ನಮಗೇ ನೀರಿಲ್ಲ, ಇನ್ನು ತಮಿಳ್ನಾಡಿಗೆ ಎಲ್ಲಿಂದ ಬಿಡೋಣ?

Written By:
Subscribe to Oneindia Kannada

ಬೆಂಗಳೂರು, ಆಗಸ್ಟ್, 12: ನಮಗೇ ನೀರಿಲ್ಲ, ಇನ್ನು ತಮಿಳುನಾಡಿಗೆ ಬೇರೆ ಬಿಡಬೇಕಾ? ಇದು ಕಾವೇರಿ ಕೊಳ್ಳದ ಸಾಮಾನ್ಯ ರೈತನೊಬ್ಬನ ಪ್ರಶ್ನೆ. ನ್ಯಾಯಾಧಿಕರಣ ಹೇಳಿದಷ್ಟು ಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಡಲು ಸಾದ್ಯವಿಲ್ಲ ಎಂದು ಹೇಳಿರುವ ರಾಜ್ಯ ಸರ್ಕಾರ ಈ ಸಂಬಂಧ ಪ್ರಧಾನಿಗೂ ಪತ್ರ ಬರೆಯುತ್ತೇನೆ ಎಂದು ಹೇಳಿ ಕೊಂಚ ಮುನ್ನಚ್ಚರಿಕೆ ಕ್ರಮ ತೆಗೆದುಕೊಂಡಿದೆ.

ಉತ್ತರ ಕರ್ನಾಟಕದಲ್ಲಿ ಅಣೆಕಟ್ಟು ನಿರ್ಮಾಣ ಮಾಡಲು ಗೋವಾ, ಮಹಾರಾಷ್ಟ್ರ ಕ್ಯಾತೆ, ನೇತ್ರವಾತಿ ನದಿ ಸಂಬಂಧ ರಾಝ್ಯದ ಜಿಲ್ಲೆಗಳ ನಡುವೆ ಗೊಂದಲ, ಕೊರತೆ ಕಾವೇರಿಯಲ್ಲಿ ನೀರಿಗಾಗಿ ಕರ್ನಾಟಕ-ತಮಿಳುನಾಡು ಹಗ್ಗ ಜಗ್ಗಾಟ.[ಮತ್ತೆ ಶುರುವಾಯಿತು ಕಾವೇರಿ ನೀರು ಹಂಚಿಕೆ ಕಗ್ಗಂಟು]

ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕಬಿನಿ ಮತ್ತು ಕೆಆರ್ ಎಸ್ ಇನ್ನು ಭರ್ತಿಯಾಗಿಲ್ಲ. ಮುಖ್ಯವಾಗಿ ಕೆಆರ್ ಎಸ್ ಅಣೆಕಟ್ಟಿಗೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ.

ಕೆಆರ್ ಎಸ್ ನಲ್ಲಿ ಎಷ್ಟು ನೀರಿದೆ?

ಕೆಆರ್ ಎಸ್ ನಲ್ಲಿ ಎಷ್ಟು ನೀರಿದೆ?

124.80 ಅಡಿಯ ಕೆ ಆರ್ ಎಸ್ ನಲ್ಲಿ ಸದ್ಯ 97.70 ಅಡಿ ನೀರಿದೆ. ಕಳೆದ ವರ್ಷ ಇದೇ ವೇಳೆಗೆ 107 ಅಡಿ ನೀರಿತ್ತು. ಒಟ್ಟು 49 ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ 21 ಟಿಎಂಸಿ ನೀರು ಮಾತ್ರ ಇದೆ.

 ಕಬಿನಿ ಕತೆ ಏನು?

ಕಬಿನಿ ಕತೆ ಏನು?

2284 ಅಡಿಯ ಕಬಿನಿಯಲ್ಲಿ 2275 ಅಡಿ ನಿರಿದೆ. ಇದೇ ವೇಳೆಗೆ ಕಳೆದ ವರ್ಷ 2281 ಅಡಿ ನೀರಿತ್ತು. 19 ಟಿಎಂಸಿ ಸಾಮರ್ಥ್ಯದ ಅಣೆಕಟ್ಟಿನಲ್ಲಿ 14.64 ಟಿಎಂಸಿ ನೀರಿದೆ.

ನೀರು ಬಿಡಲು ಸಾಧ್ಯವಿಲ್ಲ

ನೀರು ಬಿಡಲು ಸಾಧ್ಯವಿಲ್ಲ

ನಮ್ಮ ರಾಜ್ಯದ ರೈತರಿಗೆ ನೀರಾವರಿಗೆ ನೀರು ಒದಗಿಸಲು ಸಾಧ್ಯವಿಲ್ಲ. ಇನ್ನು ತಮಿಳುನಾಡಿಗೆ ಹೇಗೆ ನೀರು ಬೀಡಬೇಕು ಎಂದು ಪ್ರಶ್ನೆ ಮಾಡಿರುವ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ.

ತಮಿಳುನಾಡು ಕೇಸ್

ತಮಿಳುನಾಡು ಕೇಸ್

ಕರ್ನಾಟಕ ನೀರು ಬಿಡದೆ ಇದ್ದುದರಿಂದ 2012-13ರಲ್ಲಿ 2,500 ಕೋಟಿ ರು. ಮೌಲ್ಯದ ಬೆಳೆನಷ್ಟವಾಗಿದ್ದು, ಇದನ್ನು ಕರ್ನಾಟಕ ತುಂಬಿಕೊಡಬೇಕು ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಇದನ್ನು ಎದುರಿಸುವ ಬಗ್ಗೆಯೂ ರಾಜ್ಯ ಸರ್ಕಾರ ಚಿಂತನೆ ಮಾಡಿದೆ.

ಬೆಂಗಳೂರಿಗೆ ಸಾಕು

ಬೆಂಗಳೂರಿಗೆ ಸಾಕು

ಕೆಆರ್ ಎಸ್ ನಲ್ಲಿ ಶೇಖರಣೆಯಾಗಿರುವ ನೀರನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ಬೆಂಗಳೂರು ಮಹಾನಗರದ ಜನರ ದಾಹ ತೀರಿಸಲು ಸಾಕು. ಜಲಾನಯನ ಪ್ರದೇಶದ ನೀರಾವರಿ ಜಮೀನುಗಳು ಜೀವ ಜಲದ ಕೊರತೆಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ.

ಪರಿಹಾರ ಏನು?

ಪರಿಹಾರ ಏನು?

ಈ ಬಾರಿ ಮತ್ತೆ ಕಾವೇರಿ ವಿವಾದ ಭುಗಿಲೇಳಲಿದ್ದು ಇನ್ನುಳಿದ ತಿಂಗಳುಗಳಲ್ಲಿ ಮಳೆ ಆರ್ಭಟಿಸಿದರೆ ಸಮಸ್ಯೆ ತಕ್ಕ ಮಟ್ಟಿಗೆ ಕಡಿಮೆ ಆಗಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Why Karnataka decided not to release Cauvery water to Tamil Nadu? Here are some facts to note. Water levels in the Cauvery basin reservoirs remaining low, Karnataka is unable to release Cauvery water to Tamil Nadu as specified by the tribunal.
Please Wait while comments are loading...