ಜನರು ನಿಮಗೆ ತಕ್ಕ ಉತ್ತರ ನೀಡುತ್ತಾರೆ.

Karnataka Election 2023 : Modis Contribution To Karnataka Is Nil says Mallikarjun Kharge

ಮೋದಿ ಸರ್ಕಾರ ಕೇಂದ್ರದಲ್ಲಿ 30 ಲಕ್ಷಗಳು ಹುದ್ದೆ ಖಾಲಿ ಇವೆ ಅದನ್ನು ತುಂಬುವ ಕೆಲಸ ಮಾಡಿಲ್ಲ. ಇಂತಹ ಸರ್ಕಾರ ರಾಜ್ಯದಲ್ಲಿ ಬೇಕಾ. ಜನರು ತೀರ್ಮಾನ ಮಾಡಿ. ನಮ್ಮ ಪ್ರಣಾಳಿಕೆ ಯಲ್ಲಿ 5 ಅಂಶಗಳನ್ನು ವಾಗ್ದಾನ ಮಾಡಿದ್ದೇವೆ.

ಕರ್ನಾಟಕಕ್ಕೆ ಮೋದಿ ಕೊಡುಗೆ ಏನು? ಸಾರ್ವಜನಿಕ ಉದ್ಯಮ ಸ್ಥಾಪಿಸಿದ್ದಾರ? ಕನ್ನಡ ನಾಡಿಗೆ ಮೋದಿ ಕೊಡುಗೆ ಶೂನ್ಯ. ಆಹಾರ ಭಧ್ರತಾ ಕಾನೂನು ತಂದದ್ದು ಕಾಂಗ್ರೆಸ್‌ ಸರ್ಕಾರ. ಇಂದು ಎಲ್ಲರಿಗೂ ಆಹಾರ ಭದ್ರತಾ ಖಾತ್ರಿಯಾಗಿದೆ. ನಾವು ನುಡಿದಂತೆ ನಡೆದಿದ್ದೇವೆ, ನಾವು ಸುಳ್ಳು ಹೇಳಲ್ಲ. 5 ಗ್ಯಾರಂಟಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವನಿಧಿ ಹಾಗೆಯೇ ಕಾಂಗ್ರೆಸ್ ಪಕ್ಷ ಇದೀಗ ಐದನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ ಅದರಲ್ಲಿ ಸಾರ್ವಜನಿಕ ಬಸ್ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುತ್ತೇವೆ. ಅಧಿಕಾರದಲ್ಲಿದ್ದಾಗ ಕೇಂದ್ರ ಮತ್ತು ರಾಜ್ಯದಲ್ಲೂ ನಾವು ನುಡಿದಂತೆ ನಡೆದಿದ್ದೇವೆ. ಆದರೆ ಬಿಜೆಪಿ ಅವರು ಹೇಳೊದೇ ಒಂದು ಮಾಡೋದೆ ಇನ್ನೊಂದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+