Karnataka Dam Water Level: ಸೈಕ್ಲೋನ್, ಭಾರೀ ಮಳೆ ಎಚ್ಚರಿಕೆ: ಹೆಚ್ಚಲಿದೆ ರಾಜ್ಯದ ಅಣೆಕಟ್ಟುಗಳ ಒಳಹರಿವು

ಬೆಂಗಳೂರು, ಡಿಸೆಂಬರ್ 12: ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಮತ್ತೆ ಮಬ್ಬು ವಾತಾವರಣ ಆವರಿಸಿದೆ. ಅರ್ಧ ರಾಜ್ಯಕ್ಕೆ ವಾಯುಭಾರ ಕುಸಿತ ಹಾಗೂ ಚಂಡಮಾರುತ ಪ್ರಭಾವ ಹೆಚ್ಚು ಬೀರುವ ಲಕ್ಷಣ ಇದೆ. ಇದರಿಂದ ದಕ್ಷಿಣ ಒಳನಾಡಿಗೆ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆ ಆಗುವ ಮುನ್ಸೂಚನೆ ಇದೆ. ಈಗಾಗಲೇ ಮೈದುಂಬಿಕೊಂಡಿದ್ದ ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಳ್ಳ, ಕೊಳ್ಳಗಳು, ಕೆರೆ ಕಟ್ಟೆಗಳು ಮತ್ತೆ ಉಕ್ಕಿ ಹರಿಯುವ ನಿರೀಕ್ಷೆ ಇದೆ. ಮುಖ್ಯವಾಗಿ ಹಿಂಗಾರು ಬಿತ್ತನೆ ಮಾಡಿದ ರೈತರಿಗೆ ಭಾರೀ ಮಳೆ ವರದಾನವಾಗಲಿದೆ.

ರಾಜ್ಯದಲ್ಲಿ ಮುಂಗಾರು ಸಮಯದಲ್ಲಿ ಅಬ್ಬರಿಸಿದ್ದ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿವೆ. ನಂತರ ಹಿಂಗಾರು ಮಳೆಯು ಅಷ್ಟಾಗಿ ನಿರಂತರವಾಗಿ ಸುರಿಯಲಿಲ್ಲ. ಹೀಗಾಗಿ ದೈನಂದಿನ ನೀರಿನ ಬಳಕೆ, ನೀರಾವರಿಗೆ ನದಿ, ಜಲಾಶಯಗಳ ಉಪಯೋಗದಿಂದ ಕೊಂಚ ಮಟ್ಟಿಗೆ ನೀರು ಖಾಲಿಯಾಗಿತ್ತು. ಇದೀಗ ನೀಡಲಾದ ಭಾರೀ ಮಳೆಯ ಮುನ್ಸೂಚನೆಯಿಂದಾಗಿ ರಾಜ್ಯದಲ್ಲಿ ಅಣೆಕಟ್ಟುಗಳು ಮತ್ತೆ ಮೈದುಂಬಿ ಹರಿಯಲಿವೆ.

Karnataka Dam Water Level Will Increase Soon Due to Heavy Rain by Cyclone Effect

ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣ ರಾಜ ಸಾಗರ (KRS Dam), ಹಾರಂಗಿ ನದಿಗೆ ಅಡ್ಡಲಾಗಿ ಕಟ್ಟಿರುವ ಹಾರಂಗಿ ಜಲಾಶಯ (Harangi Dam), ಹಾಸನದಲ್ಲಿ ಹೇಮಾವತಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಹೇಮಾವತಿ ಡ್ಯಾಂ (Hemavati Dam) ಹಾಗೂ ಕಬಿನಿ, ಭದ್ರಾ, ತುಂಗಭದ್ರಾ, ಮಲಪ್ರಭಾ ಹಾಗೂ ವಾಣಿವಿಲಾಸ ಅಣೆಕಟ್ಟುಗಳಲ್ಲಿ ಒಳಹರಿವು ಮುಂದಿನ ಮೂರು ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಎಂದಿನಂತೆ ಈ ಬಾರಿಯು ನದಿಗಳು ಮತ್ತು ಜಲಾಶಯಗಳು ತುಂಬಿಕೊಂಡಿವೆ. ಈ ಕಾರಣದಿಂದ ಮುಂದಿನ ಬೇಸಿಗೆಗೆ ರಾಜ್ಯದ ಯಾವ ಭಾಗದಲ್ಲೂ ನೀರಿಗೆ ಹಾಹಾಕಾರ ಇರದು ಎಂದು ಅಂದಾಜಿಸಲಾಗಿದೆ. ಸಾಕಷ್ಟು ಪ್ರಮಾಣದ ನೀರು ಈಗಾಗಲೇ ಶೇಖರಣೆ ಆಗಿದೆ.

