Karnataka Dam Water Level Today: ಭಾರೀ ಮಳೆಗೆ ಮೈದುಂಬಿದ ಅಣೆಕಟ್ಟುಗಳು, ಒಳಹರಿವು ಹೆಚ್ಚಳ
ಬೆಂಗಳೂರು, ಅಕ್ಟೋಬರ್ 17: ರಾಜ್ಯದಲ್ಲಿ ಕೆಲವು ದಿನಗಳಿಂದ ಇನ್ನಿಲ್ಲದಂತೆ ಹಿಂಗಾರು ಮಳೆ ಆರ್ಭಟಿಸುತ್ತಿದೆ. ಮುಂಗಾರು ಮಳೆ ಅಂತ್ಯವಾಗುತ್ತಿದ್ದಂತೆ ಹಿಂಗಾರಿನ ರುದ್ರನರ್ತನ ಶುರುವಾಗಿದೆ. ಮುಂಗಾರಿನಲ್ಲೇ ಹೆಚ್ಚು ಮಳೆ ಕಾಣದೇ ನರಳಿದ್ದ ರಾಜ್ಯದ ವಿವಿಧ ಪ್ರದೇಶಗಳು ಹಿಂಗಾರು ಮಳೆಗೆ ತಲ್ಲಣಗೊಂಡಿವೆ. ರಾಜ್ಯಾದೆಲ್ಲಡೆ ಸುರಿಯುತ್ತಿರುವ ಮಳೆಗೆ ಪ್ರಮುಖ ಜಲಾಶಯಗಳು ಮತ್ತೆ ಮೈದುಂಬಿಕೊಂಡಿವೆ. ಡ್ಯಾಂಗಳಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದೆ.
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿಗೆ ಹೆಚ್ಚು ಸೀಮಿತವಾಗಿದ್ದ ಜೋರು ಮಳೆ ಇದೀಗ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿದೆ. ಪಶ್ಚಿಮ ಘಟ್ಟಗಳಲ್ಲಿ ಬಿಟ್ಟು ಬಿಡದೇ ಮಳೆ ದಾಖಲಾಗುತ್ತಿದೆ. ಇದರ ಪರಿಣಾಮವಾಗಿ, ಕಾವೇರಿ, ಹಾರಂಗಿ, ನೇತ್ರಾವತಿ, ತುಂಗಾ, ಭದ್ರಾ, ಕಪಿಲಾ, ಕೃಷ್ಣಾ ನದಿಗಳಲ್ಲಿ ಒಳಹರಿವು ಹೆಚ್ಚಾಗಿದೆ. ಇದರಿಂದ ರಾಜ್ಯ ಜಲಾಶಯಗಳು ಎರಡನೇ ಭಾರೀಗೆ ಮತ್ತೆ ಮೈದುಂಬಿಕೊಂಡಿವೆ.

ರಾಜ್ಯದ ಬಹುತೇಕ ಎಲ್ಲ ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಹಿಂಗಾರು ಮಳೆ ಸದ್ಯಕ್ಕೆ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಮುಂದಿನ ಬೇಸಿಗೆಗೆ ಅಗತ್ಯದಷ್ಟು ನೀರಿನ ಸಂಗ್ರಹ ಈಗಾಗಲೇ ಆಗಿದೆ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾದರೆ ಇಂದಿನ (ಅಕ್ಟೋಬರ್ 17) ಅಣೆಕಟ್ಟುಗಳ ನೀರಿನ ಮಟ್ಟ, ಪಟ್ಟಿ ಇಲ್ಲಿದೆ.
ರಾಜ್ಯದ ಜಲಾಶಯಗಳ ನೀರಿನ ಮಟ್ಟ
ಕೃಷ್ಣ ರಾಜ ಸಾಗರ ಡ್ಯಾಂ
ಒಳ ಹರಿವು : 9043 ಕ್ಯೂಸೆಕ್
ಹೊರ ಹರಿವು : 8783 ಕ್ಯೂಸೆಕ್
ಒಟ್ಟು ನೀರಿನ ಸಾಮರ್ಥ್ಯ: 49.45 ಟಿಎಂಸಿ
ಇಂದಿನ ನೀರಿನ ಸಾಮರ್ಥ್ಯ: 49.45 ಟಿಎಂಸಿ
ಲಿಂಗನಮಕ್ಕಿ ಅಣೆಕಟ್ಟು
ಒಳ ಹರಿವು : 6809 ಕ್ಯೂಸೆಕ್
ಹೊರ ಹರಿವು : 6725 ಕ್ಯೂಸೆಕ್
ಒಟ್ಟು ನೀರಿನ ಸಾಮರ್ಥ್ಯ: 151.75 ಟಿಎಂಸಿ
ಇಂದಿನ ನೀರಿನ ಸಾಮರ್ಥ್ಯ: 146.08 ಟಿಎಂಸಿ
ಹಾರಂಗಿ ಜಲಾಶಯದ ಮಾಹಿತಿ
ಒಳ ಹರಿವು : 1938 ಕ್ಯೂಸೆಕ್
ಹೊರ ಹರಿವು : 300 ಕ್ಯೂಸೆಕ್
ಒಟ್ಟು ನೀರಿನ ಸಾಮರ್ಥ್ಯ: 8.50 ಟಿಎಂಸಿ
ಇಂದಿನ ನೀರಿನ ಸಾಮರ್ಥ್ಯ: 7.37 ಟಿಎಂಸಿ
ಭದ್ರಾ ಜಲಾಶಯ ಮಾಹಿತಿ
ಒಳ ಹರಿವು : 6762 ಕ್ಯೂಸೆಕ್
ಹೊರ ಹರಿವು : 6762 ಕ್ಯೂಸೆಕ್
ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
ಇಂದಿನ ನೀರಿನ ಸಾಮರ್ಥ್ಯ: 71.53 ಟಿಎಂಸಿ
ಹೇಮಾವತಿ ಜಲಾಶಯ
ಒಳ ಹರಿವು : 3820 ಕ್ಯೂಸೆಕ್
ಹೊರ ಹರಿವು : 2850 ಕ್ಯೂಸೆಕ್
ಒಟ್ಟು ನೀರಿನ ಸಾಮರ್ಥ್ಯ: 37.10 ಟಿಎಂಸಿ
ಇಂದಿನ ನೀರಿನ ಸಾಮರ್ಥ್ಯ: 33.83 ಟಿಎಂಸಿ
ಕಬಿನಿ ಜಲಾಶಯ
ಒಳ ಹರಿವು: 2553 ಕ್ಯೂಸೆಕ್
ಹೊರ ಹರಿವು: 2300 ಕ್ಯೂಸೆಕ್
ಒಟ್ಟು ನೀರಿನ ಸಾಮರ್ಥ್ಯ: 19.46 ಟಿಎಂಸಿ
ಇಂದಿನ ನೀರಿನ ಸಾಮರ್ಥ್ಯ: 14.52 ಟಿಎಂಸಿ












Click it and Unblock the Notifications