ಚುನಾವಣೆ ಎಫೆಕ್ಟ್: ಎಣ್ಣೆಗೆ ಡಿಮ್ಯಾಂಡೋ ಡಿಮ್ಯಾಂಡ್: ಮದ್ಯ ಸೇವನೆಗೆ ಮುಗಿ ಬೀಳುತ್ತಿರುವ ಜನ

ಬೆಂಗಳೂರು, ಮೇ 6: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿರುವ ರಾಜಕೀಯ ಪಕ್ಷಗಳ ಭರ್ಜರಿ ಚುನಾವಣಾ ಪ್ರಚಾರವನ್ನ ನಡೆಸುತ್ತಿದ್ರೆ. ಇತ್ತ ರಾಜ್ಯದಲ್ಲಿ ಮದ್ಯ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

ರಾಜ್ಯಾದ್ಯಂತ ಚುನಾವಣಾ ಭರಾಟೆಯ ಜೊತೆಗೆ ಎಣ್ಣೆಗೂ ಫುಲ್‌ ಡಿಮ್ಯಾಂಡ್‌ ಸೃಷ್ಟಿಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದರೆ ಎಣ್ಣೆ ಮಾರಾಟ ಎರಡೂವರೆ ಪಟ್ಟಿಗೂ ಅಧಿಕ ಹೆಚ್ಚಳವಾಗಿದೆ. 2022ರ ಮೇ 1 ರಿಂದ 4 ರವರೆಗೆ 2.37 ಲಕ್ಷ ಬಾಕ್ಸ್‌ (ಪ್ರತಿ ಬಾಕ್ಸ್‌ನಲ್ಲಿ 7.8 ಲೀಟರ್‌) ಬಿಯರ್‌ ಮಾರಾಟವಾಗಿದ್ದರೆ, ಪ್ರಸಕ್ತ ವರ್ಷ ಇದೇ ಅವಧಿಯಲ್ಲಿ ಬರೋಬ್ಬರಿ 5.44 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗಿದೆ.

karnataka Election 2023: 2.5 Times The Demand For Alcohol In Karnataka

ಇನ್ನೂ ಈ ವರ್ಷ ಎರಡೂವರೆಪಟ್ಟು ಬಿಯರ್‌ ಹೆಚ್ಚಾಗಿದ್ದರೆ, ಬಿಯರ್‌ ಹೊರತುಪಡಿಸಿ ಇನ್ನುಳಿದ ವಿಸ್ಕಿ, ಬ್ರಾಂಡಿ, ರಮ್‌ ಮತ್ತಿತರ ಮದ್ಯ ಮಾರಾಟವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಚುನಾವಣಾ ಎಫೆಕ್ಟ್‌ ನಿಂದಾಗಿ ರಾಜ್ಯಾದ್ಯಂತ ಎಣ್ಣೆಗೆ ಡಿಮ್ಯಾಂಡ್‌ ಕ್ರಿಯೆಟ್‌ ಆಗಿದ್ದು, ಎಣ್ಣೆಗಾಗಿ ಜನರು ಮುಗಿಬಿಳುತ್ತಿದ್ದಾರೆ.

2022 ರಲ್ಲಿನ ಮದ್ಯ ಮಾರಾಟಕ್ಕೂ ಈ ವರ್ಷದ ಚುನಾವಣಾ ವೇಳೆಯ ಮದ್ಯ ಮಾರಾಟಕ್ಕೂ ಸಾಕಷ್ಟು ಪ್ರಮಾಣನದಲ್ಲಿ ಹೆಚ್ಚಾಳವಾಗಿದ್ದು, ಕಳೆದ ವರ್ಷ ಮೇ ಮೊದಲ ವಾರ ನಡೆದಿರುವ ವಹಿವಾಟಿಗೂ ಪ್ರಸಕ್ತ ನಡೆದಿರುವ ಮಾರಾಟವನ್ನು ಒಟ್ಟಾರೆ ಲೀಟರ್‌ ಲೆಕ್ಕದಲ್ಲಿ ಹೇಳುವುದಾದರೆ, ಬಿಯರ್‌ 18.48 ಲಕ್ಷ ಲೀಟರ್‌ಗೆ ಬದಲಾಗಿ 42.43 ಲಕ್ಷ ಲೀಟರ್‌ ಮಾರಾಟವಾಗಿದೆ. ವಿಸ್ಕಿ ಮತ್ತಿತರ ಮದ್ಯ 2022ರ ಮೇ ಮೊದಲ ವಾರದಲ್ಲಿ 32.83 ಲಕ್ಷ ಲೀಟರ್‌ ಮಾರಾಟವಾಗಿತ್ತು. ಈಗ 77.58 ಲಕ್ಷ ಲೀಟರ್‌ ಹೆಚ್ಚಳವಾಗಿದೆ.

