Karnataka Dam Water Level: ರಾಜ್ಯದಲ್ಲಿ ಭರ್ಜರಿ ಮಳೆ: KRS ಸೇರಿದಂತೆ ಹಲವು ಜಲಾಶಯಗಳ ಒಳಹರಿವು ಹೆಚ್ಚಳ!
ಬೆಂಗಳೂರು, ಜುಲೈ 03: ಕಳೆದ ವರ್ಷಕ್ಕಿಂತ ಈ ವರ್ಷ ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಕರ್ನಾಟಕದಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, ರೈತರು ಸಂತಸದಲ್ಲಿದ್ದಾರೆ. ಅಬ್ಬರದ ಮಳೆಯಿಂದಾಗಿ ಕೆರೆ, ಕುಂಟೆ, ಹಳ್ಳ-ಕುಳ್ಳ ಮತ್ತು ನದಿಗಳಲ್ಲಿ ಹರಿವು ಹೆಚ್ಚಾಗಿದೆ.
ಕೊಡಗು ಮತ್ತು ಕೇರಳದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಕಾವೇರಿ ನದಿ ಪಾತ್ರದ ಜಲಾಶಯಗಳ ಒಳಹರಿವು ಸಹ ಹೆಚ್ಚಿದೆ. ಮಂಗಳವಾರ ಕೆಆರ್ಎಸ್ ಜಲಾಶಯದ ಒಳಹರಿವು 12,400 ಕ್ಯೂಸೆಕ್ಸ್ ಏರಿಕೆಯಾಗಿತ್ತು. ಕಬಿನಿ ಜಲಾಶಯಕ್ಕೆ 10,400 ಮತ್ತು ಹೇಮಾವತಿ ಜಲಾಶಯಕ್ಕೆ 8500 ಕ್ಯೂಸೆಕ್ಸ್ ನೀರು ಹರಿದು ಬಂದಿದೆ. ಹಾಗಾದರೆ ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ ಸೇರಿದಂತೆ ಕರ್ನಾಟಕ ಜುಲೈ 03 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

| ಕರ್ನಾಟಕದ ಪ್ರಮುಖ ಜಲಾಶಯಗಳು | ಗರಿಷ್ಠ ನೀರಿನ ಮಟ್ಟ(ಮೀ) | ಇಂದಿನ ನೀರಿನ ಮಟ್ಟ(ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) | ಹೊರಹರಿವು (ಕ್ಯೂಸೆಕ್ಸ್) |
| ಕೆಆರ್ಎಸ್ ಜಲಾಶಯ | 38.04 | 20.13 | 8787 | 526 |
| ಹಾರಂಗಿ ಜಲಾಶಯ | 871.38 | 4.28 | 3441 | 200 |
| ಆಲಮಟ್ಟಿ ಜಲಾಶಯ | 519.60 | 39.08 | 24761 | 430 |
| ತುಂಗಭದ್ರಾ ಜಲಾಶಯ | 497.71 | 7.91 | 13410 | 377 |
| ಮಲಪ್ರಭಾ ಜಲಾಶಯ | 633.80 | 6.27 | 0 | 194 |
| ಲಿಂಗನಮಕ್ಕಿ ಜಲಾಶಯ | 554.44 | 21.04 | 20951 | 2759 |
| ಕಬಿನಿ ಜಲಾಶಯ | 693.13 | 16.20 | 11269 | 1542 |
| ಭದ್ರಾ ಜಲಾಶಯ | 657.73 | 18.16 | 5243 | 347 |
| ಘಟಪ್ರಭಾ ಜಲಾಶಯ | 662.91 | 10.61 | 5243 | 347 |
| ಹೇಮಾವತಿ ಜಲಾಶಯ | 890.58 | 14.64 | 10137 | 250 |
| ಸೂಫಾ ಜಲಾಶಯ | 564.00 | 31.25 | 8451 | 964 |












Click it and Unblock the Notifications