ರಾಜ್ಯದಲ್ಲಿ ಭರ್ಜರಿ ಮಳೆ; ಸುಫಾ ಡ್ಯಾಂ ಬಹುತೇಕ ಭರ್ತಿ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ಎಷ್ಟು?
ಬೆಂಗಳೂರು, ಜುಲೈ 09: ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಳೆಯಾಗುತ್ತಿದೆ. ಕರಾವಳಿಯಲ್ಲಿ ಸುರಿದ ಭಾರಿ ಮಳೆಗೆ ಕಾರವಾರ, ಕುಮಟಾ, ಹೊನ್ನಾವರ ಭಾಗದ ಜನರಿಗೆ ಜಲ ಕಂಟಕ ಎದುರಾಗಿದ್ದು, ಮಳೆಯ ಅಬ್ಬರಕ್ಕೆ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸುಫಾ ಡ್ಯಾಂ ಬಹುತೇಕ ಭರ್ತಿಯಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅದರಲ್ಲೂ ಕರಾವಳಿ ಭಾಗವಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಜುಲೈ 12ರವರೆಗೆ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.

ಇನ್ನೂ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದ್ದು ಈ ಮೂರು ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜು.10 ಮತ್ತು 11ರಂದು ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇರಲಿದೆ ಎಂದು ತಿಳಿಸಿದರು. ಹಾಗಾದ್ರೆ, ಸುಫಾ ಜಲಾಶಯ ಸೇರಿದಂತೆ ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಜಲಾಶಯಗಳಲ್ಲಿ ಜುಲೈ 09 ರಂದು ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
| ರಾಜ್ಯದ ಪ್ರಮುಖ ಜಲಾಶಯಗಳು | ಗರಿಷ್ಠ ನೀರಿನ ಮಟ್ಟ(ಮೀ) | ಇಂದಿನ ನೀರಿನ ಮಟ್ಟ | ಒಳಹರಿವು (ಕ್ಯೂಸೆಕ್ಸ್) | ಹೊರಹರಿವು (ಕ್ಯೂಸೆಕ್ಸ್) |
| ಆಲಮಟ್ಟಿ ಜಲಾಶಯ | 519.60 | 64.59 | 60603 | 430 |
| ತುಂಬಾ ಭದ್ರಾ ಜಲಾಶಯ | 497.71 | 20.85 | 30388 | 266 |
| ಮಲಪ್ರಭಾ ಜಲಾಶಯ | 633.80 | 10.21 | 12232 | 118 |
| ಕೆ ಆರ್ ಎಸ್ | 38.04 | 25.09 | 8245 | 567 |
| ಲಿಂಗನಮಕ್ಕಿ ಜಲಾಶಯ | 554.44 | 38.82 | 41048 | 1409 |
| ಕಬಿನಿ ಜಲಾಶಯ | 696.13 | 18.17 | 4711 | 2292 |
| ಭದ್ರಾ ಜಲಾಶಯ | 657.73 | 22.43 | 8777 | 154 |
| ಘಟಪ್ರಭಾ ಜಲಾಶಯ | 662.91 | 18.89 | 21232 | 118 |
| ಹೇಮಾವತಿ ಜಲಾಶಯ | 890.58 | 18.30 | 8448 | 250 |
| ವರಾಹಿ ಜಲಾಶಯ | 594.36 | 6.15 | 2725 | 0 |
| ಹಾರಂಗಿ ಜಲಾಶಯ | 871.38 | 5.64 | 2394 | 200 |
| ಸೂಫಾ | 564.00 | 43.63 | 29534 | 0 |
| ನಾರಾಯಣಪುರ ಜಲಾಶಯ | 492.25 | 21.16 | 201 | 201 |
| ವಾಣಿವಿಲಾಸ ಸಾಗರ | 652.24 | 18.07 | 0 | 147 |












Click it and Unblock the Notifications