ಕಳೆದ ಒಂದೆರಡು ತಿಂಗಳಿಂದ ದಾಖಲೆಯ ಮಳೆ ಆಗಿಲ್ಲ. ಈ ವೇಳೆ ಜಲಾಶಯಗಳು ಹಾಗೂ ನದಿಗಳಲ್ಲಿನ ನೀರು ಬಳಕೆಯಿಂಗಿ ಖಾಲಿಯಾಗಿದ್ದ ಪ್ರಮಾಣ ಈ ಮೂರು ದಿನಗಳ ಮಳೆಯಿಂದ ತುಂಬುವ ಸಾಧ್ಯತೆ ಇದೆ.

Karnataka Dam Water Level Will Increase Soon Due to Heavy Rain by Cyclone Effect

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಸದ್ಯಕ್ಕೆ ಎಷ್ಟಿದೆ. ಡಿಸೆಂಬರ್ 11ರಂದು ಜಲಾಶಯಗಳ ನೀರಿನ ಮಟ್ಟದ ವಿವರ, ಪಟ್ಟಿ ಇಲ್ಲಿದೆ.

ಕಬಿನಿ ಡ್ಯಾಂ ನೀರಿನ ಮಟ್ಟ ಎಷ್ಟಿದೆ

ಒಟ್ಟು ನೀರಿನ ಸಾಮರ್ಥ್ಯ: 19.52 ಟಿಎಂಸಿ

ಇಂದಿನ ಪ್ರಮಾಣ : 17.26 ಟಿಎಂಸಿ

ಡ್ಯಾಂ ಒಳಹರಿವು : 1153 ಕ್ಯೂಸೆಕ್ಸ್

ಡ್ಯಾಂ ಹೊರ ಹರಿವು: 875 ಕ್ಯೂಸೆಕ್ಸ್

ಹಾರಂಗಿ ಜಲಾಶಯದ ವಿವರ

ಒಟ್ಟು ನೀರಿನ ಸಾಮರ್ಥ್ಯ: 8.50 ಟಿಎಂಸಿ

ಇಂದಿನ ಪ್ರಮಾಣ : 3.78 ಟಿಎಂಸಿ

ಡ್ಯಾಂ ಒಳಹರಿವು : 500 ಕ್ಯೂಸೆಕ್ಸ್

ಡ್ಯಾಂ ಹೊರ ಹರಿವು: 662 ಕ್ಯೂಸೆಕ್ಸ್

ಕೆಆರ್‌ಎಸ್ ಜಲಾಶಯದ ಮಾಹಿತಿ

ಒಟ್ಟು ನೀರಿನ ಸಾಮರ್ಥ್ಯ: 49.46 ಟಿಎಂಸಿ

ಇಂದಿನ ಪ್ರಮಾಣ : 49.44 ಟಿಎಂಸಿ

ಡ್ಯಾಂ ಒಳಹರಿವು : 5245 ಕ್ಯೂಸೆಕ್ಸ್

ಡ್ಯಾಂ ಹೊರ ಹರಿವು: 4444 ಕ್ಯೂಸೆಕ್ಸ್

ಹೇಮಾವತಿ ಜಲಾಶಯ ಇಂದಿನ ವಿವರ

ಒಟ್ಟು ನೀರಿನ ಸಾಮರ್ಥ್ಯ: 37.10ಟಿಎಂಸಿ

ಇಂದಿನ ಪ್ರಮಾಣ : 26.58 ಟಿಎಂಸಿ

ಡ್ಯಾಂ ಒಳಹರಿವು : 1179 ಕ್ಯೂಸೆಕ್ಸ್

ಡ್ಯಾಂ ಹೊರ ಹರಿವು: 4120 ಕ್ಯೂಸೆಕ್ಸ್

ತುಂಗಭದ್ರಾ ಡ್ಯಾಂ ನೀರಿನ ಮಟ್ಟ ಎಷ್ಟಿದೆ

ಒಟ್ಟು ನೀರಿನ ಸಾಮರ್ಥ್ಯ: 105.79 ಟಿಎಂಸಿ

ಇಂದಿನ ಪ್ರಮಾಣ : 91.87 ಟಿಎಂಸಿ

ಡ್ಯಾಂ ಒಳಹರಿವು : 3624 ಕ್ಯೂಸೆಕ್ಸ್

ಡ್ಯಾಂ ಹೊರ ಹರಿವು: 5342 ಕ್ಯೂಸೆಕ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+