ಬಿಜೆಪಿ ವರುಣಾ ಒಂದೇ ಅಲ್ಲ, 224 ಕ್ಷೇತ್ರಗಳಲ್ಲೂ ಗೆಲ್ಲಲು ಅಸಾಧ್ಯವಲ್ಲ:ಬಿ.ವೈ.ವಿಜಯೇಂದ್ರ
ಮೈಸೂರು, ಮಾರ್ಚ್31: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕ್ಷೇತ್ರಗಳಾದ ಕೆ.ಆರ್. ಪೇಟೆ, ಶಿರಾ ಕ್ಷೇತ್ರಗಳಲ್ಲಿ ಕಮಲ ಅರಳಿಸಿದಂತೆ ಈ ಬಾರಿಯ ಚುನಾವಣೆಯಲ್ಲಿಯೂ ವರುಣಾದಲ್ಲಿ ಕಮಲ ಅರಳಿಸಲು ಬಿಜೆಪಿ ಚಿಂತನೆ ನಡೆಸಿದ್ದು, ಅದರಂತೆ ವರುಣಾ ಕ್ಷೇತ್ರದಲ್ಲಿಯೂ ಬಿ.ವೈ ವಿಜಯೇಂದ್ರ ಚುನಾವಣಾ ಪ್ರಚಾರವನ್ನ ನಡೆಸುತ್ತಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ವರುಣಾ ಒಂದೇ ಅಲ್ಲ, 224 ಕ್ಷೇತ್ರಗಳಲ್ಲೂ ಗೆಲ್ಲಲು ಸಶಕ್ತವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ವರುಣಾ ಕ್ಷೇತ್ರದಲ್ಲಿ ಬಿಜೆಪಿಯ ದೊಡ್ಡ ಕಾರ್ಯಕರ್ತರ ಪಡೆಯೇ ಇದೆ.ಅಲ್ಲಿ ಬಿಜೆಪಿ ಗೆಲ್ಲಲು ಎಲ್ಲಾ ಅವಕಾಶಗಳೂ ಇವೆ. ವರುಣಾ ಸಿದ್ದರಾಮಯ್ಯ ಗೆ ಸುಲಭದ ತುತ್ತು ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಬಗ್ಗೆ ನಾನು ಪ್ರತಿಕ್ರಿಸಲು ಹೋಗಲ್ಲ. ಆದರೆ ರಾಜ್ಯದ ಯಾವುದೇ ಕ್ಷೇತ್ರ ಬಿಜೆಪಿ ಅಸಾಧ್ಯವಲ್ಲ. ಮಂಡ್ಯ ಕೆ.ಆರ್. ಪೇಟೆಯಲ್ಲಿ ಬಿಜೆಪಿ ಗೆಲ್ಲುತ್ತೆ ಅಂತಾ ನಾವೇ ನಿರೀಕ್ಷೆ ಮಾಡಿರಲಿಲ್ಲ.ಆದರೂ ಗೆಲ್ಲಲಿಲ್ಲವೇ, ಬೈ ಎಲೆಕ್ಷನ್ ನಲ್ಲಿ ಶಿರಾದಲ್ಲಿ ಗೆಲ್ಲಲಿಲ್ಲವೇ ಶಿರಾದಲ್ಲಿ ಈ ಹಿಂದೆ ಬಿಜೆಪಿಗೆ ಠೇವಣಿ ಕೂಡ ಸಿಗುತ್ತಿರಲಿಲ್ಲ. ಈಗ ನಾವೇ ಗೆಲುವು ಸಾಧಿಸಿದ್ದೇವೆ ಎಂದು ಹೇಳಿದರು.
ವರುಣಾ ಕ್ಷೇತ್ರ ಸ್ಪರ್ಧೆ ಮಾಡುವ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ವರುಣಾ ಕ್ಷೇತ್ರದಲ್ಲಿ ನಿಲ್ಲಬೇಕೆ ಅಥವಾ ಬೇಡವೇ ಅದನ್ನು ಪಕ್ಷದ ಹಿರಿಯ ನಾಯಕರು ತೀರ್ಮಾನ ಮಾಡ್ತಾರೆ. ನನಗೆ ಮೊದಲು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಸಿಗಲಿ. ಶಿಕಾರಿಪುರ ಅಥವಾ ವರುಣಾ ಎಲ್ಲಿ ನಿಲ್ಲಬೇಕೆಂಬುದನ್ನು ನಾನು ವೈಯಕ್ತಿಕವಾಗಿ ನಿರ್ಧರಿಸಲು ಆಗಲ್ಲ. ಮೊದಲು ರಾಜ್ಯ ಮಟ್ಟದಲ್ಲಿ ತೀರ್ಮಾಮವಾಗಿ, ನಂತರ ಕೇಂದ್ರ ನಾಯಕರಿಗೂ ಮನವರಿಕೆ ಮಾಡಬೇಕಿದೆ ಎಂದರು.
ವರುಣಾದಲ್ಲಿ ನಿಲ್ಲಬೇಕೆಂಬ ಕಾರ್ಯ ಕರ್ತರ ಒತ್ತಡ ವಿಚಾರವಾಗಿ ಮಾತನಾಡಿದ ವಿಜಯೇಂದ್ರ, ಎಲ್ಲಾ ಆ ಬೆಳವಣಿಗೆಗಳ ಬಗ್ಗೆ ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ. ಎಲ್ಲದರ ಬಗ್ಗೆಯೂ ಮಾಹಿತಿ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ವರುಣದಿಂದ ಸ್ಪರ್ಧಿಸುವ ವಿಚಾರದಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಏನೂ ಇಲ್ಲ. ನನ್ನ ಮನಸ್ಸಿನಲ್ಲಿ ಏನೂ ಇಲ್ಲ. ಯಡಿಯೂರಪ್ಪ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಯಡಿಯೂರಪ್ಪ, ರಾಘವೇಂದ್ರ, ಹಾಗೂ ವಿಜಯೇಂದ್ರ ತೀರ್ಮಾನ ಮಾಡಲ್ಲ. ಹೈಕಮಾಂಡ್ ನಾಯಕರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ಇನ್ನೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಮ್ಮ ತಂದೆಯವರ ಕ್ಷೇತ್ರ. ಅಲ್ಲಿಂದಲೇ ನಾನು ಸ್ಪರ್ಧಿಸಬೇಕೆಂದು ತಂದೆಯವರು ಇಚ್ಚೆ. ಆ ಇಚ್ಚೆಯಂತೆ ಒಂದು ಸುತ್ತು ಪ್ರಚಾರ ಮುಗಿಸಿದ್ದೇನೆ. ಏಪ್ರಿಲ್ 3 ರ ನಂತರ ಮತ್ರೆ ಪ್ರಚಾರ ನಡೆಸುತ್ತೇನೆ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುತ್ತೋ, ಇಲ್ಲವೊ ಗೊತ್ತಿಲ್ಲ. ಅಂತಹದರಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡ್ತೀನಿ ಅನ್ನೊದು ಈಗ ಅಪ್ರಸ್ತುತ ವಿಚಾರ ಅಂತ ಹೇಳಿದರು.












Click it and Unblock the Notifications