ಎಚ್ಕೆ ಪಾಟೀಲರ ಲೆಕ್ಕದಲ್ಲಿ ಬರಗಾಲ ಅಂದ್ರೆ ಯಾವುದು?

Subscribe to Oneindia Kannada

ಕಲಬುರಗಿ, ಏಪ್ರಿಲ್, 26: ಕರ್ನಾಟಕದ ಜನ ಬರಕ್ಕೆ ಸಿಕ್ಕಿ ನರಳುತ್ತಿದ್ದಾರೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸಿಗದೇ ಉತ್ತರ ಕರ್ನಾಟಕದ ಜನರು ಗುಳೆ ಹೊರಟಿದ್ದಾರೆ. ಆದರೆ ನಮ್ಮ ಸಚಿವರಿಗೆ ಮಾತ್ರ ಯಾಕೋ ಬರ ಪರಿಸ್ಥಿತಿ ಕಣ್ಣಿಗೆ ಬಿದ್ದಿಲ್ಲ.

ರಾಜ್ಯಲ್ಲಿ ಇರುವುದು ಬಿರು ಬೇಸಿಗೆ ಮಾತ್ರ, ಬರಗಾಲವಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್. ಕೆ. ಪಾಟೀಲ್ ವಿವಾದಾತ್ಮಕ ಹೇಳಿಕೆಯನ್ನು ಮಂಗಳವಾರ ನೀಡಿದ್ದಾರೆ. ಯಾವ ಅರ್ತದಲ್ಲಿ ಹೀಗೆ ಹೇಳಿದ್ದಾರೋ ಅವರನ್ನೇ ಕೇಳಬೇಕು.['ಬರ'ಗೆಟ್ಟ ರಾಯಚೂರು ಜನತೆಗೆ ನೀರು ಮಾಫಿಯಾ ಬರೆ]

hk patil

ಸದ್ಯ ರಾಜ್ಯದಲ್ಲಿ ಬರ ಪರಿಸ್ಥಿತಿ ಇಲ್ಲ. ಕಠಿಣ ಬೇಸಿಗೆ ಇರುವುದಿರಂದ ನೀರಿನ ಅಭಾವ ಇದೆ. ಬಿಸಿಲಿನ ತಾಪಕ್ಕೆ ಕೊಳವೆ ಬಾವಿಯಲ್ಲಿನ ನೀರು ಕಡಿಮೆಯಾಗುತ್ತಿದೆ. ಪ್ರತಿ ದಿನ 1ರಿಂದ 2 ಸೆಮೀ ನೀರು ಕಡಿಮೆಯಾಗುತ್ತಿದೆ. ದುರ್ದೈವದಿಂದ ನದಿ ಮತ್ತು ಡ್ಯಾಂಗಳಲ್ಲಿ ನೀರು ಖಾಲಿಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.['ಪ್ರತಿ ಕುಟುಂಬಕ್ಕೆ ಕನಿಷ್ಠ 12 ಬಿಂದಿಗೆ ನೀರು ನೀಡಿ']

ಪಾಟೀಲರ ಈ ಹೇಳಿಕೆ ವಿವಾದ ಹುಟ್ಟು ಹಾಕುವುದರಲ್ಲಿ ಅನುಮಾನವಿಲ್ಲ. ಕುಡಿಯುವ ನೀರಿಲ್ಲದೇ ಕಂಗಾಲಾಗಿದ್ದ ಗದಗಕ್ಕೆ ಹಿಂದೊಮ್ಮೆ ನೀರು ನೀಡಿ ಮಾದರಿಯಾಗಿದ್ದ ಪಾಟೀಲರು ಯಾವ ಕಾರಣಕ್ಕೆ ಇಂಥ ಹೇಳಿಕೆ ನೀಡಿದರೋ ಗೊತ್ತಿಲ್ಲ. ಜೂಜಾಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಅಶೋಕ್ ಖೇಣಿ ಜನರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kalaburagi: Minister for Rural Development and Panchayat Raj H.K. Patil gave a controversial statement towards drought. According to minister, Now Karnartaka facing only hot summer not drinking water problem, drought.
Please Wait while comments are loading...