ರಾಜ್ಯದಲ್ಲಿ ಮಳೆರಾಯನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು,ಮೇ 14: ಬಿಸಿಲಿನಿಂದ ಹೈರಾಣಾಗಿದ್ದ ಜನರು ವರುಣರಾಯನ ಕೃಪೆಯಿಂದ ತಣ್ಣಗಾಗಿದ್ದಾರೆ. ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಹೀಗಾಗಿ ರೈತನ ಮೊಗದಲ್ಲಿ ಸಂತಸ ಮೂಡಿದೆ. ಮೇ 21ರವರೆಗೆ ರಾಜ್ಯಾದ್ಯಂತ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮೇ 19 ಮತ್ತು 20 ರಂದು ಮಳೆ ಹೆಚ್ಚಾಗುವ ಸಾದ್ಯತೆ ಇದೆ.
ಇನ್ನೂ ಕಳೆದ ಬಾರಿ ಮಳೆ ಇಲ್ಲದೇ ರೈತ ರೋಸಿ ಹೋಗಿದ್ದು, ಇದೀಗ ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಬಾರಿ ಮಳೆಯ ಕೊರತೆಯಿಂದಾಗಿ ಜಲಾಶಯಗಳು ಬರಿದಾಗಿದ್ವು, ಇದೀಗ ರಾಜ್ಯಾದ್ಯಂತ ಹಲವು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹಾಗಾದರೆ ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ ಸೇರಿದಂತೆ ಕರ್ನಾಟಕ ಮೇ 14 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರಮುಖ ಜಲಾಶಯಗಳ ನೀರಿನ ಮಟ್ಟ!
1. ಕೆಆರ್ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ -38.04 ಮೀಟರ್
ಇಂದಿನ ನೀರಿನ ಮಟ್ಟ- 10.62 ಟಿಎಂಸಿ
ಒಳಹರಿವು - 250 ಕ್ಯೂಸೆಕ್
ಹೊರಹರಿವು - 541 ಕ್ಯೂಸೆಕ್
2. ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 871.38 ಮೀಟರ್
ಇಂದಿನ ನೀರಿನ ಮಟ್ಟ - 2.95 ಟಿಎಂಸಿ
ಒಳಹರಿವು - 262 ಕ್ಯೂಸೆಕ್
ಹೊರಹರಿವು - 300 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ- 519.60 ಮೀಟರ್
ಇಂದಿನ ನೀರಿನ ಮಟ್ಟ - 27.83 ಟಿಎಂಸಿ
ಒಳಹರಿವು -0 ಕ್ಯೂಸೆಕ್
ಹೊರಹರಿವು - 9583 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 497.71 ಮೀಟರ್
ಇಂದಿನ ನೀರಿನ ಮಟ್ಟ- 3.42 ಟಿಎಂಸಿ
ಒಳಹರಿವು - 0 ಕ್ಯೂಸೆಕ್
ಹೊರಹರಿವು - 90 ಕ್ಯೂಸೆಕ್
5. ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 633.80 ಮೀಟರ್
ಇಂದಿನ ನೀರಿನ ಮಟ್ಟ - 07.94 ಟಿಎಂಸಿ
ಒಳಹರಿವು - 0 ಕ್ಯೂಸೆಕ್
ಹೊರಹರಿವು - 194 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 554.44 ಮೀಟರ್
ಇಂದಿನ ನೀರಿನ ಮಟ್ಟ - 16.96 ಟಿಎಂಸಿ
ಒಳಹರಿವು - 0 ಕ್ಯೂಸೆಕ್
ಹೊರಹರಿವು - 2067 ಕ್ಯೂಸೆಕ್
7. ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 696.13 ಮೀಟರ್
ಇಂದಿನ ನೀರಿನ ಮಟ್ಟ - 6.43 ಟಿಎಂಸಿ
ಒಳಹರಿವು -42 ಕ್ಯೂಸೆಕ್
ಹೊರಹರಿವು - 500 ಕ್ಯೂಸೆಕ್
8. ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 657.73 ಮೀಟರ್
ಇಂದಿನ ನೀರಿನ ಮಟ್ಟ - 13.37 ಟಿಎಂಸಿ
ಒಳಹರಿವು - 467 ಕ್ಯೂಸೆಕ್
ಹೊರಹರಿವು - 374 ಕ್ಯೂಸೆಕ್
9. ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 662.91 ಮೀಟರ್
ಇಂದಿನ ನೀರಿನ ಮಟ್ಟ -14.15 ಟಿಎಂಸಿ
ಒಳಹರಿವು - 0 ಕ್ಯೂಸೆಕ್
ಹೊರಹರಿವು - 5354 ಕ್ಯೂಸೆಕ್
10. ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ -890.58 ಮೀಟರ್
ಇಂದಿನ ನೀರಿನ ಮಟ್ಟ - 9.11 ಟಿಎಂಸಿ
ಒಳಹರಿವು -253 ಕ್ಯೂಸೆಕ್
ಹೊರಹರಿವು - 250 ಕ್ಯೂಸೆಕ್
11. ಸೂಫಾ ಜಲಾಶಯ
ಗರಿಷ್ಠ ನೀರಿನ ಮಟ್ಟ- 564.00 ಮೀಟರ್
ಇಂದಿನ ನೀರಿನ ಮಟ್ಟ- 37.26 ಟಿಎಂಸಿ
ಒಳಹರಿವು- 0 ಕ್ಯೂಸೆಕ್
ಹೊರಹರಿವು- 688 ಕ್ಯೂಸೆಕ್












Click it and Unblock the Notifications