ಕರ್ನಾಟಕ ಚುನಾವಣೆ 2023: ಮತದಾನ ದಿನ ಮೇ 10ಕ್ಕೆ ಸಾರ್ವತ್ರಿಕ ರಜೆ ಘೋಷಣೆಗೆ ಚುನಾವಣೆ ಆಯೋಗ ಸೂಚನೆ
ಬೆಂಗಳೂರು, ಮಾರ್ಚ್ 31: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ.ಅಂದು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ರಜೆ ಸಿಗಲಿದೆ. ನೌಕರರಿಗೆ ರಜೆ ನೀಡಬೇಕು ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ನಿರ್ದೇಶನ ನೀಡಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಭಾರತೀಯ ಚುನಾವಣಾ ಆಯೋಗವು (ECI) ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ.

ಈ ಮತದಾನ ನಡೆಯುವ ದಿನವಾದ ಮೇ 10ರಂದು ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ರಜೆ ನೀಡುವಂತೆ ಭಾರತೀಯ ಚುನಾವಣೆ ಆಯೋಗ ಸೂಚಿಸಿದೆ. ಅಲ್ಲದೇ ಅಂದು ಈ ಎರಡು ವಲಯಗಳ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಚುನಾವಣೆ ಆಯೋಗ ಹೊರಡಿಸಿರುವ ಪತ್ರದಲ್ಲಿ, ಉದ್ಯೋಗಿಗಳಿಗೆ ರಜೆ ನೀಡುವ ನಿಟ್ಟಿನಲ್ಲಿ 'ಪ್ರಜಾಪ್ರತಿನಿಧಿ ಕಾಯಿದೆ 1951 ಸೆಕ್ಷನ್ 135B' ಅನ್ನು ಉಲ್ಲೇಖಿಸಿದೆ. ಇದರಡಿ ಉದ್ಯೋಗಿಗಳು ಮತದಾನದಿನದಂದು ರಜಗೆ ಅರ್ಹರಾಗಿರುತ್ತಾರೆ. ಕಾಯಿದೆ ನಿಯಮದ ಪ್ರಕಾರ ಮತದಾನದ ದಿನ ಮೇ 10ರಂದು ಖಾಸಗಿ ಮತ್ತು ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆ ನೀಡಬೇಕೆಂದು ಆಯೋಗ ತಿಳಿಸಿದೆ.
ಸಾರ್ವತ್ರಿಕ ರಜೆ ಘೋಷಿಸಲು ನಿರ್ದೇಶನ
ಕೇಂದ್ರ ಹಾಗೂ ರಾಜ್ಯದ ಎಲ್ಲಾ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸ್ವಾಮ್ಯಕ್ಕೆ ಒಳಪಟ್ಟ ಸಂಸ್ಥೆಗಳಿಗೆ, ಸರ್ಕಾರಿ ಹಾಗೂ ಖಾಸಗಿ, ಅನುದಾನಿತ, ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ, ಔಧ್ಯಮಿಕ ಸಂಸ್ಥೆಗಳ ಹಾಗೂ ಇನ್ನಿತರ ಸಂಸ್ಥೆಗಳಿಗೆ ಮೇ.10ರಂದು ಸಾರ್ವತ್ರಿಕ ರಜೆ ಘೋಷಿಸುವಂತೆ ನಿರ್ದೇಶಿಸಿದೆ.

ಕಾಯಿದೆಯಡಿ ತಿಳಿಸಲಾದ ನಿಬಂಧನೆಗಳನ್ನು ಒಂದು ವೇಳೆ ಉಲ್ಲಂಘಿಸಿದರೆ ಅಂದರೆ ಮತದಾನದ ದಿನ ಉದ್ಯೋಗಿಗಳಿಗೆ ರಜೆ ನೀಡದ ಹೋದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಆಯೋಗ ಹೇಳಿದೆ. ಈ ಮೂಲಕ ಎಲ್ಲ ಮತದಾರರನ್ನು ಅಂದು ಸಾರ್ವತ್ರಿಕ ಮತದಾನದಲ್ಲಿ ಪಾಳ್ಗೊಳ್ಳುವಂತೆ ಉತ್ತೇಜಿಸಬೇಕು ಎಂದು ಆಯೋಗ ಕೋರಿದೆ.
ಮೇ 10ಕ್ಕೆ ಮತದಾನ 13ರಂದು ಮತ ಎಣಿಕೆ
ಭಾರತೀಯ ಚುನಾವಣೆ ಆಯೋಗವು ಮಾರ್ಚ್ 29ರಂದು ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ದಿನಾಂ ನಿಗದಿಯಾದ ದಿನದಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಮೇ 10 ಕರ್ನಾಟಕದ 224 ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ.
ಈ ಸಂಬಂಧ ಏಪ್ರಿಲ್ 13ರಂದು ಚುನಾವಣೆ ಆಯೋಗದಿಂದ ಅಧಿಸೂಚನೆಯೊಂದು ಪ್ರಕಟಗೊಳ್ಳಲಿದೆ. ನಂತರ ಅಲ್ಲಿಂದ ಎಲ್ಲ ಪಕ್ಷಗಳು ನಾಮಪತ್ರ ಸಲ್ಲಿಕೆಗೆ ಅವಕಾಶ ಇರುತ್ತದೆ. ಏಪ್ರೀಲ್ 20ರ ತನಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ಸಲ್ಲಿಕೆಯಾದ ನಾಮಪತ್ರಗಳನ್ನು ಚುನಾವಣಾಧಿಕಾಗಳು ಏಪ್ರೀಲ್ 21 ರಂದು ಪರಿಶೀಲಿಸುತ್ತಾರೆ. ಅಭ್ಯರ್ಥಿಗಳು ಒಂದು ವೇಳೆ ನಾಮಪತ್ರ ಹಿಂಪಡೆಯಬೇಕೆಂದಿದ್ದರೆ ಅದಕ್ಕೆ ಏಪ್ರೀಲ್ 24 ಕೊನೆಯ ದಿನವಾಗಿದೆ. ಮತದಾನ ಮೇ 10ರಂದು ಜರುಗಿದರೆ, ಮತ ಎಣಿಕೆ ಪ್ರಕ್ರಿಯೂ ಮೇ 13ರಂದು ಬೆಳಗ್ಗೆ ಆರಂಭವಾಗಲಿದೆ. ಈ ಸಂಬಂಧ ಈಗಾಗಲೇ ಚುನಾವಣಾಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳುತ್ತಿವೆ.












Click it and Unblock the Notifications