ಡಿಜಿಟಲ್ ಕನ್ನಡ ರಾಜ್ಯೋತ್ಸವಕ್ಕೆ ಡಿಕೆಶಿ ಕರೆ, ನಿಮ್ಮತ್ರ ಇನ್‌ಸ್ಟಾಗ್ರಾಂ ಇದ್ರೆ ಇದು ಸುಲಭ!
ಇಂದು ಈ ನೆಲದ ಹಬ್ಬ ಕನ್ನಡ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲು ಮುಂದಾಗಿದ್ದಾರೆ. ರಾಜ್ಯೋತ್ಸವದಂದು ಜನರಿಗೆ ವಿಶೇಷ ಕರೆ ಕೂಡ ನೀಡಿದ್ದಾರೆ.
69ನೇ ಕನ್ನಡ ರಾಜ್ಯೋತ್ಸವವನ್ನು ಡಿಜಿಟಲ್ ರೂಪದಲ್ಲಿ ಆಚರಿಸಲು ನಾನು ಇನ್‌ಸ್ಟಾಗ್ರಾಂನಲ್ಲಿ ʻಕನ್ನಡ ಫಿಲ್ಟರ್ʼ ಬಳಸಿ ಸೆಲ್ಫಿ ತೆಗೆದುಕೊಂಡಿದ್ದೇನೆ. ಸಭಾಪತಿಗಳಾದ ಯು.ಟಿ.ಖಾದರ್ ಅವರನ್ನು ಈ ಅಭಿಯಾನವನ್ನು ಮುಂದುವರೆಸಲು ನಾಮಿನೇಟ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ನಮ್ಮ ನಾಡು ಡಿಜಿಟಲ್ ಕ್ರಾಂತಿಗೆ ಹೆಸರುವಾಸಿಯಾಗಿದೆ. ಹೀಗಾಗಿ ಈ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಹಾಗೂ ಡಿಜಿಟಲ್ ರೂಪದಲ್ಲಿ ಆಚರಿಸಲು ಮುಂದಾಗಿದ್ದೇನೆ. ಸೋಶಿಯಲ್ ಮೀಡಿಯಾದಲ್ಲಿರುವ ಹಲವು ಯುವಜನರು ಕನ್ನಡ ಫಿಲ್ಟರ್ ಬಳಸಿ, ನೀವೂ ಸೆಲ್ಫಿ ತೆಗೆದುಕೊಳ್ಳಿ. ಇದೊಂದು ಡಿಜಿಟಲ್ ಅಭಿಯಾನ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕನ್ನಡದ ಗರಿಮೆಯನ್ನು ಜಗದಗಲ ಪಸರಿಸುವ ನಿಟ್ಟಿನಲ್ಲಿ ಇದೊಂದು ಪುಟ್ಟ ಹೆಜ್ಜೆ. ನೀವೂ ಈ ಕೈಂಕರ್ಯದಲ್ಲಿ ಪಾಲ್ಗೊಳ್ಳಿ.ಚಿರಕಾಲ ಬೆಳಗಲಿ ಕನ್ನಡದ ದೀಪ. ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ ಎಂದಿದ್ದಾರೆ. ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಇನ್ನಷ್ಟು ವಿಶೇಷವಾಗಿ ಆಚರಿಸೋಣ. ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳು, ಐಟಿ ಬಿಟಿ ಕಂಪನಿಗಳು, ಕಾರ್ಖಾನೆಗಳು, ಖಾಸಗಿ ಉದ್ಯಮಗಳು ಕನ್ನಡ ಧ್ವಜವನ್ನು ಹಾರಿಸಬೇಕು ಎಂದು ಡಿಕೆಶಿ ಮನವಿ ಮಾಡಿದ್ದಾರೆ.

ಪ್ರತಿ ನವೆಂಬರ್ ತಿಂಗಳ ಮೊದಲ ದಿನವನ್ನು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುವ ಜೊತೆಗೆ ತಿಂಗಳಿಡೀ ಹಬ್ಬದ ರೀತಿಯಲ್ಲೇ ಸಂಭ್ರಮಿಸಲಾಗುತ್ತದೆ. ಈ ಬಾರಿ ರಾಜ್ಯ ಸರ್ಕಾರವು ಕನ್ನಡ ರಾಜ್ಯೋತ್ಸವಕ್ಕೆ ಹೊಸ ನಿಯಮವನ್ನು ಕಡ್ಡಾಯಗೊಳಿಸಿ ಅರ್ಥಪೂರ್ಣ ಆಚರಣೆಗೆ ಕರೆ ನೀಡಿದೆ.
ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಎಲ್ಲೆಡೆ ಆಚರಿಸಬೇಕು ಎಂಬ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿದೆ. ಹಾಗಾಗಿ ನವೆಂಬರ್ 1ರಂದು (ಇಂದು) ಎಲ್ಲ ಶಾಲಾ, ಕಾಲೇಜುಗಳು, ಕಾರ್ಖಾನೆಗಳು ಮತ್ತು ಐಟಿಬಿಟಿ ಕಂಪನಿಗಳಲ್ಲಿ ಕನ್ನಡ ಬಾವುಟವನ್ನು ಕಡ್ಡಾಯವಾಗಿ ಹಾರಿಸಲೇಬೇಕು ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದ್ದರು.
೬೯ನೇ ಕನ್ನಡ ರಾಜ್ಯೋತ್ಸವವನ್ನು ಡಿಜಿಟಲ್ ರೂಪದಲ್ಲಿ ಆಚರಿಸಲು ನಾನು ಇನ್‌ಸ್ಟಾಗ್ರಾಂನಲ್ಲಿ ʻಕನ್ನಡ ಫಿಲ್ಟರ್ʼ ಬಳಸಿ ಸೆಲ್ಫಿ ತೆಗೆದುಕೊಂಡಿದ್ದೇನೆ. ಸಭಾಪತಿಗಳಾದ ಶ್ರೀ ಯು.ಟಿ ಖಾದರ್ ಅವರನ್ನು ಈ ಅಭಿಯಾನವನ್ನು ಮುಂದುವರೆಸಲು ನಾಮಿನೇಟ್ ಮಾಡುತ್ತಿದ್ದೇನೆ. ಕನ್ನಡದ ಗರಿಮೆಯನ್ನು ಜಗದಗಲ ಪಸರಿಸುವ ನಿಟ್ಟಿನಲ್ಲಿ ಇದೊಂದು ಪುಟ್ಟ ಹೆಜ್ಜೆ.… pic.twitter.com/WsAYDK2d6K
— DK Shivakumar (@DKShivakumar) November 1, 2024
ನವೆಂಬರ್ ಒಂದು ಎಂದರೆ ನಮ್ಮ ಕರ್ನಾಟಕಕ್ಕೆ ಬಹಳ ಹೆಮ್ಮೆಯ ದಿನ. ಹಾಗಾಗಿ ಎಲ್ಲ ಕಂಪನಿಗಳು, ಶಿಕ್ಷಣ ಸಂಸ್ಥೆಗಳು ಕನ್ನಡದ ಧ್ವಜಾರೋಹಣ ಮಾಡಬೇಕು. ಹೀಗಾಗಿ ಈಗಾಗಲೇ ಈ ಬಗ್ಗೆ ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಹೊರಗಿನವರೇ ಇದ್ದಾರೆ. ಅವರೂ ನಮ್ಮ ಕನ್ನಡ ಕಲಿಯಬೇಕು. ರಾಜ್ಯೋತ್ಸವದಂದು ಕನ್ನಡಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಕಡ್ಡಾಯ. ರಾಷ್ಟ್ರಧ್ವಜದ ರೀತಿಯಲ್ಲೇ ನಮ್ಮ ಕನ್ನಡದ ಬಾವುಟವನ್ನೂ ಗೌರವಿಸಬೇಕು ಎಂದಿದ್ದರು.
ಕನ್ನಡ ರಾಜ್ಯೋತ್ಸವದ ಹೆಸರಲ್ಲಿ ಯಾವ ಸಂಘಟನೆಗಳೂ ಯಾರ ಮೇಲೂ ಒತ್ತಡ ಹೇರಬಾರದು. ರಾಜ್ಯೋತ್ಸವ ಆಚರಣೆ ಬಗ್ಗೆ ರಾಜ್ಯ ಸರ್ಕಾರವೇ ಆದೇಶ ನೀಡುತ್ತಿದೆ. ಅದರ ಅನ್ವಯವೇ ರಾಜ್ಯೋತ್ಸವ ಆಚರಣೆ ನಡೆಯಲಿದೆ. ಒಂದು ವೇಳೆ ಸಂಸ್ಥೆಗಳು ಕನ್ನಡ ಬಾವುಟ ಹಾರಿಸದಿದ್ದರೆ, ಅಂತಹ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಸರ್ಕಾರ ನಿರ್ಧರಿಸುತ್ತೆ. ಈ ವಿಚಾರವಾಗಿ ಕನ್ನಡ ಸಂಘಟನೆಗಳು ಖಾಸಗಿ ಸಂಸ್ಥೆಗಳಿಗೆ ಧಮ್ಕಿ ಹಾಕುವುದು, ಗಲಾಟೆ ಮಾಡಿ ಹೆದರಿಸಬಾರದು ಎಂದು ಡಿಕೆಶಿ ಎಚ್ಚರಿಕೆ ನೀಡಿದ್ದರು.












Click it and Unblock the Notifications