Karnataka Trains: ದಸರಾ, ದೀಪಾವಳಿಗೆ ಗುಡ್ ನ್ಯೂಸ್! ಹುಬ್ಬಳ್ಳಿ & ಮೈಸೂರಿನಿಂದ ವಿಶೇಷ ರೈಲುಗಳ ಸಂಚಾರ, ವಿವರ
ಕರ್ನಾಟಕದಲ್ಲಿ ನಾಡಹಬ್ಬ ದಸರಾ, ದೀಪಾವಳಿ ಹಬ್ಬಕ್ಕೆ ಎದುರು ನೋಡುತ್ತಿದ್ದರೆ, ಬೀಹಾರ, ಜಾರ್ಖಂಡ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಛತ್ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಸಂಚಾರ ಇರುತ್ತದೆ. ಜನದಟ್ಟಣೆಯು ಹೆಚ್ಚಾಗಿರುತ್ತದೆ. ಅವರಿಗೆ ಅನುಕೂಲ ಮಾಡಲು, ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ (SWR) ವಿವಿಧ ಮಾರ್ಗಗಳಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲಿದೆ. ಸಮಯ, ವೇಳಾಪಟ್ಟಿ ಹೊರಡಿಸಿದೆ. ಪ್ರಯಾಣಿಕರು ಗಮನಿಸಿ ಪ್ರಯಾಣದ ಪ್ಲಾನ್ ಮಾಡಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಹಬ್ಬಗಳ ಪ್ರಯುಕ್ತ ಕರ್ನಾಟಕದ ಮೈಸೂರಿನಿಂದ ಹಾಗೂ ಉತ್ತರ ಕರ್ನಾಟಕದ ಹುಬ್ಬಳ್ಳಿ ಜಂಕ್ಷನ್ ನಿಂದ ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಲಿವೆ. ಎಸ್‌ಎಸ್‌ಎಸ್ ಹುಬ್ಬಳ್ಳಿ - ಭಗತ್-ಕಿ-ಕೋಠಿ - ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲು (07359/07360) ಒಟ್ಟು ಸುಮಾರು ಐದು ಟ್ರಿಪ್‌ಗಳ ಸೇವೆ ಒದಗಿಸಲಿದೆ. ಇದರೊಂದಿಗೆ ದಸರಾ ಪ್ರಯುಕ್ತ ಮೈಸೂರು-ಸಿಕಂದರಾಬಾದ್ ರೈಲು ಸಹ ಸಂಚಾರ ನಡೆಸಲಿದೆ. ಈ ರೈಲುಗಳಿಂದ ಕರ್ನಾಟಕದ ಕೆಲವು ಜಿಲ್ಲೆಗಳ ಪ್ರಯಾಣಿಕರಿಗೂ ಹೆಚ್ಚುವರಿ ರೈಲು ಸೇವೆ ಸಿಕ್ಕಂತಾಗುತ್ತದೆ.

* ಎಸ್‌ಎಸ್‌ಎಸ್ ಹುಬ್ಬಳ್ಳಿ - ಭಗತ್-ಕಿ-ಕೋಠಿ ಎಕ್ಸ್‌ಪ್ರೆಸ್ ರೈಲು (07359) ಹುಬ್ಬಳ್ಳಿಯಿಂದ 28.09.2025 ರಿಂದ 26.10.2025 ರವರೆಗೆ ಪ್ರತಿ ಭಾನುವಾರ ಸಂಜೆ 7:30 ಕ್ಕೆ ಹೊರಡುತ್ತದೆ. ಎರಡು ದಿನಗಳ ಬಳಿಕ ಮಂಗಳವಾರ ಬೆಳಗ್ಗೆ 5:30 ಕ್ಕೆ ಭಗತ್-ಕಿ-ಕೋಠಿ ತಲುಪಲಿದೆ. ಮರಳಿ ಅದೇ ದಿನಕ್ಕಿನಲ್ಲಿ ಭಗತ್-ಕಿ-ಕೋಠಿ - ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲು (07360) ಭಗತ್-ಕಿ-ಕೋಠಿಯಿಂದ 30.09.2025 ರಿಂದ 28.10.2025 ರವರೆಗೆ ಪ್ರತಿ ಮಂಗಳವಾರ ಬೆಳಗ್ಗೆ 7:50 ಕ್ಕೆ ಹೊರಟು ಬುಧವಾರ ಮಧ್ಯಾಹ್ನ 3:15 ಕ್ಕೆ ಹುಬ್ಬಳ್ಳಿಗೆ ಬಂದು ಸೇರುತ್ತದೆ.
ಯಾವೆಲ್ಲ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ?
