Karnataka Dam Water Level: ಭಾರೀ ಮಳೆಗೆ ರಾಜ್ಯದ ಅಣೆಕಟ್ಟುಗಳು ಭರ್ತಿ, ಹೊರಹರಿವು ಹೆಚ್ಚಳ! ವಿವರ

ಬೆಂಗಳೂರು, ಜುಲೈ 22: ಕರ್ನಾಟಕದಲ್ಲಿ ಮುಂಗಾರು ಮಳೆ ಜೋರಾಗಿದೆ. ಮಲೆನಾಡು, ಪಶ್ಚಿಮ ಘಟ್ಟಗಳ ಸುತ್ತಮುತ್ತ ಹಾಗೂ ಕೇರಳ ಭಾಗದಲ್ಲಿ ಉತ್ತಮವಾಗಿ ಮಳೆ ಆಗುತ್ತಿದೆ. ಈ ಕಾರಣದಿಂದಲೇ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಳಹರಿವು ಪ್ರಮಾಣ ಏರಿಕೆ ಆಗಿದ್ದು, ನೀರಿನ ಬಿಡುಗಡೆ ಪ್ರಮಾಣ (ಹೊರ ಹರಿವು) ಸಹ ಏರಿಕೆ ಆಗಿದೆ. ಮಳೆಗಾಲ ಆರಂಭವಾದ ಮೊದಲೇ ತಿಂಗಳೇ ಅರ್ಧದಷ್ಟು ಭರ್ತಿಯಾಗಿದ್ದ ಕೆಲವು ಜಲಾಶಯಗಳು ಜುಲೈನಲ್ಲಿ ಬಹುತೇಕ ಭರ್ತಿ ಆಗಿವೆ.

ಜುಲೈ 22 ರಂದು ಶಿವಮೊಗ್ಗ ಜಿಲ್ಲೆಯ ಭದ್ರಾ ಡ್ಯಾಂ ಹೊರ ಹರಿವು, ಮಂಡ್ಯ ಜಿಲ್ಲೆಯಲ್ಲಿನ ಕೃಷ್ಣರಾಜಸಾಗರ ಜಲಾಶಯದ (KRS Dam), ಕಬಿನಿ ಅಣೆಕಟ್ಟಿನಿಂದ ಹೊರ ಹರಿವು ಹೆಚ್ಚಾಗಿದೆ. ಕಳೆದ ಸುಮಾರು ಮೂರು ವಾರಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದ್ದರಿಂದ ರಾಜ್ಯದ ಪ್ರಮುಖ ಜಲಾಶಯಗಳ ಹೊರ ಹರಿವು ಏರಿಕೆ ಆಗಿದೆ. ಇದರಿಂದ ನದಿ ಪಾತ್ರ ಜನರಿಗೆ ಹೆಚ್ಚಿನ ಭೀತಿ ಉಂಟಾಗಿದೆ. ಮತ್ತೊಂದೆಡೆ ಒಂದು ವಾರದಿಂದ ನಿಲ್ಲದಂತೆ ಜೋರು ಮಳೆ ಆಗುತ್ತಿದೆ.

Karnataka Dam Water Levels Today Inflow and Outflow Increased Due to Heavy Rain in state

ಭಾಗಮಂಡಳದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ. ಒಂದು ತಿಂಗಳಿನಿಂದ ಬಿಡುವಿಲ್ಲ ಮಳೆಯನ್ನು ಇಲ್ಲಿನ ಜನ ಕಂಡಿದ್ದಾರೆ. ಮಳೆ ಕುರಿತು ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ರಾಜ್ಯದ ವಿವಿಧ ಜಲಾಶಯಗಳ ಇಂದಿನ (ಜುಲೈ 22) ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ.

ಕರ್ನಾಟಕ ಅಣೆಕಟ್ಟುಗಳ ಇಂದಿನ ಮಟ್ಟ

ಕಬಿನಿ ಜಲಾಶಯದ ಮಟ್ಟ

* ಇಂದಿನ ನೀರಿನ ಸಂಗ್ರಹ: 19.27 ಟಿಎಂಸಿ

* ಒಟ್ಟು ನೀರಿನ ಸಾಮರ್ಥ್ಯ: 19.52 ಟಿಎಂಸಿ

* ಇಂದಿನ ಒಳ ಹರಿವು: 12,000 ಕ್ಯೂಸೆಕ್

* ಡ್ಯಾಂ ಹೊರ ಹರಿವು: 12,000 ಕ್ಯೂಸೆಕ್

ಕೆಆರ್‌ಎಸ್ ಜಲಾಶಯ ವಿವರ

* ಇಂದಿನ ನೀರಿನ ಸಂಗ್ರಹ: 47.584 ಟಿಎಂಸಿ

* ಒಟ್ಟು ನೀರಿನ ಸಾಮರ್ಥ್ಯ: 49.452 ಟಿಎಂಸಿ

* ಇಂದಿನ ಒಳ ಹರಿವು: 14,014 ಕ್ಯೂಸೆಕ್

* ಡ್ಯಾಂ ಹೊರ ಹರಿವು: 10,660 ಕ್ಯೂಸೆಕ್

ಹೇಮಾವತಿ ಜಲಾಶಯದ ಇಂದಿನ ಮಾಹಿತಿ

* ಇಂದಿನ ನೀರಿನ ಸಂಗ್ರಹ: 36.16ಟಿಎಂಸಿ

* ಒಟ್ಟು ನೀರಿನ ಸಾಮರ್ಥ್ಯ: 37.10 ಟಿಎಂಸಿ

* ಇಂದಿನ ಒಳ ಹರಿವು: 7223 ಕ್ಯೂಸೆಕ್

* ಡ್ಯಾಂ ಹೊರ ಹರಿವು: 6825 ಕ್ಯೂಸೆಕ್

ಲಿಂಗನಮಕ್ಕಿ ಡ್ಯಾಂ ವಿವರ

* ಇಂದಿನ ನೀರಿನ ಸಂಗ್ರಹ: 106.40 ಟಿಎಂಸಿ

* ಒಟ್ಟು ನೀರಿನ ಸಾಮರ್ಥ್ಯ: 151.75 ಟಿಎಂಸಿ

* ಇಂದಿನ ಒಳ ಹರಿವು: 13,136 ಕ್ಯೂಸೆಕ್

* ಡ್ಯಾಂ ಹೊರ ಹರಿವು: 5067 ಕ್ಯೂಸೆಕ್

ಹಾರಂಗಿ ಜಲಾಶಯದ ವಿವರ

* ಇಂದಿನ ನೀರಿನ ಸಂಗ್ರಹ: 7.78 ಟಿಎಂಸಿ

* ಒಟ್ಟು ನೀರಿನ ಸಾಮರ್ಥ್ಯ: 8.5 ಟಿಎಂಸಿ

* ಇಂದಿನ ಒಳ ಹರಿವು: 3,436 ಕ್ಯೂಸೆಕ್

* ಡ್ಯಾಂ ಹೊರ ಹರಿವು: 4,900 ಕ್ಯೂಸೆಕ್

ಭದ್ರಾ ಡ್ಯಾಂ ನೀರಿನ ಸಂಗ್ರಹ

* ಇಂದಿನ ನೀರಿನ ಸಂಗ್ರಹ: 63.39 ಟಿಎಂಸಿ

* ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ

* ಇಂದಿನ ಒಳ ಹರಿವು: 8065 ಕ್ಯೂಸೆಕ್

* ಡ್ಯಾಂ ಹೊರ ಹರಿವು: 9619 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+