Congress Candidate Final list: ಕೊನೆಯ ಐದು ಕ್ಷೇತ್ರಗಳ ಟಿಕೆಟ್ ಘೋಷಣೆ, ಯಾರು ಎಲ್ಲಿಂದ ಸ್ಪರ್ಧಿಸುತ್ತಾರೆ
ಬೆಂಗಳೂರು, ಏಪ್ರಿಲ್ 20: ಕರ್ನಾಟಕದ ಎಲ್ಲ ವಿಧಾನಸಭಾ ಕ್ಷೇತ್ರಗಳ ಪೈಕಿ ಬಾಕಿ ಉಳಿಸಿಕೊಂಡಿದ್ದ ಐದು ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಅನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಈ ಮೂಲಕ ಕಾಂಗ್ರೆಸ್ ಒಟ್ಟು 6 ಪಟ್ಟಿ ಬಿಡುಗಡೆ ಮಾಡಿದಂತಾಗಿದೆ. ಬುಧವಾರ ಸಂಜೆ ಐದನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು.

ಕಾಂಗ್ರೆಸ್ 6ನೇ ಪಟ್ಟಿ:
| ಕ್ರಮ ಸಂಖ್ಯೆ | ಕ್ಷೇತ್ರ | ಅಭ್ಯರ್ಥಿಗಳು |
| 01 | ರಾಯಚೂರು | ಮೊಹಮ್ಮದ್ ಸಲಾಮ್ |
| 02 | ಶಿಡ್ಲಘಟ್ಟ | ಬಿವಿ.ರಾಜೀವ್ ಗೌಡ |
| 03 | ಸಿವಿ ರಾಮನ್ ನಗರ | ಎಸ್. ಆನಂದ್ ಕುಮಾರ್ |
| 04 | ಅರಕಲಗೂಡು | ಎಚ್.ಪಿ.ಶ್ರೀಧರ್ ಗೌಡ |
| 05 | ಮಂಗಳೂರು ನಗರ ಉತ್ತರ | ಇನಾಯತ್ ಅಲಿ |
ಕೊನೆಯ ಪಟ್ಟಿ ಮೂಲಕ ಒಟ್ಟು 224 ಕ್ಷೇತ್ರಗಳಿಗೆ ಕಾಂಗ್ರೆಸ್ ಹುರಿಯಾಳುಗಳನ್ನು
ಅಂತಿಮಗೊಳಿಸಿದೆ.ಇಂದು ನಾಮಪತ್ರ ಸ್ಲಲಿಕೆ
ಈ ಐದನೇ ಪಟ್ಟಿಯಲ್ಲಿ ಮುಳಬಾಗಿಲು ಕ್ಷೇತ್ರಕ್ಕೆ ಡಾ.ಬಿ.ಸಿ ಮುದ್ದು ಗಂಗಾಧರ್, ಕೆ.ಆರ್.ಪುರಂ ಕ್ಷೇತಕ್ರದಿಂದ ಡಿ.ಕೆ ಮೋಹನ್ ಬಾಬು ಕಣಕ್ಕಿಳಿದರೆ, ಪುಲಿಕೇಶಿನಗರ ಕ್ಷೇತ್ರದಲ್ಲಿ ಎ.ಸಿ.ಶ್ರೀನಿವಾಸ್ ಅವರಿಗೆ ಟಿಕೆಟ್ ಘೋಷಣೆ ಆಗಿದೆ.
ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರಿಂದ ಒಂದು ದಿನ ಮುನ್ನವೇ (ಬುಧವಾರ) ಕಾಂಗ್ರೆಸ್ ಟಿಕೆಟ್ ಘೋಷಣೆಯ ಎಲ್ಲವನ್ನು ಅಂತಿಮಗೊಳಿಸಿದೆ.
ಆಯಾ ಕ್ಷೇತ್ರಗಳಿಂದ ಸ್ಪರ್ಧಿಸುವವರು ಇಂದು ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ. ಮೊದಲ ನಿಶ್ಚಯಮಾಡಿದ್ದರಿಂದ ಅಭ್ಯರ್ಥಿಗಳಿಗೆ ಬುಧವಾರವೇ ಬಿ.ಫಾರ್ಮ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
124 ಕ್ಷೇತ್ರಗಳಿಗೆ ಮೊದಲ ಪಟ್ಟಿ ಘೋಷಿಸಿದ್ದ ಭಾರತಿಯ ಕಾಂಗ್ರೆಸ್, ಎರಡನೇ ಪಟ್ಟಿಯಲ್ಲಿ 42 ಮಂದಿಗೆ ಟಿಕೆಟ್ ನೀಡಿದೆ. ಮೂರನೇ ಪಟ್ಟಿ ಬಿಡುಗಡೆ ಮಾಡಿ ಅದರಲ್ಲಿ 43 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರೆ, ಕಳೆದ ಮಂಗಳವಾರವಷ್ಟೇ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು, ಬುಧವಾರ ಸಂಜೆ ಮೂರು ಕ್ಷೇತ್ರ, ರಾತ್ರಿ ಐದು ಕ್ಷೇತ್ರಗಳ ಟಕೆಟ್ ಅನ್ನು ಅಂತಿಮಗೊಳಿಸಿದೆ.












Click it and Unblock the Notifications