Karnataka DCET 2022 ಪ್ರವೇಶ ಪತ್ರ ಬಿಡುಗಡೆ, ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
ಬೆಂಗಳೂರು, ನವೆಂಬರ್ 13: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕರ್ನಾಟಕ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ 2022 (DCET) ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.
ಕರ್ನಾಟಕ ಡಿಸಿಇಟಿ 2022 ಪ್ರವೇಶ ಪರೀಕ್ಷೆಗೆ ನೋಂದಾಯಿತ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ವೆಬ್‌ಸೈಟ್ cetonline.karnataka.gov.in ನಲ್ಲಿ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಯು ಡಿಪ್ಲೊಮಾ ಸಿಇಟಿ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಲು ತಮ್ಮ ಲಾಗಿನ್ ಐಡಿಯಾಗಿರುವ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಬೇಕಿದೆ.
ಎರಡನೇ ಅಥವಾ ಮೂರನೇ ವರ್ಷದ ಸೆಮಿಸ್ಟರ್ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಡಿಪ್ಲೊಮಾ ಸಿಇಟಿ 2022 ಪರೀಕ್ಷೆಯು ನವೆಂಬರ್ 20 ರಂದು ನಡೆಯಲಿದೆ. ಅನ್ವಯಿಕ ವಿಜ್ಞಾನ ಮತ್ತು ಅನ್ವಯಿಕ ಗಣಿತದ ಪರೀಕ್ಷೆಯು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ. ಆದರೆ ಕನ್ನಡ ಭಾಷಾ ಪರೀಕ್ಷೆಯು ಮಧ್ಯಾಹ್ನ 3ಗಂಟೆಯಿಂದ ರಿಂದ 4ರ ವರೆಗೆ ಜರುಗಲಿದೆ.

ಕರ್ನಾಟಕ DCET 2022 ಪ್ರವೇಶ ಕಾರ್ಡ್ ಡೌನ್‌ಲೋಡ್ ಹೇಗೆ?
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಕೃತ ವೆಬ್‌ಸೈಟ್ cetonline.karnataka.gov.in ತೆರೆಯಿರಿ. ಅಲ್ಲಿ ಡಿಪ್ಲೊಮಾ CET 2022 ಹಾಲ್ ಟಿಕೆಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ತದನಂತರ ಲಾಗ್ ಇನ್ ಆಗಲು ಅಲ್ಲಿ ಕೇಳುವ ನೋಂದಣಿ ಸಂಖ್ಯೆ, ಹುಟ್ಟಿದ ದಿನಾಂಕ ರುಜುವಾತುಗಳನ್ನು ನಮೂದಿಸಿ. ಕೆಇಎ ಡಿಪ್ಲೊಮಾ ಸಿಇಟಿ ಹಾಲ್ ಟಿಕೆಟ್ ಪರದೆಯ ಮೇಲೆ ಕಾಣಿಸುತ್ತದೆ. ಪ್ರವೇಶ ಕಾರ್ಡ್‌ನ ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಲ್ಯಾಟರಲ್ ಎಂಟ್ರಿ ಸ್ಕೀಮ್ ಯೋಜನೆಯಡಿ ಎಂಜಿನಿಯರಿಂಗ್ ಕೋರ್ಸ್‌ಗಳ 2ನೇ ಅಥವಾ 3ನೇ ಸೆಮಿಸ್ಟರ್‌ಗೆ ಪ್ರವೇಶ ಪಡೆಯುವ ಅಭ್ಯರ್ಥಿಗಳಿಗಾಗಿ ಕೆಇಎ ಕರ್ನಾಟಕ ಡಿಪ್ಲೊಮಾ ಸಿಇಟಿ 2022 ಅನ್ನು ನಡೆಸುತ್ತದೆ.












Click it and Unblock the Notifications