Dam Water Level: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಎಷ್ಟಿದೆ ನೀರಿನ ಮಟ್ಟ?
ರಾಜ್ಯದಲ್ಲಿ ಯುಗಾದಿ ಹಬ್ಬದ ಬಳಿಕ ಮಳೆ ಚುರುಕುಗೊಂಡಿದೆ. ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಲೇ ಇದೆ. ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಈ ಬಾರಿ ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ ಎಂದು ಹವಾಮಾನ ಇಲಾಖೆ ಹೇಳಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಏಪ್ರಿಲ್ ಎರಡನೇ ವಾರದಲ್ಲಿ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗಲಿದ್ದು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ಬೇಸಿಗೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಮಳೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಒಳಹರಿವು ಆರಂಭವಾಗಬಹುದು. ಬೇಸಿಗೆಯಲ್ಲೂ ಹಲವು ಜಲಾಶಯಗಳಲ್ಲಿ ನೀರಿನ ಪ್ರಮಾಣ ಉತ್ತಮವಾಗಿದ್ದರೆ, ಇನ್ನೂ ಕೆಲವು ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ರಾಜ್ಯದ ಜಲಾಶಯಗಳ ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ 895.62 ಟಿಎಂಸಿ ಆಗಿದ್ದು ಏಪ್ರಿಲ್ 1ರಂದು 352.35 ಟಿಎಂಸಿ ನೀರು ಸಂಗ್ರಹದಲ್ಲಿದೆ.
ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 554 ಮೀಟರ್/ 151.75 ಟಿಎಂಸಿ
ಇಂದಿನ ನೀರಿನ ಮಟ್ಟ: 542.87 ಮೀಟರ್ / 56.60 ಟಿಎಂಸಿ
ಒಳಹರಿವು: 0
ಹೊರಹರಿವು: 4998 ಕ್ಯೂಸೆಕ್ಸ್
ಸೂಪಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 564 ಮೀಟರ್/ 145.33 ಟಿಎಂಸಿ
ಇಂದಿನ ನೀರಿನ ಮಟ್ಟ: 540.80 ಮೀಟರ್ / 64.25 ಟಿಎಂಸಿ
ಒಳಹರಿವು: 0
ಹೊರಹರಿವು: 4061 ಕ್ಯೂಸೆಕ್ಸ್
ವಾರಾಹಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 594.36 ಮೀಟರ್/ 31.10 ಟಿಎಂಸಿ
ಇಂದಿನ ನೀರಿನ ಮಟ್ಟ: 582.25 ಮೀಟರ್ / 12.34 ಟಿಎಂಸಿ
ಒಳಹರಿವು: 0
ಹೊರಹರಿವು: 785 ಕ್ಯೂಸೆಕ್ಸ್
ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 2859.00 ಅಡಿ / 8.50 ಟಿಎಂಸಿ
ಇಂದಿನ ನೀರಿನ ಮಟ್ಟ: 2833.92 ಅಡಿ / 3.54 ಟಿಎಂಸಿ
ಒಳಹರಿವು: 115 ಕ್ಯೂಸೆಕ್ಸ್
ಹೊರಹರಿವು: 100 ಕ್ಯೂಸೆಕ್ಸ್
ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 2922 ಅಡಿ / 37.10 ಟಿಎಂಸಿ
ಇಂದಿನ ನೀರಿನ ಮಟ್ಟ: 2900.15 ಅಡಿ / 19.78 ಟಿಎಂಸಿ
ಒಳಹರಿವು: 159 ಕ್ಯೂಸೆಕ್ಸ್
ಹೊರಹರಿವು: 665 ಕ್ಯೂಸೆಕ್ಸ್
ಕೆಆರ್ ಎಸ್ ಜಲಾಶಯ
ಗರಿಷ್ಠ ನೀರಿನ ಮಟ್ಟ: 124.80 ಅಡಿ / 49.45ಟಿಎಂಸಿ
ಇಂದಿನ ನೀರಿನ ಮಟ್ಟ: 103.86 ಅಡಿ / 25.99 ಟಿಎಂಸಿ
ಒಳಹರಿವು: 159 ಕ್ಯೂಸೆಕ್ಸ್
ಹೊರಹರಿವು: 665 ಕ್ಯೂಸೆಕ್ಸ್
ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 2284 ಅಡಿ / 19.52 ಟಿಎಂಸಿ
ಇಂದಿನ ನೀರಿನ ಮಟ್ಟ: 2268.63 ಅಡಿ / 11.02 ಟಿಎಂಸಿ
ಒಳಹರಿವು: 80 ಕ್ಯೂಸೆಕ್ಸ್
ಹೊರಹರಿವು: 1200 ಕ್ಯೂಸೆಕ್ಸ್
ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2158 ಅಡಿ / 71.54 ಟಿಎಂಸಿ
ಇಂದಿನ ನೀರಿನ ಮಟ್ಟ: 2125.64 ಅಡಿ / 37.28 ಟಿಎಂಸಿ
ಒಳಹರಿವು: 128 ಕ್ಯೂಸೆಕ್ಸ್
ಹೊರಹರಿವು: 5220 ಕ್ಯೂಸೆಕ್ಸ್
ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 1633 ಅಡಿ / 105.79 ಟಿಎಂಸಿ
ಇಂದಿನ ನೀರಿನ ಮಟ್ಟ: 1584.86 ಅಡಿ / 7.23 ಟಿಎಂಸಿ
ಒಳಹರಿವು: 0
ಹೊರಹರಿವು: 4729 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2175 ಅಡಿ / 51.00 ಟಿಎಂಸಿ
ಇಂದಿನ ನೀರಿನ ಮಟ್ಟ: 2129.43 ಅಡಿ / 21.56 ಟಿಎಂಸಿ
ಒಳಹರಿವು: 0
ಹೊರಹರಿವು: 5598 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ : 2079.50 ಅಡಿ / 37.73 ಟಿಎಂಸಿ
ಇಂದಿನ ನೀರಿನ ಮಟ್ಟ: 2057.51 ಅಡಿ / 14.64 ಟಿಎಂಸಿ
ಒಳಹರಿವು: 0
ಹೊರಹರಿವು: 1194 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ : 519.60 ಮೀಟರ್ / 123.08 ಟಿಎಂಸಿ
ಇಂದಿನ ನೀರಿನ ಮಟ್ಟ: 510.14 ಮೀಟರ್ / 30.74 ಟಿಎಂಸಿ
ಒಳಹರಿವು: 0
ಹೊರಹರಿವು: 5875 ಕ್ಯೂಸೆಕ್ಸ್
ನಾರಾಯಣಪುರ ಜಲಾಶಯ
ಗರಿಷ್ಠ ನೀರಿನ ಮಟ್ಟ : 492.25 ಮೀಟರ್ / 33.31 ಟಿಎಂಸಿ
ಇಂದಿನ ನೀರಿನ ಮಟ್ಟ: 488.70 ಮೀಟರ್ / 19.37 ಟಿಎಂಸಿ
ಒಳಹರಿವು: 4539 ಕ್ಯೂಸೆಕ್ಸ್
ಹೊರಹರಿವು: 11074 ಕ್ಯೂಸೆಕ್ಸ್
ವಾಣಿ ವಿಲಾಸ ಸಾಗರ
ಗರಿಷ್ಠ ನೀರಿನ ಮಟ್ಟ : 2140 ಅಡಿ / 30.42 ಟಿಎಂಸಿ
ಇಂದಿನ ನೀರಿನ ಮಟ್ಟ: 2137.15 ಅಡಿ / 28.01 ಟಿಎಂಸಿ
ಒಳಹರಿವು: 0 ಕ್ಯೂಸೆಕ್ಸ್
ಹೊರಹರಿವು: 145 ಕ್ಯೂಸೆಕ್ಸ್












Click it and Unblock the Notifications