karnataka Election 2023: 2.5 Times The Demand For Alcohol In Karnataka

ಇನ್ನೂ ಚುನಾವಣಾ ಪ್ರಚಾರದ ಭರಾಟೆ ಒಂದು ಕಡೆ ಹೆಚ್ಚಾಗಿದ್ರೆ, ಚುನಾವಣಾ ಪ್ರಚಾರದ ವೇಳೆ ಬರುವಂತಹ ಪ್ರಚಾರಕರಿಗೆ ಎಣ್ಣೆಯನ್ನ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ಚುನಾವಣಾ ಕಾವು ಹೆಚ್ಚಾದಂತೆ ಭಾರಿ ಪ್ರಮಾಣದಲ್ಲಿ ಮದ್ಯ ಮಾರಾಟ ಆಗುತ್ತಿರುವುದರಿಂದ ಹೋಬಳಿ, ತಾಲೂಕು ಮಟ್ಟದ ಬಾರ್‌ ಅಂಡ್‌ ರೆಸ್ಟೋರೆಂಟ್‌, ವೈನ್‌ ಸ್ಟೋರ್‌ಗಳಲ್ಲಿ ಸ್ಟಾಕ್‌ ಇಲ್ಲದೆ ಮಾಲೀಕರು ಪರದಾಡುವಂತಾಗಿದೆ.

ಇನ್ನೂ ಚುನಾವಣೆಗೆ ಪ್ರಚಾರಕ್ಕೆ ಬರುವ ಗ್ರಾಮೀಣ ಪ್ರದೇಶದ ಜನರಲ್ಲೂ ಹಣದ ಹರಿವು ಹೆಚ್ಚಾಗಿರುವುದರಿಂದ ಮದ್ಯಪ್ರಿಯರು ಎಣ್ಣೆ ಅಂಗಡಿಗಳತ್ತ ಮುಗಿಬಿಳುತ್ತಿದ್ದು, ದಿನವೂ ಸ್ಟಾಕ್‌ ಬರುತ್ತಿದ್ದಂತೆ ಕಡಿಮೆ ಬೆಲೆಯ ಮದ್ಯವು ಬಂದಷ್ಟೇ ವೇಗವಾಗಿ ಮಾರಾಟವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ರಾಜ್ಯ ರಾಜಕಾರಣದಲ್ಲಿ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ಹೆಚ್ಚಾಗಿತ್ತು. ರಾಜಕೀಯ ಪಕ್ಷಗಳ ಕೆಲ ಅಭ್ಯರ್ಥಿಗಳು ಚುನಾವಣೆಗೆ ಭಾರೀ ಪ್ರಮಾಣದಲ್ಲಿ ಹಣ ವೆಚ್ಚ ಮಾಡುತ್ತಿದ್ದು, ಇದು ಪರೋಕ್ಷವಾಗಿ ಮದ್ಯ ಮಾರಾಟ ಹೆಚ್ಚಾಗಲು ಕಾರಣವಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಕಳೆದ ತಿಂಗಳು ಸಹ ಬಿಯರ್‌ ಮಾರಾಟದಲ್ಲಿ ಗಣನೀಯವಾಗಿ ಏರಿಕೆಯಾಗಿತ್ತು. 2022ರ ಏಪ್ರಿಲ್‌ನಲ್ಲಿ 36.84 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗಿದ್ದರೆ, ಪ್ರಸಕ್ತ ಏಪ್ರಿಲ್‌ನಲ್ಲಿ ಬರೋಬ್ಬರಿ 38.58 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗಿ ಶೇ.4.72ರಷ್ಟುಮಾಸಿಕ ಬೆಳವಣಿಗೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+