ಈ ರೈಲು ಮಾರ್ಗ ಮಧ್ಯೆ ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಡ್, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರಸ್ತೆ, ವಾಪಿ, ಸೂರತ್, ವಡೋದರಾ, ಮಹೇಸಾನ, ಪಾಲನ್‌ಪುರ, ಅಬು ರಸ್ತೆ, ಪಿಂದ್ವಾರ, ಫಲ್ನಾ, ಮಾರ್ವಾರ್, ಪಾಲಿ ಮಾರ್ವಾರ್ ಮತ್ತು ಲುನಿ ನಿಲ್ದಾಣಗಳಲ್ಲಿ ಎರಡೂ ದಿಕ್ಕಿನ ಸಂಚಾರದಲ್ಲೂ ನಿಲುಗಡೆ ನೀಡುತ್ತದೆ.
20 ಬೋಗಿಗಳನ್ನು ಹೊಂದಿರುವ ಈ ವಿಶೇಷ ಎಕ್ಸ್‌ಪ್ರೆಸ್ ರೈಲು 2 ಎಸಿ-2 ಟೈರ್, 16 ಎಸಿ-3 ಟೈರ್ ಮತ್ತು 02 ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳನ್ನು ಜನರೇಟರ್ ಕಾರುಗಳೊಂದಿಗೆ ಒಳಗೊಂಡಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 139ಗೆ ಸಂಪರ್ಕಿಸಬೇಕು. ಮುಂಗಡ ಟಿಕೆಟ್ ಬುಕ್ ಮಾಡಲು IRCTC ಆಪ್ ಇಲ್ಲವೇ ರೈಲ್ವೆ ಇಲಾಖೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಸೋಮವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಮೈಸೂರು-ಸಿಕಂದರಾಬಾದ್ ರೈಲಿನ ವೇಳಾಪಟ್ಟಿ
ದಸರಾ ಪ್ರಯುಕ್ತ ಮೈಸೂರು-ಸಿಕಂದರಾಬಾದ್ ವಿಶೇಷ ಎಕ್ಸ್‌ಪ್ರೆಸ್ ರೈಲು ಐದು ಟ್ರಿಪ್ ಕಾರ್ಯಾಚರಣೆ ನಡೆಸಲಿದೆ. ಈ ಸಿಕಂದರಾಬಾದ್-ಮೈಸೂರು ರೈಲು (07033) ಸೆಪ್ಟಂಬರ್ 01ರಿಂದ ಅಕ್ಟೋಬರ್ 31ರವರೆಗೆ (ಸೆಪ್ಟಂಬರ್ 30 ಹೊರತುಪಡಿಸಿ) ಕಾರ್ಯಾಚರಣೆ ಮಾಡಲಿದೆ. ಸೋಮವಾರ ಮತ್ತು ಶುಕ್ರವಾರ 22.10ಗಂಟೆಗೆ ಸಿಕಂದರಾಬಾದ್‌ನಿಂದ ಹೊರಟು ಕ್ರಮವಾಗಿ ಮಂಗಳವಾರ ಮತ್ತು ಶನಿವಾರ ಬೆಳಗ್ಗೆ 16 ಗಂಟೆಗೆ ಮೈಸೂರಿಗೆ ಬಂದು ಸೇರಲಿದೆ.
ಅದೇ ರೀತಿ ಮೈಸೂರು-ಸಿಕಂದರಾಬಾದ್ ವಿಶೇಷ ಎಕ್ಸ್‌ಪ್ರೆಸ್ ರೈಲು 07034 ಸೆಪ್ಟಂಬರ್ 02ರಿಂದ ನವೆಂಬರ್ 1ರವರೆಗೆ ಸೇವೆ ನೀಡಲಿದೆ. ಮಂಗಳವಾರ ಮತ್ತು ಶನಿವಾರ 17.20ಗಂಟೆಗೆ ಮೈಸೂರಿನಿಂದ ಹೊರಟು ಕ್ರಮವಾಗಿ ಬುಧವಾರ ಮತ್ತು ಭಾನುವಾರ ಬೆಳಗ್ಗೆ 11 ಗಂಟೆಗೆ ಸಿಕಂದರಾಬಾದ್ ನಿಲ್ದಾಣ ತಲುಪುತ್ತದೆ. ಈಗಾಗಲೇ ಇದ್ದ ಬೋಗಿಗಳು ಹಾಗೂ ನಿಲುಗಡೆ ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಮುಂದುವರಿಸಲಾಗುವುದು ಎಂದು SWR ಮಾಹಿತಿ ನೀಡಿದೆ.












Click it and Unblock the Notifications